ಶಿವಮೊಗ್ಗ,ಮಾ.೧೧: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದ್ದು, ಘೋಷಿತ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲುವು ನಿಶ್ಚಿತವೆಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಜೆಡಿಎಸ್ ನಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಮಾಡಿದ್ದರು. ನಾನೂ ಕೂಡ ಸ್ಪರ್ಧೆ ಮಾಡಿದ್ದೆ. ಆದರೆ ವಾತಾವರಣ ಪೂರಕವಾಗಿರಲಿಲ್ಲ. ಆದರೂ ಸಾಕಷ್ಟು ಮತಗಳು ಬಂದಿದ್ದವು. ಆದರೆ ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿರುವುದರಿಂದ ಗೆಲುವು ಸಾಧ್ಯವಾಗಲಿದೆ ಎಂದರು.
ಜನರಿಗೆ ನೀಡುತ್ತಿರುವ ಗ್ಯಾರಂಟಿಗಳಿಂದಾಗಿ ವಾತಾವರಣ ಚೆನ್ನಾಗಿದೆ. ಅನೇಕರು ಸ್ವಯಂಪ್ರೇರಿತರಾಗಿ ಪ್ರಚಾರಕ್ಕೆ ಬರುವುದಾಗಿ ಹೇಳುತ್ತಿದ್ದಾರೆ. ಆಯಾಯ ಕ್ಷೇತ್ರಗಳಲ್ಲಿ ಶಾಸಕರು ಹಾಗೂ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ಜವಾಬ್ದಾರಿ ನೀಡಲಾಗುತ್ತದೆ ಎಂದರು.
ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಟೀಕೆ ಟಿಪ್ಪಣಿಗಳಿಗೆಲ್ಲ ಮನ್ನಣೆ ನೀಡುವುದಿಲ್ಲ. ಸಾಮಾಜಿಕ ಜಾಲತಾಣಗಳನ್ನು ನಂಬಿಕೊಂಡು ಚುನಾವಣೆ ಮಾಡಲು ಆಗೋಲ್ಲ. ರಾಘವೇಂದ್ರ ಮೊದಲು ಗೆದ್ದಾಗ ಏನು ಕಡಿದುಕಟ್ಟೆ ಹಾಕಿದ್ದರು. ಜಾಲತಾಣಗಳಲ್ಲಿ ಹರಿದಾಡುವುದನ್ನು ಕಸದ ಬುಟ್ಟಿಗೆ ಹಾಕಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ನೀಡಿದ ಗ್ಯಾರಂಟಿಗಳಿಂದಾಗಿ ಕರ್ನಾಟಕ ಸರ್ಕಾರ ದಿವಾಳಿ ಆಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.ಈಗ ಮೋದಿ ಗ್ಯಾರಂಟಿಗಳಿಂದ ದೇಶ ದಿವಾಳಿ ಆಗಲ್ವ ಎಂದು ಪ್ರಶ್ನಿಸಿದ ಅವರು, ಮುಂದಿನ ದಿನಗಳಲ್ಲಿ ಗೀತಾ ಶಿವರಾಜ್ ಕುಮಾರ್ ಜನರಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಗೆಲವು ನಮ್ಮದೇ ಎಂದರು.
ರಾಗಿ ಗುಡ್ಡದ ಘಟನೆ ಹದ್ದುಬಸ್ತಿಗೆ ತಂದಿದ್ದೇವೆ. ಇಂತಹ ಘಟನೆಗಳನ್ನೇ ಬಿಜೆಪಿಯವರು ಹುಡುಕುತ್ತಿದ್ದಾರೆ. ಶರಾವತಿ ಸಂತ್ರಸ್ಥರಿಗೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ಮಾಡಲು ಸಾಧ್ಯವಾಗಲಿಲ್ಲ. ಈಗ ಸಂಸದರು ಡಿಜಿಟಲ್ ಬ್ಯಾನರ್ ಹಾಕಿಕೊಂಡಿದ್ದಾರೆ. ಕೇಂದ್ರದ ಯೋಜನೆಗಳಿಗೆ ರಾಜ್ಯದ ಹಣವೂ ಇಲ್ಲವೆ ? ಮುಂದಿನ ದಿನಗಳಲ್ಲಿ ಗೀತಾ ಶಿವರಾಜ್ ಕುಮಾರ್ ಈ ಜಿಲ್ಲೆಯ ಜನರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಗೀತಾ ಮಾತ್ರ ಅಭ್ಯರ್ಥಿಯಲ್ಲ. ನಾವೆಲ್ಲಾ ಅಭ್ಯರ್ಥಿಗಳೇ ಎಂದು ಭಾವಿಸಿ ಹಬ್ಬದ ರೀತಿಯಲ್ಲಿ ಚುನಾವಣೆ ನಡೆಸಲಾಗುತ್ತದೆ ಎಂದರು.
ಜೆಡಿಎಸ್ ಹಾಗೂ ಬಿಜೆಪಿಗೂ ಹೊಡೆತ ಬೀಳಲಿದೆ ಹೊಂದಾಣಿಕೆಯಿಂದ. ಇದು ಈಗಾಗಲೇ ನಮಗೆ ಗೊತ್ತಾಗಿದೆ. ಗ್ಯಾರಂಟಿಗಳಿಂದ ಸೋಮಾರಿ ಆಗುತ್ತಾರೆಂದು ಹೇಳಿದ್ದರು.ಜನ ಯಾರೂ ಸೋಮಾರಿಗಳಾಗಿಲ್ಲ.
ಅನಂತಕುಮಾರ್ ಹೆಗಡೆ ಹುಚ್ಚ ಆತನ ಬಗ್ಗೆ ಏನೂ ಹೇಳೋಲ್ಲ. ಸಾಮಾಜಿಕ ಜಾಲತಾಣಗಳನ್ನು ಬಿಡ್ರಿ ಅದನ್ನು ನಂಬಿಕೊಂಡು ಚುನಾವಣೆ ಮಾಡಲು ಆಗೋಲ್ಲ. ರಾಘವೇಂದ್ರ ಮೊದಲು ಗೆದ್ದಾಗ ಏನು ಕಡಿದುಕಟ್ಟೆ ಹಾಕಿದ್ದರು. ಹರಿದಾಡುವುದು ಓಡಾಡುವುದನ್ನು ಕಸದ ಬುಟ್ಟಿಗೆ ಹಾಕಿ. ಚೋಟ ಮೋಟಾ ಸಹಿ ಮಾಡಿದವರು ಯಾರು? ಈಗ ಅವರೆಲ್ಲ ಬಾಯಿ ಮುಚ್ಚಿಕೊಂಡಿದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಎಂ. ಮಂಜುನಾಥ ಗೌಡ, ರಮೇಶ ಶಂಕರಘಟ್ಟ, ಜಿ.ಡಿ.ಮಂಜುನಾಥ್, ಎಚ್.ಸಿ. ಯೋಗೀಶ್, ಎನ್.ಪಿ. ಧರ್ಮರಾಜ್, ಎಸ್.ಕೆ.ಮರಿಯಪ್ಪ, ರಮೇಶ್, ವಿಜಯ್‌ಕುಮಾರ್ ಮತ್ತಿತರರು ಇದ್ದರು.