ಶಿವಮೊಗ್ಗ, ಫೆ.1 : ಕುರುಬ ವಿದ್ಯಾರ್ಥಿ ನಿಲಯದ ಮೇಲೆ ಕಲ್ಲು ತೂರಾಟ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಾಲುಮತ ಮಹಾಸಭಾ, ಜಿಲ್ಲಾ ಕುರುಬರ ಸಂಘ, ಭದ್ರಾವತಿ ತಾಲ್ಲೂಕು ಕುರುಬರ ಸಂಘಗಳ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಇತ್ತೀಚೆಗೆ ನಡೆದ ಮಂಡ್ಯ ಜಿಲ್ಲೆಯ ಮಂಡ್ಯ ನಗರದ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ಕಿಟಕಿಯ ಗಾಜುಗಳನ್ನು ಒಡೆದು ಇನ್ನಿತರ ವಸ್ತುಗಳನ್ನು ಧ್ವಂಸ ಮಾಡಿದ್ದು ಹಾಗೂ ದಾಸ ಶ್ರೇಷ್ಠ ಶ್ರೀ ಭಕ್ತಕನಕದಾಸರ ಭಾವಚಿತ್ರ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರವನ್ನು ಹರಿದು ವಿಕೃತಿ ಮೆರೆದಿದ್ದಾರೆ. ಈ ವಿಚಾರ ಇಡೀ ನಮ್ಮ ಸಮಾಜದ ಧ್ವನಿ ಅಡಗಿಸುವ ಕುತಂತ್ರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಡಾ.ಪ್ರಶಾಂತ್, ಜಿಲ್ಲಾಧ್ಯಕ್ಷ ದಾನೇಶ್, ಗಣೇಶ್ ಬಿಳಿಗಿ, ಭದ್ರಾವತಿ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಸಂತೋಷ್, ಕರ್ನಾಟಕ ಪ್ರದೇಶ ಕುರುಬರ ಸಂಘದ ರಂಗನಾಥ್, ಶರತ್‍ಮರಿಯಪ್ಪ, ಡಾ. ಸೌಮ್ಯಪ್ರಶಾಂತ್, ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ ರಾಮಕೃಷ್ಣಮೂಡ್ಲಿ, ಅಣ್ಣಯ್ಯ, ವಿನಯ್‍ನಾರಾಯಣಸ್ವಾಮಿ, ಪÀÅಷ್ಪಲತಾರವೀಂದ್ರ, ನವಲೆ ಮಂಜುನಾಥ್, ಕೆ.ಟಿ.ಶಿವಕುಮಾರ್ ಸ್ವಪ್ನ, ರವೀಂದ್ರ, ಚಿತ್ರ, ಹೇಮಾವತಿ, ಹನುಮಕ್ಕ, ನಾಗಭೂಷಣ್ ಇತರರು ಇದ್ದರು