ಶಿವಮೊಗ್ಗ, ಮಾ.24:
ಧರ್ಮದ ಹೆಸರಿನಲ್ಲಿ ಮತ ಕೇಳುತ್ತಾ ಮಠಮಾನ್ಯಗಳ ಗುರುಗಳನ್ನು ತಮಗೆ ಆಶೀರ್ವದಿಸಿ ಎಂದು ಬೇಡುತ್ತಾ ಇರುವಂತಹ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಕೆಎಸ್ ಈಶ್ವರಪ್ಪ ಹಾಗೂ ಬಿ ವೈ ರಾಘವೇಂದ್ರ ಅವರ ವಿರುದ್ಧ ಜಿಲ್ಲಾ ಚುನಾವಣಾ ಆಯೋಗ ಕೂಡಲೇ ದೂರು ದಾಖಲಿಸಬೇಕು ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಇಂದಿಲ್ಲಿ ಒತ್ತಾಯಿಸಿದರು.
ಅವರಿಂದು ಬೆಳಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಹಿಂದುತ್ವದ ಹೆಸರಿನಲ್ಲಿ ಹಿಂದುತ್ವವನ್ನು ದುರ್ಲಾಭ ಮಾಡಿಕೊಂಡು ಓಟು ಕೇಳುತ್ತಿರುವ ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಅವರು ಜಾತಿ ಮತ ಧರ್ಮ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಇನ್ನೂ ಗಮನಹರಿಸಿದಿರುವುದು ನೋವಿನ ಸಂಗತಿ. ಕೂಡಲೇ ದೂರು ದಾಖಲಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.


ಈಶ್ವರಪ್ಪನವರು ಧರ್ಮದ ಹೆಸರಿನಲ್ಲಿ ಜನರನ್ನು ಉದ್ರೇಕಗೊಳಿಸಿ ಮನೆಯಲ್ಲಿ ಕುಳಿತುಕೊಳ್ಳುವ ಸ್ವಭಾವದವರು. ಅವರಲ್ಲಿ ಹಿಂದೂತ್ವನೂ ಇಲ್ಲ ಏನೂ ಇಲ್ಲ. ಅವರ ಕೊಡುಗೆ ಹಿಂದುತ್ವಕ್ಕೆ ಏನು ಮಾಡಿದ್ದಾರೆ. ಹೋಮ ಹವನ ಬಿಟ್ಟರೆ ಏನು ಮಾಡಿಲ್ಲ ಎಂದು ದೂರಿದರು.
ಧರ್ಮದ ಆಧಾರದ ಮೇಲೆ ಮತಯಾಚಿಸುತ್ತಿರುವ ಈಶ್ವರಪ್ಪನವರ ವಿರುದ್ಧ ದೂರು ದಾಖಲಾಗಬೇಕಿತ್ತು. ಅವರ ಮೇಲೆ ಮಾತ್ರ ಅಲ್ಲ ಅವರ ಹಾಗೂ ಧರ್ಮದ ಪರವಾಗಿ ಮಾತನಾಡಿರುವ ಸ್ವಾಮೀಜಿಗಳ ಮೇಲೂ ನೀತಿ ಸಂಹಿತೆ ಜಾರಿಯಾಗಬೇಕಿತ್ತು. ಧರ್ಮದ ಆಧಾರದ ಮೇಲೆ ಮತಯಾಚಿಸಿದ್ದಾರೆ. ಕೂಡಲೇ ಚುನಾವಣೆ ಆಯೋಗ ಈಶ್ವರಪ್ಪ ಮತ್ತು ಬಿವೈಆರ್ ವಿರುದ್ಧವೂ ದೂರು ದಾಖಲಿಸಬೇಕು ಎಂದರು.

ಈಶ್ವರಪ್ಪ ಬಿಜೆಪಿ ಬಂಡಾಯದ ಡೆಮ್ಮಿ ಕ್ಯಾಂಡಿಡೇಟ್!

ಬಿಜೆಪಿಯ ಬಂಡಾಯದ ಡಮ್ಮಿ ಕ್ಯಾಂಡಿಡೇಟ್ ಆಗಿ ಈಶ್ವರಪ್ಪ ಸ್ಪರ್ಧಿಸುತ್ತಿದ್ದಾರೆ ಎಂದು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.
ಈಶ್ವರಪ್ಪನವರ ಬೆನ್ನಿಗೆ ನಾನು ನಿಂತ ಕಾರಣ ಪುರಲೆಯಲ್ಲಿ 1½ ಸಾವಿರ ಮತ ಬಂದಿದ್ದವು. 1989 ರಲ್ಲಿ ಅವರಿಗೆ ಲಿಂಗಾಯಿತ ಮುಖವಾಡ ಹಾಕಿದ್ದರಿಂದ ಮತ ಬಂದಿದೆ ಎಂದು ಹಿಂದಿನ ನೆನಪು ಹೇಳಿದರು.


ಈಶ್ವರಪ್ಪನವರನ್ನ ಸ್ಪರ್ಧಿಸುವ ಮೂಲಕ ಬಿವೈ ರಾಘವೇಂದ್ರರನ್ನ ಗೆಲ್ಲಿಸುವ ಒಳ ಒಪ್ಪಂದವಿದೆ. ಅವರೇ ಒಪ್ಪಿಕೊಂಡಂತೆ ಚುನಾವಣೆಯ ನಂತರ ಈಶ್ವರಪ್ಪನವರನ್ನ ರಾಜ್ಯಪಾಲರನ್ನಾಗಿಸುವ ಮತ್ತು ಪುತ್ರ ಕಾಂತೇಶ್ ಗೆ ಎಂಎಲ್ ಸಿ ಸ್ಥಾನ ಸಿಗಲಿದೆ ಎಂದು ದೂರಿದರು.
ಬಿಜೆಪಿ ಮುಂದುವರೆದಿರುವ ಜಾತಿಗಳ ಮತ ಪಡೆದು ಹಿಂದುಳಿದ ಜಾತಿ ಮತಗಳನ್ನು ಒಡೆಯುವ ತಂತ್ರ ಇದರಲ್ಲಿದೆ. ಮಾಡದೆ ಇದ್ದರೆ ಐಟಿ ಅಧಿಕಾರಿಗಳು ಅವರ ಮನೆಯಲ್ಲಿರ್ತಾರೆ ಎಂಬ ಬೆದರಿಕೆಯೂ ಸಹ ಹಾಕಿದ್ದಾರೆ ಎಂದು ಬಾಂಬ್ ಸಿಡಿಸಿದರು.
ಧೈರ್ಯ ಮಾಡುವ ಸ್ವಭಾವ ಈಶ್ವರಪ್ಪನವರದ್ದು ಅಲ್ಲ. ಆದರೂ ಹಠ ಹಿಡಿದಿದ್ದಾರೆ. ಎಕ್ಸಟ್ರಾ ಬ್ಯಾಟರಿ ಹೇಗೆ ಬಂತು ಎಂಬುದಕ್ಕೆ ಈ ಒಳ ಒಪ್ಪಂದ ಕಾರಣವಾಗಿದೆ. ಜಿಲ್ಲೆಯ ಜಾಗೃತ ಜನ ಬಿಜೆಪಿ ಅಭ್ಯರ್ಥಿ ಮತ್ತು ಈಶ್ವರಪ್ಪನವರನ್ನ ತಿರಸ್ಕರಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಅವರನ್ನ ಗೆಲ್ಲಿಸಲಿದ್ದಾರೆ ಎಂದರು.


ಉದಾತ ಹೋರಾಟಗಾರ, ದಿಟ್ಟ ರಾಜಕಾರಣಿ ಬಂಗಾರಪ್ಪನವರು ಮತ್ತು ಅವರ ಕುಟುಂಬದವರು ಹೊಂದಾಣಿಕೆ ಮಾಡಿಕೊಳ್ಳುವವರಲ್ಲ. 40% ಆರೋಪ ಎದುರಿಸಿದ ಈಶ್ವರಪ್ಪನವರಿಗೆ ಐಟಿ ಇಡಿ ದಾಳಿಯ ಬೆದರಿಕೆ ಇದೆ. ಹಾಗಾಗಿ ಈಶ್ವರಪ್ಪನವರು ಸ್ಪರ್ಧೆ ಖಚಿತವಾಗಿದೆ ಎಂದರು.
ಯಡಿಯೂರಪ್ಪನವರನ್ನ ವಿರೋಧಿಸುವ ಒಂದಿಷ್ಟು ಜನ ಇದ್ದಾರೆ. ಬಿಜೆಪಿಯ ಟಾರ್ಗೆಟ್ ಬಿಎಸ್ ವೈ ಮತ್ತು ಪುತ್ರ ವಿಜೇಂದ್ರ ಇರಬಾರದು ಎಂಬ ಉದ್ದೇಶದಿಂದ ಸ್ಪರ್ಧೆ ಆಗ್ತಾ‌ ಇದೆ. ಈಶ್ವರಪ್ಪನವರನ್ನ ಛೂ ಬಿಡಲಾಗಿದೆ ಎಂದು ದೂರಿದರು.
ತಂಡೋಪ ತಂಡವಾಗಿ ಸ್ವಾಮೀಜಿ ಬಳಿ ಹೋಗಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ. ಕೇವಲ ಆಶೀರ್ವಚನ ಪಡೆದುಕೊಂಡು ಬಂದರೆ ಏನೂ ಆಗೊಲ್ಲ ಎಂದ ಆಯನೂರು ಅಂತೂ ಇಂತೂ ರಾಜಕೀಯ ಪೌರುಷವನ್ನ ಈಶ್ವರಪ್ಪ ಪ್ರದರ್ಶಿಸುತ್ತಿದ್ದಾರೆ. ನನಗೆ ಚಿಂತೆ ಆಗಿದೆ. ನನ್ನ ಓಟು ಅವರಿಗೆ ಹೋಗುತ್ತಲ್ಲಾ ಎಂಬ ಚಿಂತೆ ಆರಂಭವಾಗಿದೆ ಎಂದು ಲೇವಡಿ ಮಾಡಿದರು.


ನಾವು ಒಂದೇ ಗರಡಿಯಲ್ಲಿ ಬೆಳೆದವರು, ಅವರ ಮುಖವಾಡದ ಪಟ್ಟು ಗೊತ್ತಾಗಿದೆ. ಅವರ ಕೋರ್ ಕಮಿಟಿಯ ಮಾಹಿತಿ ನನ್ನ ಬಳಿ ಇದೆ. ಅವರನ್ನ ರಾಜಕೀಯ ಹೇಡಿ ಎಂದುಕೊಂಡಿದ್ದೆ. ಧೀರರಾಗಿ ರಾಜಕಾರಣ‌ ಮಾಡಲಿ ಎಂದು ಆಶಿಸಿದರು. ನಾನು ಅವರಿಗೆ ಮತಹಾಕುವುದಾಗಿ ಹೇಳಿದರು.
ಬಿಜೆಪಿಯ ಯಾವ ನಾಯಕರು ಈಶ್ವರಪ್ಪನವರ ವಿರುದ್ಧ ಮಾತನಾಡಿಲ್ಲ. ರಾಜಕೀಯ ದಾಳವಾಗಿ ಈಶ್ವರಪ್ಪನವರನ್ನ ಬಿಜೆಪಿ ಬಳಸಿಕೊಂಡಿದ್ದು, ಸ್ಪಾನ್ಸರ್ ಆಗಿ ಅವರನ್ನ ಸ್ಪರ್ಧೆಗೆ ಕಣಕಿಳಿಸಲಾಗಿದೆ ಎಂದು ದೂರಿದರು.
ಅವರು ರಾಜ್ಯಪಾಲರಾದರೆ ಸಂವಿಧಾನ ಉಳಿಯುತ್ತಾ? ಸಂವಿಧಾನಕ್ಕೆ ಅಪಾಯವಾಗುವುದು ಖಚಿತ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ನೇತ್ರಾವತಿ, ವೈ.ಹೆಚ್ ನಾಗರಾಜ್ , ಶಿ. ಜು. ಪಾಶಾ, ಜಿ ಪದ್ಮನಾಬ್, ಕೃಷ್ಣ ಹಾಗೂ ಇತರರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!