ಶಿವಮೊಗ್ಗ,ಡಿ.25:
ಶಿವಮೊಗ್ಗ ಸಮೀಪದ ಮಾಚೇನಹಳ್ಳಿಯಲ್ಲಿರುವ ಶಾಹಿ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ನಿಧಿಗೆ ಸರ್ಕಾರಿ ಪ್ರೌಢಶಾಲೆಗೆ ಸುಮಾರು ಐದೂವರೆ ಲಕ್ಷ ರೂ ಮೌಲ್ಯದ ವಿಜ್ಞಾನ ಪ್ರಯೋಗಾಲಯವನ್ನು ( ಸ್ಟೆಮ್ ಲ್ಯಾಬ್) ನಿರ್ಮಿಸಿಕೊಡುವ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿದೆ.
ಬರುವ ಡಿಸೆಂಬರ್ 28ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಶಾಹಿ ಸಂಸ್ಥೆ ನೀಡುವ ವಿಜ್ಞಾನ ಪ್ರಯೋಗಾಲಯವನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪರಮೇಶ್ವರಪ್ಪ ಸಿ.ಆರ್., ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ನಾಗರಾಜ್, ಡಯಟ್ ಪ್ರಾಂಶುಪಾಲ ಬಿ.ಆರ್. ಬಸವರಾಜಪ್ಪ ಅವರು ಆಗಮಿಸಲಿದ್ದಾರೆ. ವಿಶೇಷವಾಗಿ ಶಾಹಿ ಎಕ್ಸ್ಪೋರ್ಟ್ ನ ಸಿಓಓಗಳಾದ ಸುಖವಂತ್ ಸಿಂಗ್ ಬೈನ್ಸ್, ಅಳಗಪ್ಪನ್ ಆರ್, ಹಿರಿಯ ಜನರಲ್ ಮ್ಯಾನೇಜರ್ ಹರಿಹರ ಪುತ್ರನ್ ವಿ., ಸಹಾಯಕ ಜನರಲ್ ಮ್ಯಾನೇಜರ್ ಲಕ್ಷ್ಮಣ ಧರ್ಮಟ್ಟಿ, ಡೆಪ್ಯುಟಿ ಮ್ಯಾನೇಜರ್ ಪ್ರತಿಶ್ ಎಸ್, ನಿಧಿಗೆ ಸರ್ಕಾರಿ ಪ್ರೌಢಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಮಹೇಶ್ ಕೆ., ಮುಖ್ಯ ಶಿಕ್ಷಕ ಲಕ್ಷ್ಮಣಪ್ಪ ಎಂ.ಬಿ. ಉಪಸ್ಥಿತರಿರುತ್ತಾರೆ.
ಭೌತಶಾಸ್ತ್ರ, ರಾಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಅಧ್ಯಯನದ ವಿಶೇಷ ಪ್ರಯೋಗಶಾಲೆ ಇದಾಗಿದ್ದು, ಇದರಲ್ಲಿ ಎಲ್ಲ ಬಗೆಯ ಕಲಿಕೆಯ ಸಾಮಗ್ರಿಗಳು ಇಲ್ಲಿ ದೊರೆಯುತ್ತವೆ. ಶಾಯಿ ಎಕ್ಸ್ಪೋರ್ಟ್‌ನ ಕ್ರಮವನ್ನು ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಣ ಇಲಾಖೆ ಆತ್ಮೀಯವಾಗಿ ಅಭಿನಂದಿಸಿದೆ.