ಶಿವಮೊಗ್ಗ: ಬಿ.ವೈ. ರಾಘವೇಂದ್ರ ಅವರದು ’ಕುಲಘಾತುಕ’ ಸಂಸ್ಕೃತಿ ಎಂದು ಕೆಪಿಸಿಸಿ ವಕ್ತಾರ ಹಾಗೂ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ವಾಗ್ದಾಳಿ ನಡೆಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಘವೇಂದ್ರ ಅವರು ಮಧು ಬಂಗಾರಪ್ಪ ಅವರಿಗೆ ಸಂಸ್ಕೃತಿಯೇ ಇಲ್ಲ ಎಂದು ಟೀಕಿಸಿದ್ದಾರೆ. ಇವರಿಗೆ ಯಾವ ಸಂಸ್ಕೃತಿ ಇದೆ. ಈಶ್ವರಪ್ಪ ಅವರು ಯಡಿಯೂರಪ್ಪನವರ ಬಗ್ಗೆ ಅಶ್ಲೀಲ ಅಪಾರ್ಥವಾಗಿ ಮಾತನಾಡಿದ್ದರೂ ಕೂಡ ಅವರ ಚಾರಿತ್ರ್ಯವಧೆ ಮಾಡಿದ್ದರೂ ಕೂಡ ತಂದೆಗೆ ಆದ ಅವಮಾನವನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಂಡ ರಾಘವೇಂದ್ರ ಅವರದ್ದು ಯಾವ ಸಂಸ್ಕೃತಿ ಎಂದು ಪ್ರಶ್ನೆ ಮಾಡಿದರು.


ಬಿ.ಎಸ್. ಯಡಿಯೂರಪ್ಪನವನ್ನು ಅಧಿಕಾರದಿಂದ ಇಳಿಸಿದಾಗ ಇಡೀ ರಾಜ್ಯ ಕಣ್ಣೀರು ಹಾಕುತ್ತಿರುವಾಗ ಇವರೇನು ಮಾಡಿದರು. ನಮ್ಮ ಪೂಜ್ಯ ತಂದೆಯವರು ಎಂದು ಕರೆಯುವ ಇವರು ಬಿಜೆಪಿಯಲ್ಲಿ ಎಂಪಿಯಾಗಿದ್ದರೂ ಕೂಡ ಕೆಜೆಪಿಗೆ ಬೆಂಬಲ ಎಂದು ಅಧಿಕಾರಕ್ಕಾಗಿ ಅಅಂಟಿಕೊಂಡವರು. ಇವರದು ಯಾವ ಸಂಸ್ಕೃತಿ ಎಂದರು.


ತಂದೆ ಯಡಿಯೂರಪ್ಪ ಜೈಲಿಗೆ ಹೋಗಲು ಕಾರಣ ಯಾರು? ಚೆಕ್ ನಲ್ಲಿ ಹಣ ತೆಗೆದುಕೊಂಡು ಚೋಟಾ ಸಹಿ ಹಾಕಿದವರು ಯಾರು? ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದ ಕುಲಘಾತುಕರು ಇವರು. ಇವರದು ಯಾವ ಸಂಸ್ಕೃತಿ. ಯಾವ ಸಂತಾನ ಎಂದು ವಾಗ್ದಾಳಿ ನಡೆಸಿದರು.
ಚೇಲಾ ಎಂದು ಮಧು ಬಂಗಾರಪ್ಪ ಅವರು ಹೇಳಿದ್ದಾರೆ ಎಂದು ರಾಘವೇಂದ್ರ ಆರೋಪ ಮಾಡಿದ್ದಾರೆ. ಅವರು ಸಂಸದರು. ಅವರು ಇಷ್ಟು ಹೊತ್ತಿಗೆ ಹಿಂದಿ ಭಾಷೆ ಕಲಿಯಬೇಕಿತ್ತು. ಚೇಲಾ ಎಂದರೆ ಹಿಂದಿಯಲ್ಲಿ ಶಿಷ್ಯರು ಎಂದು ಅರ್ಥ. ಇದೇಕೆ ಇವರು ಅಪಾರ್ಥ ಮಾಡಿಕೊಂಡರೋ ಗೊತ್ತಿಲ್ಲ. ಹಾಗೆಯೇ ಭ್ರಷ್ಟಾಚಾರದ ದುಡ್ಡಿಗೆ ಸಾಮಾನ್ಯವಾಗಿ ಮತ್ತು ಗ್ರಾಮೀಣವಾಗಿ ಹಡಬೆ ದುಡ್ಡು ಎಂದು ಸ್ವಾಭಾವಿಕವಾಗಿ ಕರೆಯುತ್ತೇವೆ.

ಅದನ್ನೇ ಇಟ್ಟುಕೊಂಡು ತಂದೆಯವರನ್ನೇ ಜೈಲಿಗೆ ಕಳಿಸದರಲ್ಲ. ಮಧು ಬಂಗಾರಪ್ಪನವರನ್ನು ಕೆಣಕುವ ಮೊದಲು ಅವರದೇ ಪಕ್ಷದ ಈಶ್ವರಪ್ಪನವರ ಮಾತುಗಳಿಗೆ ಉತ್ತರ ಕೊಡಲಿ ಎಂದು ಕಿಚಾಯಿಸಿದರು.
ಬಂಗಾರಪ್ಪನವರ ಸಾಧನೆ ಬಗ್ಗೆ ಅವರು ಮಾತನಾಡುವುದು ತರವಲ್ಲ. ಪಂಪ್ ಸೆಟ್ ಕರೆಂಟ್ ಕೊಟ್ಟಿದ್ದು ಬಂಗಾರಪ್ಪನವರೇ. ನಾವು ಕೊಟ್ಟಿದ್ದು ಎಂದು ಹೇಳುವುದೇಕೆ. ಮುಂದುವರೆಸಿದ್ದೇವೆ ಎನ್ನಲಿ. ಹಾಗೆಯೇ ವಿಮಾನ ನಿಲ್ದಾಣ ಸ್ಥಾಪನೆ. ರಸ್ತೆಗಳ ಅಭಿವೃದ್ಧಿ ಇವೆಲ್ಲವೂ ಕಾಂಗ್ರೆಸ್ ಆಡಳಿತದ ಕಾಲದಲ್ಲಿಯೂ ನಡೆದಿದ್ದವು. ಇವರ ರಸ್ತೆಗಳು, ರಿಂಗ್ ರೋಡ್, ಬೈಪಾಸ್ ರಸ್ತೆಗಳು ಎಲ್ಲಿಗೆ ಹೋಗಿ ಎಲ್ಲಿ ಸೇರಿವೆ. ಏಕೆ

ಎಂದು ಅವರೇ ಉತ್ತರ ಹೇಳಲಿ. ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರು ಬಹಿರಂಗ ಚರ್ಚೆಗೆ ಕರೆದಿದ್ದಾರೆ. ಚರ್ಚೆಗೆ ಬರುವಷ್ಟು ಪುರುಸೊತ್ತು ಅವರಿಗೆ ಇದೆಯಾ? ನಾವಂತೂ ರೆಡಿ ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಎಸ್.ಕೆ. ಮರಿಯಪ್ಪ, ಕಲಗೋಡು ರತ್ನಾಕರ್ ಜಿ.ಡಿ. ಮಂಜುನಾಥ್, ಕಲೀಂ ಪಾಶ, ಇಕ್ಕೇರಿ ರಮೇಶ್, ಶಾಂತವೀರ ನಾಯ್ಕ್, ಜಿ. ಪದ್ಮನಾಭ್, ಶಿ.ಜು. ಪಾಶ, ಶಿವಾನಂದ್, ಹಿರಣ್ಣಯ್ಯ ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!