ಮಕ್ಕಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ,  ಪ್ರೋತ್ಸಾಹಿಸುವ ಉದ್ದೇಶದಿಂದ ಅನೇಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಇದರಂತೆ ಶಿವಮೊಗ್ಗ ಜಿಲ್ಲೆಯ ಥ್ರೋಬಾಲ್ ಸಂಸ್ಥೆ,ಇವರ ಆಶ್ರಯದಲ್ಲಿ ಮಾಜಿ ಮುಖ್ಯ ಮಂತ್ರಿಗಳಾದ ಮಾನ್ಯ, ಶ್ರೀಯುತ ಬಿ.ಎಸ್. ಯಡಿಯೂರಪ್ಪ ಅವರ 80 ನೆ ಹುಟ್ಟು ಹಬ್ಬದ ಪ್ರಯುಕ್ತ, ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಆಹ್ವಾನಿತ ಹೊನಲು ಬೆಳಕಿನ ಥ್ರೋಬಾಲ್ ಪಂದ್ಯಾವಳಿಯನ್ನು ಮಹಿಳೆಯರು ಮತ್ತು ಪುರುಷರಿಗಾಗಿ “ಬಿ.ಎಸ್.ವೈ ಕಪ್” ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
      ಹೊನಲು ಬೆಳಕಿನ ಥ್ರೋಬಾಲ್ ಪಂದ್ಯಾವಳಿಯಲ್ಲಿಮಹಿಳೆಯರು ಮತ್ತು ಪುರುಷರ  15 ತಂಡಗಳು ಭಾಗವಹಿಸಿ, ಅದ್ಭುತ ಆಟದ ಪ್ರದರ್ಶನ ನೀಡಲಿವೆ. ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನ ಮತ್ತು ಟ್ರೋಫಿ ಹಾಗೂ ಪಾರಿತೋಷಕಗಳನ್ನು ನೀಡಲಾಗುವುದು.

“ನಗದು ಬಹುಮಾನ “


  ಮಹಿಳೆಯರ ವಿಭಾಗ :-
  ಪ್ರಥಮ ಸ್ಥಾನ –10,000 ರೂ, ದ್ವಿತೀಯ ಸ್ಥಾನ— 8,000 ರೂ, ತೃತೀಯ ಸ್ಥಾನ — 5000 ರೂ, ಚತುರ್ಥ ಸ್ಥಾನ —- 3000 ರೂ ನಗದು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು.

“ಪುರುಷರ ವಿಭಾಗ :-  ಪ್ರಥಮ ಸ್ಥಾನ —- 10,000 ರೂ,  ದ್ವಿತೀಯ ಸ್ಥಾನ– 8,000 ರೂ, ತೃತೀಯ ಸ್ಥಾನ — 5,000 ರೂ, ಚತುರ್ಥ ಸ್ಥಾನ —- 3000 ರೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು.

     ಪಂದ್ಯಾವಳಿಯು ದಿನಾಂಕ 27 -2- 2024 ರಂದು ಒಂದು ದಿನ ಹಗಲು ಹಾಗೂ ಹೊನಲು ಬೆಳಕಿನ 3 ಥ್ರೋಬಾಲ್ ಅಂಕಣದ ವ್ಯವಸ್ಥೆಯನ್ನು ಮಾಡಲಾಗಿದ್ದು,ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯು ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತಿದ್ದು ಜಿಲ್ಲೆಯ 18 ವರ್ಷ  ಮೇಲ್ಪಟ್ಟ ಕ್ರೀಡಾ ಪಟುಗಳನ್ನೊಳಗೊಂಡ ತಂಡಗಳು  ಜಿಲ್ಲೆಯ ಪುರುಷ ಹಾಗೂ ಮಹಿಳಾ ತಂಡಗಳು ಭಾಗವಹಿಸಬಹುದಾಗಿದೆ.
      ಆಟಗಾರ ಅನುಕೂಲಕ್ಕಾಗಿ ಉತ್ತಮ ಅಂಕಣಗಳನ್ನು ಸಿದ್ಧಪಡಿಸಲಾಗಿದೆ . ರಾಜ್ಯ ಮಟ್ಟದ ನುರಿತ ಥ್ರೋಬಾಲ್ ತೀರ್ಪುಗಾರರು ಆಗಮಿಸಲಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ  ಬರುವ ಎಲ್ಲಾ ಕ್ರೀಡಾಪಟುಗಳಿಗೂ ಬೆಳಗಿನ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ನಿಬಂಧನೆಗಳು —1) ತಂಡಗಳು  ಕಡ್ಡಾಯವಾಗಿ ಕ್ರೀಡಾ ಸಮವಸ್ತ್ರ ಧರಿಸಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು.
2) ವಯೋಮಿತಿ 18 ವರ್ಷ ಮೇಲ್ಪಟ್ಟ
  ಪುರುಷ ಮತ್ತು ಮಹಿಳಾ ತಂಡಗಳು  ಭಾಗವಹಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾ ಥ್ರೋಬಾಲ್ ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ಮಠಪತಿ ಕೋರಿದ್ದಾರೆ.
  ಹೆಚ್ಚಿನ ಮಾಹಿತಿಗಾಗಿ, 994547410498808395759972572118 ಸಂಪರ್ಕಿಸಿ.

By admin

ನಿಮ್ಮದೊಂದು ಉತ್ತರ

error: Content is protected !!