ಶಿವಮೊಗ್ಗ, ಫೆ.01:
ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನ 67 ನೇ ರಾಷ್ಟ್ರ ಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ವೆಸ್ಟ್ ಬೆಂಗಾಳ ತಂಡ ಗುಜರಾತ್ ತಂಡವನ್ನು ಸದ್ದು ಮಾಡದೇ ಬರ್ಜರಿಯಾಗಿ ಸೋಲಿಸಿದೆ.
ಸಂಜೆ 6 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ ಒಂದಿಷ್ಟು ತಡವಾಗಿ ಆರಂಭವಾಯ್ತು. ಅಂತಿಮ ರೋಚಕ ಪಂದ್ಯದ ಐದು ಇನ್ನಿಂಗ್ಸ್ ನಲ್ಲಿ ಸತತ ಮೂರು ಪಂದ್ಯ ಬರ್ಜರಿಯಾಗಿ ಗೆದ್ದ ವೆಸ್ಟ್ ಬಂಗಾಳ ಪ್ರಥಮ ಸ್ಥಾನ ಪಡೆಯಿತು. ಆದಿಚುಂಚನಗಿರಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ರೋಚಕ ಪಂದ್ಯದ ವೀಕ್ಷಣೆಯ ಕೇಂದ್ರ ಬಿಂಧುವಾಗಿದ್ದರು.
ಮೋದಿ ವರ್ಸಸ್ ಮಮತಾ ಬ್ಯಾನರ್ಜಿ ಎಂದೇ ಕರೆಯಲಾಗುತ್ತಿದ್ದ ಫೈನಲ್ ವೀಕ್ಷಣೆಗೆ ಸಾಕಷ್ಟು ಕ್ರೀಡಾಭಿಮಾನಿಗಳು ಸೇರಿದ್ದರು.
ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಗುಜರಾತು ಮೂಲದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರು ಇಲ್ಲಿ ಓಡುತ್ತಿತ್ತು. ಕ್ರೀಡೆಯಲ್ಲಿ ಒಂದಿಷ್ಟು ಜೋಕುಗಳ ನಡುವೆ ಅಂತಿಮ ಹಂತದ ಪಂದ್ಯ ಮೋದಿ ವರ್ಸಸ್ ಮಮತಾ ಬ್ಯಾನರ್ಜಿ ಎಂದೇ ಕರೆಯಲ್ಪಡುತ್ತಿದ್ದು. ಗುಜರಾತು ಪೈಪೋಟಿಯ ನಡುವೆ ವೆಸ್ಟ್ ಬೆಂಗಾಳ ಗೆಲುವು ದಾಖಲಿಸಿತು.