ಶಿವಮೊಗ್ಗ ,ಡಿ.4:
ಶಿವಮೊಗ್ಗ ಬಸವ ಕೇಂದ್ರದ
ಚಿಂತನ ಕಾರ್ತಿಕ 2023 ಕಾರ್ಯಕ್ರಮ ನಡೆಯಿತು.
ಪವಿತ್ರ ಕಾರ್ತಿಕ ಮಾಸದಲ್ಲಿ ಭಗವಾನ್ ಶಿವ ಮತ್ತು ಭಗವಾನ್ ವಿಷ್ಣು ಒಟ್ಟಿಗೆ ಇರುತ್ತಾರೆ ಎಂದು ನಂಬಿಕೆಯಿರುವುದರಿಂದ ಈ ಮಾಸವನ್ನು ಪುರುಷೋತ್ತಮ ಮಾಸ ಎಂದು ಕರೆಯಲಾಗುತ್ತದೆ. ಇಂತಹ ಒಂದು ಪವಿತ್ರ ಮಾಸದಲ್ಲಿ ಚಿಂತನ ಕಾರ್ತಿಕ ಎಂಬ ಶೀರ್ಷಿಕೆಯ ಅಡಿಯಲ್ಲಿ ಒಂದು ತಿಂಗಳ ಒಂದೊಂದು ವಿಶೇಷ ವಿಷಯಗಳ ಕುರಿತು ಚಿಂತನ ಕಾರ್ಯಕ್ರಮ ನಡೆಯುತ್ತಿರುವುದು ಅಭಿನಂದನಾರ್ಹ.

ಮಹಾನಗರ ಪಾಲಿಕೆ ಸದಸ್ಯ ವಿಶ್ವಾಸ್ ಅವರ ನೇತೃತ್ವದಲ್ಲಿ ಶಿವಮೊಗ್ಗ ನಗರದ ಅತ್ಯಂತ ವಿಶಿಷ್ಟ ಉದ್ಯಾನವನವಾಗಿ ಮನೆಮಾತಾಗುತ್ತಿರುವ ಅಶ್ವತ್ಥ ನಗರದ ಸ್ವಾಮಿವಿವೇಕಾನಂದ ಉದ್ಯಾನವನದಲ್ಲಿರುವ ಶಿವ ಶಕ್ತಿ ಯೋಗಭವನದಲ್ಲಿ ಚಿಂತನ ಕಾರ್ತಿಕ ಅತ್ಯಂತ ಯಶಸ್ವಿಯಾಗಿ ನಡೆಯಿತು.
ವಚನಗ್ರಂಥಕ್ಕೆ ಪುಷ್ಪಾರ್ಚನೆ ಯೊಂದಿಗೆ ಚಿಂತನ ಕಾರ್ತಿಕ ಪ್ರಾರಂಭವಾಯಿತು.


ನಾಗರತ್ನ ಇವರ ವಚನ ಗಾಯನದ ಮೂಲಕ ಚಿಂತನ ಕಾರ್ತಿಕ ಕ್ಕೆಮುನ್ನುಡಿ.
ಶರಣ ಈ ವಿಶ್ವಾಸ್ ಅವರು ಎಲ್ಲ ಆಹ್ವಾನಿತ ಶರಣ ಶರಣೆಯರನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದರು.
ದೀಪಬೆಳಗಿಸುವುದರ ಮೂಲಕ ಎಲ್ಲ ಆಹ್ವಾನಿತ ಶರಣ ರಿಂದ ಉದ್ಘಾಟನೆ ನೆರವೇರಿತು.
ಚಿಂತನ ಕಾರ್ತಿಕ ದ ಅಧ್ಯಕ್ಷತೆಯನ್ನು ಶರಣ ಪಿ.ಎಲ್ ರಾಜಪ್ಪ ಉಪನ್ಯಾಸಕರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶರಣ ಸಿ. ಆರ್. ಪರಮೇಶ್ವರಪ್ಪ, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ ಇವರು ಆಗಮಿಸಿ ಶರಣ ತತ್ವ, ಕಾಯಕ ತತ್ವ ಕುರಿತು ಮಾತನಾಡಿದರು.


ಚಿಂತನ ಕಾರ್ತಿಕ ದ ಉಪನ್ಯಾಸಕರಾಗಿ ಆಗಮಿಸಿದ ಶರಣ ಸಾಸ್ವೆಹಳ್ಳಿ ಸತೀಶ್, ರಂಗಕರ್ಮಿಗಳು ಇವರು ‘ಗುಬ್ಬಿ ವೀರಣ್ಣ ‘ವಿಷಯ ಕುರಿತು ಸವಿಸ್ತಾರವಾದ ಚಿತ್ರಣವನ್ನು ಹಾಗೂ ಶಿವಮೊಗ್ಗ ನಗರಕ್ಕೂ ಗುಬ್ಬಿ ವೀರಣ್ಣ ನವರಿಗೂ ಇರುವ ಅವಿನಾಭಾವ ಸಂಬಂಧವನ್ನು ಸವಿಸ್ತಾರವಾಗಿ ವಿವರಿಸಿದರು.
ನಾಟಕ ರತ್ನ, ಕರ್ನಾಕಾಂಧ್ರ ನಾಟಕ ಸಾರ್ವಭೌಮ, ವರ್ಸಟೈಲ್ ಕಮಮೆಡಿಯನ್ ಎಂದು ಪ್ರಸಿದ್ಧರಾದ ಇವರು ರಂಗಭೂಮಿ ಕಲೆಯನ್ನು, ಕಲಾವಿದರನ್ನು, ಸಂಸ್ಥೆಗಳನ್ನು ಹುಟ್ಟುಹಾಕಿ ಬೆಳೆಸಿದ ಬಗೆಯ ವಿಸ್ಮಯಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರವಿರುವ. ಕನ್ನಡ ರಂಗಭೂಮಿಗೆ ಕಾಯಕಲ್ಪ ನೀಡಿ ಅದಕ್ಕೆ ಶ್ರೇಷ್ಟತೆಯನ್ನು ದೊರಕಿಸಿ ಕೊಡುವುದರ ಜೊತೆಗೆ ಕನ್ನಡ ಚಲನಚಿತ್ರ ರಂಗಕ್ಕೆ ಮಹತ್ತರ ಅಡಿಪಾಯ ಹಾಕಿದ ಗುಬ್ಬಿ ವೀರಣ್ಣನವರು ಕನ್ನಡ ರಂಗಭೂಮಿಯ ಸಿದ್ಧಪುರುಷರರ ಹೀಗೆ ವೀರಣ್ಣನವರ ಕುರಿತು ಸವಿಸ್ತಾರವಾದ ಉಪನ್ಯಾಸವನ್ನು ನೀಡಿದರು.

ಚಿಂತನ ಕಾರ್ತಿಕದ ದಿವ್ಯ ಸಾನ್ನಿಧ್ಯವನ್ನು ವಹಿಸಿದ ಡಾ. ಶ್ರೀ ಬಸವ ಮರುಳ ಸಿದ್ಧ ಸ್ವಾಮಿಗಳವರು, ಶ್ರೀ ಬಸವ ತತ್ವ ಪೀಠ, ಚಿಕ್ಕಮಗಳೂರು ಬಸವ ಕೇಂದ್ರ, ಶಿವಮೊಗ್ಗ ಇವರು ಕನ್ನಡನಾಡು ನುಡಿಯನ್ನು ಶ್ರೀಮಂತ ಗೊಳಿಸಲು ಶರಣಪರಂಪರೆ ತನ್ನ ಅಮೂಲ್ಯವಾದ ಕೊಡುಗೆಗಳನ್ನು ನೀಡಿದೆ. ಅನುಭವ ಮಂಟಪದ ಮೂಲಕ ರೂಪು ತಳೆದ ಕಾಯಕ, ದಾಸೋಹ, ಶಿವಯೋಗ ಮುಂತಾದವುಗಳು ಶರಣ ಪರಂಪರೆಯ ಉತ್ಕೃಷ್ಟ ಕೊಡುಗೆಗಳಾಗಿವೆ.
ಈ ವರ್ಷದ ಚಿಂತನ ಕಾರ್ತಿಕದಲ್ಲಿ ಬಹುಜನರಿಗೆ ಎಲೆಮರೆಯ ಕಾಯಂತಿದ್ದ , ಶರಣ ಪರಂಪರೆಯ ಕೆಲವು ಮಹಾಮಹಿಮರ ಪರಿಚಯವನ್ನು ಮಾಡಿಕೊಡಲಾಗುತ್ತಿದೆ. ಶರಣ ಸಾಹಿತ್ಯ ಉತ್ಕೃಷ್ಟ ಸಾಹಿತ್ಯ ಎಂದು ಆಶೀರ್ವಚನವನ್ನು ನೀಡಿದರು.


ಅಶ್ವತ್ಥ ನಗರ, ಎಲ್. ಬಿ. ಎಸ್ ನಗರ ಸ್ಥಳೀಯರ, ಸರಕಾರದ,ಜೆಸಿಐ ಶಿವಮೊಗ್ಗ ವಿವೇಕ್ ನ ಹಾಗೂ ಸ್ಥಳೀಯ ಮುಖಂಡರ ನೆರವಿನಿಂದ ನಿರ್ಮಾಣಗೊಂಡಿರುವ ಉದ್ಯಾನವನ, ಶಿವ ಶಕ್ತಿ ಯೋಗಮಂದಿರದ ವಿಶಿಷ್ಟತೆ ಕುರಿತು ಅಭಿಮಾನದ ಮಾತುಗಳನ್ನಾಡಿದರು.
ಇಂದಿನ ಚಿಂತನ ಕಾರ್ತಿಕದ ಸೇವಾರ್ಥಿಗಳಾಗಿ ಯಶಸ್ವಿಯಾದ ಶರಣ ಈ ವಿಶ್ವಾಸ್, ಸದಸ್ಯರು, ಮಹಾನಗರ ಪಾಲಿಕೆ ಇವರು ಯುವ ನಾಯಕರಾಗಿ ಶಿವಮೊಗ್ಗ ನಗರದ ಅಭಿವೃದ್ಧಿಯಲ್ಲಿ ತಾವು ತೊಡಗಿಸಿಕೊಂಡು ಎಲ್ಲರ ವಿಶ್ವಾಸವನ್ನುಗಳಿಸಿ, ಎಲ್ಲ ಹಿರಿಯರ ಮಾರ್ಗದರ್ಶನ ದೊಂದಿಗೆ ಮುನ್ನಡೆಯುತ್ತಿರುವ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ ಇವರದು.

ಉಜ್ವಲ ಭವಿಷ್ಯ ಇವರದಾಗಲಿ ಎಂದು ಗುರುಗಳು ಆಶೀರ್ವಾದ ನೀಡಿದರು.
ಕಾರ್ತಿಕ ಚಿಂತನ ಕಾರ್ಯಕ್ರಮದ ನಿರೂಪಣೆಯನ್ನು ಅತ್ಯಂತ ಸುಂದರವಾಗಿ ಶರಣ ಜೆಸಿ ಕಾಟನ್ ಜಗದೀಶ್ ಅವರು ವಂದನಾರ್ಪಣೆಯನ್ನು ಶರಣೆ ಜೆಸಿ ಭಾರತಿ ಹೆಚ್. ಡಿ. ಅವರು ನಡೆಸಿಕೊಟ್ಟರು. ಕೊನೆಯಲ್ಲಿ ಪ್ರಸಾದ ವಿನಿಯೋಗದ ವ್ಯವಸ್ಥೆಯನ್ನು ಮಾಡಲಾಗಿತ್ತು.

By admin

ನಿಮ್ಮದೊಂದು ಉತ್ತರ

You missed

error: Content is protected !!