ಬೆಂಗಳೂರು,ಫೆ.23:
ಶಾಸಕ ಡಿಎಸ್ ಅರುಣ್ ಅವರು ಇಂದು ಚುಕ್ಕೆ ಗುರುತಿನ ಪ್ರಶ್ನೆಯಾದ 1123 ಕುರಿತು ಇಂದು 152ನೇ ವಿಧಾನ ಮಂಡಲ ಅಧಿವೇಶನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಗಳನ್ನು ಸಚಿವರನ್ನು ಕೂಸಿನ ಆರೈಕೆ ಮನೆಯ ಕುರಿತು ಪ್ರಶ್ನಿಸಲಾಯಿತು.

ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ರವರು ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವರ ಮಕ್ಕಳಿಗಾಗಿ ಪ್ರಾರಂಭವಾಗಿರುವ ಕೂಸಿನ ಆರೈಕೆ ಮನೆಗಳು ಶಿವಮೊಗ್ಗ ಸೇರಿದಂತೆ ಅನೇಕ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಈವರೆಗೆ ಎಷ್ಟು ಕೂಸಿನ ಆರೈಕೆ ಮನೆಗಳನ್ನು ಸ್ತಾಪಿಸಲಾಗಿದೆ, ಸರ್ಕಾರದ ಗುರಿ ಎಷ್ಟು? ಶಿವಮೊಗ್ಗದ ಗ್ರಾಮ ಪಂಚಾಯಿತಿಗಳಲ್ಲಿ ಪ್ರವಾಸ ಮಾಡುವಾಗ ಸರ್ಕಾರದ ಹೊಸ ಯೋಜನೆ ಆಗಿರೋ ಕೂಸಿನ ಆರೈಕೆ ಮನೆಗಳು ಕಾಣಿಸುವುದಿಲ್ಲ. ಹೊಸ ಯೋಜನೆಗಳನ್ನು ಎಲ್ಲಾ ಜಿಲ್ಲೆಗಳಲ್ಲೂ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಎಂಬ ವಿಷಯವನ್ನು ಪ್ರಸ್ತಾಪಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಶಿಕಾರಿಪುರ ಹಾಗೂ ಭದ್ರಾವತಿ ತಾಲೂಕಿನ ಅಂಗನವಾಡಿ ಮಕ್ಕಳಿಗೆ ನಾಲ್ಕು ತಿಂಗಳಿಗಳಿಂದ ಹಾಲಿನ ಪೌಡರ್ ಸರಬರಾಜು ಆಗದೆ ಗ್ರಾಮೀಣ ಮಕ್ಕಳ ಪೌಷ್ಟಿಕಾಂಶದ ಕೊರತೆ ಎದುರಿಸುತ್ತಿರುವ ಕುರಿತು ಉಲ್ಲೇಖಿಸಿ ಸರ್ಕಾರದ ಹೊಸ ಯೋಜನೆ ಆಗಿರುವ ಕೂಸಿನ ಅರೈಕೆ ಮನೆಗಳಿಂದ ಈಗಾಗಲೇ ಇರುವ ಅಂಗನವಾಡಿಗಳಲ್ಲಿ ಮಕ್ಕಳು ಗಣನೀಯವಾಗಿ ಕಡಿಮೆಯಾಗುತ್ತಿರುವುದು ಕಂಡುಬರುತ್ತದೆ, ಸರ್ಕಾರ ಹೊಸ ಯೋಜನೆ ಹಾಗೂ ಹಳೆ ಯೋಜನೆಯ ಎರಡನ್ನು ಸಮಾನತೆಯಿಂದ ನೋಡಿ ಯಾವ ಯೋಜನೆಗೂ ತೊಂದರೆಯಾಗದಂತೆ ನಿಗಾ ವಹಿಸಬೇಕು, ಎಂದು ಸಲಹೆ ನೀಡಿದರು.
ಶಿವಮೊಗ್ಗ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕೂಸಿನ ಮನೆ ಕೇಂದ್ರಗಳನ್ನು ಸ್ಥಾಪಿಸಲು ಆಯ್ಕೆ ಮಾಡಿಲಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಕಟ್ಟಡ ಲಭ್ಯತೆ ಇರುವುದಿಲ್ಲ ಇದರಿಂದ ಕೂಸಿನ ಮನೆ ಪ್ರಾರಂಭಿಸಲು ಪ್ರಸ್ತುತ ಸಾಧ್ಯವಾಗುತ್ತಿಲ್ಲ ಹಾಗಾಗಿ ಕಾರ್ಯಕ್ರಮವನ್ನು ಸುಗಮವಾಗಿ ಮುಂದುವರಿಸಲು ಗ್ರಾಮ ಪಂಚಾಯಿತಿಗೆ ಪ್ರತ್ಯೇಕ ಬಜೆಟ್ ಮೀಸಲಿಡಬೇಕು ಇಲ್ಲದಿದ್ದರೆ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಹೊರೆ ಬೀಳಲಿದೆ ಎಂಬ ಕಳವಳ ವ್ಯಕ್ತಪಡಿಸಿದರು.


ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಮಾನ್ಯ ಶಾಸಕರ ಕಾಳಜಿ ಮೆಚ್ಚಿ ಸರ್ಕಾರದ ಹೊಸ ಯೋಜನೆಯಾಗಿರುವ ಕೂಸಿನ ಆರೈಕೆ ಮನೆಯನ್ನು ಸದೃಢ ಮಾಡಲು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಹೊರೆಯಾಗದೆ ಯೋಜನೆ ಸಾಗಲು ಅಧಿಕಾರಿಗಳೊಡನೆ ಚರ್ಚಿಸಿ ಬೇಕಿರುವ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಶಾಸಕರಾದ ಡಿ.ಎಸ್.ಅರುಣ್ ರವರು ತಮ್ಮ ಇನ್ನುಳಿದ ಸಲಹೆಗಳನ್ನು ಇಲಾಖೆಗೆ ಯಾವ ಸಂದರ್ಭದಲ್ಲಿಯೂ ಸಹ ನೀಡಬಹುದೆಂದು ಹೇಳಿದರು.