ಬೆಂಗಳೂರು,ಡಿ.23:
ಕೊರೊನಾ ರೂಪಾಂತರ ವೈರಸ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್​ ಕರ್ಫ್ಯೂ ಇರಲಿದೆ ಎಂದು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಇದೀಗತಾನೆ ಘೋಷಿಸಿದ್ದಾರೆ.
ಇಂದಿನಿಂದ 9 ದಿನಗಳ ಕಾಲ ನೈಟ್ ಕರ್ಫ್ಯೂ ಇರಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರಲಿದೆ. ಜನವರಿ 2ರವರೆಗೂ ರಾತ್ರಿ ಕರ್ಫ್ಯೂ ಇರುವುದರಿಂದ ಹೊಸವರ್ಷದ ಮಧ್ಯರಾತ್ರಿ ಆಚರಣೆಗೆ ಸಹಜವಾಗಿಯೇ ಕಡಿವಾಣ ಇರಲಿದೆ.
ರಾತ್ರಿ 9ರನಂತರ ಬಸ್​ ಸಂಚಾರ ಇರೋದಿಲ್ಲ. ಹೋಟೆಲ್​, ರೆಸ್ಟೋರೆಂಟ್​ಗಳೂ ಬಂದ್​ ಆಗಲಿವೆ. ವ್ಯಾಪಾರ, ವಹಿವಾಟಗಳೂ ನಡೆಯುವುದಿಲ್ಲ. ಅಗತ್ಯ ವಸ್ತುಗಳ ಸರಬರಾಜು ಮಾಡುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಇರಲಿದೆ. ಹಾಗೇ ಇಂದು ಸಂಜೆ 5ಗಂಟೆಯೊಳಗೆ ನೈಟ್​ಕರ್ಫ್ಯೂ ಸಂಬಂಧಿತ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!