ಶಿವಮೊಗ್ಗ,ಏ.೦೩: ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನೇಮಕವಾದ ಆರ್. ಪ್ರಸನ್ನಕುಮಾರ್ ಇಂದು ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ರವರು ಕಾಂಗ್ರೆಸ್ ಧ್ವಜವನ್ನು ನೀಡಿ, ಹೂಗುಚ್ಛ ಕೊಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ಪ್ರಸನ್ನಕುಮಾರ್, ಈ ಹುದ್ದೆಯನ್ನು ನೀಡಿದ ಕೆಪಿಸಿಸಿಯ ಅಧ್ಯಕ್ಷರು, ಮುಖ್ಯಮಂತ್ರಿ ಎ.ಸಿ.ಸಿ.ಅಧ್ಯಕ್ಷರಿಗೆ ಅಭಿನಂದನೆಗಳು, ನಾನು ಕಳೆದ ೧೦ ವರ್ಷ ಅಧ್ಯಕ್ಷನಾಗಿದ್ದೆ ಈ ಎಲ್ಲರ ಸಹಕಾರದಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟನೆ ಮಾಡುತ್ತೇನೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೀತಾರವರನ್ನು
ಗೆಲ್ಲಿಸಲು ನಾವೆಲ್ಲರೂ ಹಗರಲಿರುಳು ಶ್ರಮ ಪಡೋಣ. ಜನರ ಬಳಿ ಹೋಗೋಣ ರಾಹುಲ್ ಅವರ ಘೋಷವಾಕ್ಯದಂತೆ ನನ್ನ ಬೂತ್, ನನ್ನ ಜವಬ್ದಾರಿ ಎಂದು ನಡೆದುಕೊಳ್ಳೋಣ ಎಂದರು.
ಮಾಜಿ ಜಿಲ್ಲಾಧ್ಯಕ್ಷ ಹಾಗೂ ಹಾಲಿ ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ನನ್ನ ಜವಬ್ದಾರಿಯನ್ನು ಪ್ರಮಾಣಿಕವಾಗಿ ನಿರ್ವಹಿಸಿದ್ದೇನೆ ಎಂಬ ತೃಪ್ತಿಇದೆ. ಅತ್ಯಂತ ಕಷ್ಟಕಾಲದಲ್ಲಿ ನನಗೆ ಈ ಹುದ್ದೆ ಸಿಕ್ಕಿತ್ತು. ಬಿಜೆಪಿಯ ವಿರುದ್ಧ ಹೋರಾಟ ಮಾಡುವುದು ಅಷ್ಟು ಸುಲಭವೂ ಆಗಿರಲಿಲ್ಲ. ಆದರೆ ಅದನ್ನೆಲ್ಲ ಎದುರಿಸಿದ್ದೇನೆ. ಹಲವು ಬಾರಿ ನಿಷ್ಟೂರವಾಗಿ ನಡೆದಿದ್ದೇನೆ.
ಸೂಡಾ ಅಧ್ಯಕ್ಷನಾಗಿದ್ದರಿಂದ ಈ ಹುದ್ದೆಯಿಂದ ನಿರ್ಗಮಿಸುತ್ತಿದ್ದೇನೆ. ನನ್ನೊಂದಿಗೆ ಸಹಕರಿಸಿದ ಎಲ್ಲಾ ಘಟಕಗಳ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ನನ್ನ ಕೃತಜ್ಞತೆಗಳು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರಮೇಶ್, ನಾಗರಾಜ್ ಗೌಡ, ದಕ್ಷಿಣ ಬ್ಲಾಕ್ ವಿಭಾಗದ ಅಧ್ಯಕ್ಷ ಕಲೀಂ ಪಾಶ, ಎಸ್.ಪಿ.ದಿನೇಶ್, ಮಧು, ಸೇರಿದಂತೆ ಹಲವರಿದ್ದರು.