ಶಿವಮೊಗ್ಗ: ಭದ್ರಾ ಅಚ್ಚು ಕಟ್ಟು ಪ್ರದೇಶಾಬಿ ವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಇವರು ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶ್ಯಾಗಲೆ, ಕೋಡಿಹಳ್ಳಿ, ಮಳಲ ಕೆರೆ, ಲೋಕಿಕೆರೆ ಭಾಗದ ರೈತರು ಕಚೇರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವಂತೆ ಮನವಿ ಸಲ್ಲಿಸಿದ ಹಿನ್ನೆಲೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಅವರು ಈ ಭಾಗಗಳಿಗೆ ಭೇಟಿ ನೀಡಿ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ತಿಳಿಯಲು ಅವರನ್ನು ನೇರವಾಗಿ ಭೇಟಿ ಮಾಡಿ ಅವರ ಸಮಸ್ಯೆಗಳ ಬಗ್ಗೆ ಕೂಲಂಕು ಷವಾಗಿ ಪರಿಶೀಲಿಸಿದರು. ನಂತರ ದುರಸ್ತಿಗೊಂಡಿರುವ ಕಾಲುವೆಗಳನ್ನು, ಗುಂಡಿ ಬಿದ್ದಿರುವ ಅಚ್ಚುಕಟ್ಟು ರಸ್ತೆಗ ಳನ್ನು ಸಂಬಂಧಪಟ್ಟ ಅಧಿಕಾರಿಗ ಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧ್ಯಕ್ಷರು ರೈತರನ್ನು ಕುರಿತು ಮಾತನಾಡಿ, ಕೊರೊನಾ ಕಾರಣ ದಿಂದ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ, ಅನ್ನದಾತ ರಿಗೆ ಯಾವುದೇ ತೊಂದರೆ ಯಾಗ ದಂತೆ ಯೋಜನೆಗಳನ್ನು ರೂಪಿಸು ತ್ತಿದೆ. ನೀರಾವರಿ ಯೋಜನೆಗಳಿಗೆ, ಕಾಡಾ ಪ್ರಾಧಿಕಾರಗಳಿಗೆ ಸೂಕ್ತ ಅನು ದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ರೈತರ ಕಷ್ಟಗಳನ್ನು ಹತ್ತಿರದಿಂದ ಬಲ್ಲ ನನಗೆ ಮುಖ್ಯಮಂತ್ರಿಗಳು ಈ ಜಬ್ದಾರಿಯುತ ಸ್ಥಾನವನ್ನು ನೀಡಿ ದ್ದಾರೆ. ನಿಮ್ಮ ಪ್ರತಿಯೊಂದು ಸಮಸ್ಯೆ ಗಳು ನನ್ನ ಅರಿವಿಗೆ ಇದ್ದು, ಸರ್ಕಾರ ದಿಂದ ಅನುದಾನ ಬಿಡುಗಡೆಗೊಳ್ಳು ತ್ತಿದ್ದ ಹಾಗೆ ಆದ್ಯತೆ ಮೇರೆಗೆ ಕೆಲಸ ಗಳನ್ನು ಕೈಗೆತ್ತಿಕೊಳ್ಳಲು ರೂಪು ರೇಷೆ ಸಿದ್ದಪಡಿಸಿದ್ದು, ರೈತರು ತಾಳ್ಮೆ ಯಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ ನೀರಾವರಿ ಇಲಾ ಖೆಗೆ ನೀರು ಪೋಲಾಗುವುದನ್ನು ರೈತರು ಇಲಾಖೆಯ ಗಮನಕ್ಕೆ ತರಲು ಅನುಕೂ ಲವಾಗುವಂತೆ ಸಹಾಯ ವಾಣಿ ತೆರೆಯಲು ನಿರ್ದೇಶನ ನೀಡಿದ್ದು, ಅದು ಕೂಡ ಪ್ರಗತಿಯಲ್ಲಿದೆ ಎಂದು ಹೇಳಿದರು.
ಕಾಡಾ ಪ್ರಾಧಿಕಾರವನ್ನು ಮಾದರಿ ಯಾಗಿ ಮಾಡುವುದು ನನ್ನ ಕನಸಾ ಗಿದ್ದು, ನಿಮ್ಮ ಸಲಹೆ ಸಹಕಾರ ಅತಿ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೀರು ಬಳಕೆ ದಾರರ ಸಹಕಾರ ಸಂಘದ ಪದಾಧಿ ಕಾರಿಗಳು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು