ಶಿವಮೊಗ್ಗ,ಡಿ.30: 
ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಬಂದ ನಾಲ್ವರಿಗೆ ರೂಪಾಂತರಗೊಂಡ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ನಿಖರ ಮೂಲಗಳು ಹೇಳಿವೆ.
ಶಿವಮೊಗ್ಗದ ಕೋವಿಡ್ ಮೆಗ್ಗಾನ್ ಅಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತದೆ.
ಬ್ರಿಟನ್‌ನಿಂದ ಬಂದ ಒಂದೇ ಕುಟುಂಬದ ನಾಲ್ವರು ಅಂದರೆ ಪತಿ ಪತ್ನಿ ಮತ್ತು ಇಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡಿರುವುದು ಶಿವಮೊಗ್ಗ ನಗರದಲ್ಲಿ ಆತಂಕ ಸೃಷ್ಟಿಸಿದೆ.
ಪತಿ (40), ಪತ್ನಿ (35), 7 ಮತ್ತು 9 ವರ್ಷ ದ ಇಬ್ಬರು ಮಕ್ಕಳಿಗೂ ವೈರಸ್ ತಗುಲಿರುವುದು ದೃಢಪಟ್ಟಿದೆ.
ರಾಜ್ಯಕ್ಕೆ ಅದರಲ್ಲೂ ಶಿವಮೊಗ್ಗ ಜಿಲ್ಲೆಗೆ ಕಾಲಿಟ್ಟ ಬ್ರಿಟನ್ ವೈರಸ್ !
ಕಳೆದೊಂದು ವಾರ ದಿಂದ ಮೆಗ್ಗಾನ್ ಅಸ್ಪತ್ರೆಯಲ್ಲಿ ಈ ನಾಲ್ವರನ್ನು ದಾಖಲು ಮಾಡಿಕೊಂಡು ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಮೊಗ್ಗಕ್ಕೆ ರೂಪಾಂತರ ಕೊರೋನಾ ವೈರಸ್ ಬಂದಿರುವುದನ್ನು ಜಿಲ್ಲಾಡಳಿತ ದೃಢಪಡಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ ರಾಜೇಶ್ ಸುರಗಿಹಳ್ಳಿ ಯವರು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗದ ಸಾವರ್ಕರ್ ನಗರದಲ್ಲಿ ಇರುವ ಅವರ ಮನೆಯನ್ನು ಆರೋಗ್ಯ ಇಲಾಖೆ ಸ್ಯಾನಿಟೈಸ್ ಮಾಡಲಿದೆ.
ದೇಶದಲ್ಲಿ 107 ಪಾಸಿಟಿವ್ ಬಂದವರಲ್ಲಿ ಆರ್ ಟಿಪಿ ಸಿ ಆರ್ ಟೆಸ್ಟ್ ಮಾಡಿದಾಗ 20 ಜನರಿಗೆ ರೂಪಾಂತರ ಕರೋನಾ ಇರುವುದು ದೃಢಪಟ್ಟಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!