ಶಿವಮೊಗ್ಗ,ಫೆ.01:

      ಸಂಸ್ಕೃತಿ ಹಾಗೂ ಸಂಸ್ಕಾರವಿಲ್ಲದ ಬದುಕು ಅರ್ಥವಿಲ್ಲದ್ದು ಮಕ್ಕಳಲ್ಲಿ ನಾವು ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಹುಟ್ಟು ಹಾಕಬೇಕಿದೆ. ಈ ನಿಟ್ಟಿರಲಿ ಪೋಷಕರು ಹಾಗೂ ಶಿಕ್ಷಕರು ನಿತ್ಯ ಶ್ರಮ ವಹಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು. ಅವರು ಶಿವಮೊಗ್ಗ ಗುರುಪುರದ ಬಿಜಿಎಸ್ ಶಾಲಾ ಕಾಲೇಜಿನ ಸಾಂಸ್ಕೃತಿಕ ವೈಭವ- 2024 ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಪಾಲಕರು ಮಕ್ಕಳನ್ನು ಗುಣವಂತರನ್ನಾಗಿ ಬೆಳೆಸಲು ಸೂಕ್ತ ವೇದಿಕೆಯನ್ನು ಕಟ್ಟಿಕೊಡಬೇಕು ಎಂದರು. 

ಶಿಕ್ಷಕರು ಕೇವಲ ಪಾಠ ಪ್ರವಚನಕ್ಕೆ ಮಾತ್ರ ಸೀಮಿತವಾಗದೆ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಗೆಳೆಯಬೇಕು. ಅದರ ಜೊತೆಗೆ ಪಾಲಕರು ಹಾಗೂ ಶಿಕ್ಷಕರು ಮಕ್ಕಳು ಅನಗತ್ಯವಾಗಿ ಮೊಬೈಲ್ ಬಳಕೆ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಮಕ್ಕಳು ಕಲಿಕೆಯ ಜೊತೆ ಸಂಸ್ಕಾರ ಮತ್ತು ತಮ್ಮ ಮುಂದಿನ ಗುರಿಗಳ ಬಗ್ಗೆ ನಿಖರವಾದ ಉದ್ದೇಶಗಳನ್ನು ಹೊಂದುವ ಅಗತ್ಯವಿದೆ. ನಾಳಿನ ಸುಂದರ ಬದುಕನ್ನು ರೂಪಿಸಿಕೊಳ್ಳಲು ದೇಶದ ಪ್ರಜ್ಞಾವಂತ ನಾಗರೀಕನಾಗಲು ಚಿಂತನೆ ನಡೆಸಬೇಕಿದೆ. ದೇಶಕ್ಕೆ, ನನ್ನ ಊರಿಗೆ, ನನ್ನ ಜಿಲ್ಲೆಗೆ ಏನಾದರೂ ಕೊಡುಗೆ ನೀಡುವಂತಹ ಸಮಾಜಮುಖಿ ಮನಸ್ಸು ಬೆಳೆಸಿಕೊಳ್ಳಬೇಕಿದೆ ಎಂದರು. 

       ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗಾರರಾದ ವಿಠಲನಾಯ್ಕ ಕಲ್ಲಡ್ಕ ಅವರು 2019 ಹಾಗೂ 20 ನಮಗೆ ಜೀವನದ ಬಹುದೊಡ್ಡ ಪಾಠವನ್ನು ಹೇಳಿಕೊಟ್ಟಿದೆ. ನಮ್ಮಲ್ಲಿನ ಹ್ಯುಮ್ಯಾನಿಟಿ ಹಾಗೂ ಹುಮಾನಿಟಿ ನಮ್ಮನ್ನು ಬದುಕಿಸಿದೆ ಹಾಗೂ ಹೊಸ ಬದುಕನ್ನು ರೂಪಿಸಿಕೊಟ್ಟಿದೆ ಎಂದು  ತಿಳಿಸಿದರು.

    ಕೊರೊನಾದ ಈ ಅವಧಿಯಲ್ಲಿ ಸಾಲ ಪಡೆದವನು ಬಹಳ ಖುಷಿಯಾಗಿದ್ದ ಎನ್ನಬಹುದು. ಆತನ ಬಳಿ ಸಾಲ  ಕೇಳಲು ಬಂದವನಿಗೆ  ಸಾಲ ಪಡೆದಾತ ಮಾಸ್ಕ್ ಹಾಕಿಕೊಳ್ಳುತ್ತಿದ್ದ. ಅವನನ್ನು ಹುಡುಕುವುದು ಕಷ್ಟವಾಗಿತ್ತು. ಜೋರು ಮಾಡಿ ಸಾಲ ಕೇಳಿದರೆ ಸಾಕು ಶೀನುವುದು ಇಲ್ಲವೇ ಕೆಮ್ಮಿದರೆ ಸಾಕಿತ್ತು ಎಂದು ಹಾಸ್ಯ ಚಟಾಕಿ ಹಾರಿಸಿದರು.

   ಅಂದಿನ ದಿನಮಾನಗಳಲ್ಲಿ ನಮ್ಮ ಎಲ್ಲ ಬೆಳೆಬಾಳುವ ವಸ್ತುಗಳು ಬೀರುವಿನ ಒಳಗೆ ಭದ್ರವಾಗಿದ್ದವು. ಕೇವಲ ಹತ್ತು ರೂಪಾಯಿ ಮಾತ್ರ ಹೊರಗೆ ಹರಿದಾಡಿತು ಎಂದು ಹೇಳಿದ ಅವರು ಕೊರೋನಾ ಅವಧಿ ನಿಜಕ್ಕೂ ನಮ್ಮ ಬದುಕನ್ನು ಬದಲಿಸಿದೆ ಎಂದರು.

ಸಮುದ್ರ ಹಾಗೂ ವಿಮಾನದಲ್ಲಿ ಹೊರಟಾಗ ದಿಕ್ಸೂಚಿ ಅತ್ಯಗತ್ಯ ದಿಕ್ಕು ತಿಳಿದುಕೊಳ್ಳಲು ಅಗತ್ಯವಾದ ದಿಕ್ಸೂಚಿ ಈಗ ಭೂಮಿಯಲ್ಲಿ ಇರುವವರಿಗೆ ಹೆತ್ತವರು ಮಕ್ಕಳು ಮಾತು ಕೇಳುವುದಿಲ್ಲ ಎನ್ನುತ್ತಾರೆ. ಮಕ್ಕಳು ಸಹ ನಾವು ಕೇಳುವಂತೆ ನೀವು ಮಾಡುವುದಿಲ್ಲ ಎನ್ನುತ್ತಾರೆ. ಗುರುಗಳಿಗೆ ನಾನು ಕಲಿಯುವಂತೆ ನೀವು ಪಾಠ ಕಲಿಸಿ ಎಂದು ಹೇಳಿಕೊಡುವ ಸ್ಥಿತಿ ನಿರ್ಮಾಣವಾಗಿರುವುದು ದುರಂತವೇ ಹೌದು ಎಂದರು.

ಹೊಂದಾಣಿಕೆ ವಿಷಯದಲ್ಲಿ ಭಯ ಮತ್ತು ಹೆದರಿಕೆ ಏಕೆ ಬದುಕನ್ನು ರೂಪಿಸಿಕೊಳ್ಳಲು ನಾವು ಹೊಂದಾಣಿಕೆ ಹಾಗೂ ಸಾಧನೆ ಮಾಡಬೇಕಿದೆ ಮನೆ ಮಂತ್ರಾಲಯವಾದರೆ ಮನಸ್ಸು ದೇವಾಲಯವಾಗಬೇಕು ಎಂದರು.

       ಇದೇ ಸಂದರ್ಭದಲ್ಲಿ ಎಸ್. ಜಿ. ಎಫ್.ಐ   ವೀಕ್ಷಕರಾದ ಸಂಜಯ್ ಬಾಬರ್, ಅರುಣಾಚಲಂ ಮತ್ತು ಶಶಿಯವರು ಹಾಗೂ ವಾಸಪ್ಪ ಕೊಳಿಗೆ, ಸತೀಶ್ ಡಿ. ವಿ., ಪ್ರಾಂಶುಪಾಲರಾದ ಹೇಮಾ ಎಸ್. ಆರ್., ಡಾ. ಅರಿಣಾಕ್ಷಿ, ಸುರೇಶ್ ಎಸ್. ಹೆಚ್ . ಭದ್ರಾವತಿಯ ಆಡಳಿತಾಧಿಕಾರಿಗಳಾದ  ಜಗದೀಶ್, ಶೈಕ್ಷಣಿಕ ಸಲಹೆಗಾರರಾದ  ವೆಂಕಟೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು. 

      ಇದೇ ಸಂಧರ್ಭದಲ್ಲಿ ಕಳೆದ ವರ್ಷದ ಎಸ್ ಎಸ್ ಎಲ್ ಸಿ ಹಾಗೂ  ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಗೈದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಇದೇ ಸಂದರ್ಭದಲ್ಲಿ ಪೂಜ್ಯರಿಂದ ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜನರ ಗಮನ ಸೆಳೆಯಿತು 

By admin

ನಿಮ್ಮದೊಂದು ಉತ್ತರ

You missed

error: Content is protected !!