ಶಿವಮೊಗ್ಗ,ಡಿ.೧೧: ಡಿ.೧೨ ಮತ್ತು ೧೩ರಂದು ಕುವೆಂಪು ರಂಗಮಂದಿರದಲ್ಲಿ ಮೈಸೂರಿನ ನಟನಾ ತಂಡದಿಂದ ಎರಡು ನಾಟಕಗಳನ್ನು ಪ್ರದರ್ಶಿಸಲಾಗುವುದು ಎಂದು ನಟ ನಿರ್ದೇಶಕ ಚಂದ್ರಶೇಖರ್ ಹಿರೇಗೋಣಿಗೆರೆ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹೊಂಗಿರಣ ಸಂಸ್ಥೆಯ ಸಹಕಾರದಲ್ಲಿ ಈ ನಾಟಕಗಳು ನಡೆಯಲಿವೆ. ೧೨ರಂದು ಮಂಡ್ಯ ರಮೇಶ್ ನಿರ್ದೇಶನದ ಅಂಧಯುಗ ನಾಟಕ ಪ್ರದರ್ಶನಗೊಳ್ಳಲಿದೆ. ಹಿಂದಿಯ ಪ್ರಸಿದ್ಧ ನಾಟಕಗಾರ ಧರ್ಮವೀರ ಭಾರತಿ ರಚಿಸಿರುವ ಈ ನಾಟಕವನ್ನು ಸಿದ್ದಲಿಂಗಪಟ್ಟಣಶೆಟ್ಟಿ ಕನ್ನಡಕ್ಕೆ ತಂದಿದ್ದಾರೆ.
೧೩ರಂದು ನಿರ್ದೇಶಕ ಶ್ರೀಪಾದ್ ಭಟ್‌ರವರ ಕಣಿವೆಹಾಡು ಪ್ರದರ್ಶನಗೊಳ್ಳಲಿದೆ. ಅತುಲೋಪ್ಯೂಗಾರ್ಡ್ ರಚಿಸಿರುವ ಈ ನಾಟಕವನ್ನು ಡಾ. ಮೀರಾಮೂರ್ತಿ ಕನ್ನಡಕ್ಕೆ ತಂದಿದ್ದಾರೆ. ಈ ಎರಡು ನಾಟಕಗಳು ಈಗಾಗಲೇ ಸಾಕಷ್ಟು ಪ್ರಸಿದ್ದಿ ಪಡೆದಿವೆ.
ಮತ್ತು ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಪ್ರದರ್ಶನ ಕಾಣಲಿವೆ. ಎರಡು ನಾಟಕಗಳಿಗೆ ಒಬ್ಬರಿಗೆ ೧೫೦-೦೦ ಟಿಕೇಶ್ ಇರುತ್ತದೆ. ಎರಡು ನಾಟಕಗಳು ಪ್ರತಿದಿನ ಸಂಜೆ ೭ಕ್ಕೆ ಪ್ರದರ್ಶನಗೊಳ್ಳಲಿದೆ. ಒಂದು ನಾಟಕಕ್ಕೆ ಒಬ್ಬರಿಗೆ ೧೦೦-೦೦
ರೂ. ಇರುತ್ತದೆ. ರಂಗಸಕ್ತರು ಈ ಎರಡು ನಾಟಕಗಳನ್ನು ಟಿಕೇಟ್ ಕೊಂಡು ಪ್ರೋತ್ಸಾಹ ನೀಡಬೇಕು. ಹೆಚ್ಚಿನ ವಿವರಕ್ಕೆ ೯೮೪೪೩೬೭೦೭೧ನ್ನು ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಂಜುನಾಥಶೆಟ್ಟಿ ಇದ್ದರು.