ಶಿವಮೊಗ್ಗ, ನ.3:
ಅಕ್ರಮ, ಅನೈತಿಕ ಚಟುವಟಿಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ಸಿಗುವುದು ಸಹಜ. ಪೊಲೀಸ್ ಇಲಾಖೆ ಸಮಯ ನೋಡಿ ದಾಳಿ, ಪರಿಶೀಲನೆ ನಡೆಸುವುದು ಸಹಜ. ಪೊಲೀಸರು ದಾಳಿ ನಡೆಸಿ ತಪ್ಪು ಕಂಡು ಬಂದಲ್ಲಿ ಅದನ್ನು ಮಾಧ್ಯಮಗಳಿಗೆ ನೀಡುವುದು ಯಥಾವತ್ತಾಗಿ ನೀಡುವುದು ವಾಡಿಕೆ. ಆದರೆ ಸುದ್ದಿ ಬರೆಯುವ, ವಾಹಿನಿಗಳಲ್ಲಿ ಬಿತ್ತರಿಸುವ ಹಿನ್ನೆಲೆಯಲ್ಲಿ ಘಟನೆಯ ಹಿನ್ನೆಲೆ ಗಮನಿಸದೇ ಹೇಗೆಂದರಾಗೆ ಮಾಹಿತಿ ನೀಡೋದು ಎಷ್ಟೋ ಕುಟುಂಬಗಳಲ್ಲಿ, ಅದರಲ್ಲಿನ ಗೌರವಾನ್ವಿತ ಬದುಕು ಕಟ್ಟಿಕೊಂಡ ಹಿರಿಯ ಜೀವಿಗಳಿಗೆ ಆಗುವ ನೋವನ್ನೂ ಗಮನಿಸಬೇಕು ಅಲ್ಲವೇ?
ಇಂತಹದೊಂದು ಪೀಠಿಕೆ ಹಾಕಲು ಕಾರಣ ನಿನ್ನೆ ಸಂಜೆ ಶಿವಮೊಗ್ಗ ನಗರದಲ್ಲಿ ಪೊಲೀಸರು ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿದೆ. ಲಾಡ್ಜ್ ಮಾಲಿಕ ತಪ್ಪು ಮಾಡಿರಬಹುದು. ಅಲ್ಲಿರುವ ಎರಡು ಪ್ರಾಪ್ತ ವಯಸ್ಕರು ಕೊಠಡಿ ಪಡೆದಿದ್ದ ವಿಚಾರ ಅಷ್ಟೊಂದು ಸುದ್ದಿಯಾಗುವ ಅಗತ್ಯವಿರಲಿಲ್ಲ ಅಲ್ಲವೇ?
ಶಿವಮೊಗ್ಗ ಡಿವೈಎಸ್ಪಿ ಬಾಲರಾಜ್ ಹಾಗೂ ಅವರ ತಂಡ ಕೆ.ಆರ್. ಪುರಂ ರಸ್ತೆಯ ಲಾಡ್ಜ್ ಮೇಲೆ ದಾಳಿ ನಡೆಸಿದೆ. ಮಾದ್ಯಮಗಳು ಸುದ್ದಿ ಹುಡುಕುವ ಬರದಲ್ಲಿ ಅಲ್ಲಿಗೆ ಲಗ್ಗೆ ಹಾಕಿವೆ.
ಅಲ್ಲಿ ವಿಚಾರಣೆ ನಡೆಸಿ ಪರಿಶೀಲಿಸಿದೆ. ನಂತರ ಪ್ರಾಪ್ತ ವಯಸ್ಸಿನ ಜೋಡಿಗಳ ಕುಟುಂಬದವರನ್ನು ಕರೆಸಿ ವಿಚಾರಣೆ ನಡೆಸಿ ಅವರಿಗೆ ಕೌನ್ಸಿಂಲಿಂಗ್ ಕೊಡಿಸಿ, ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಸೂಚನೆ ನೀಡಿದೆ.
ಲಾಡ್ಜ್ ವಾಲಿಕರಿಗೆ ಸೂಕ್ತ ಸೂಚನೆ ನೀಡಿ ಕಾನೂನು ಮೀರಿ ನಡೆಯದಂತೆ ಎಚ್ಚರಿಕೆಯ ದೂರು ದಾಖಲಿಸಿದೆ.
ಸುದ್ದಿಯ ವೈಭವೀಕರಣದ ನಡುವೆ ಮಕ್ಕಳ ಹೆತ್ತು ಬೆಳೆಸಿದ ತಂದೆತಾಯಿಯರ ನೋವು ಹಾಗೂ ಗೌರವಿಸುವ ಕೆಲಸ ನಮ್ಮಿಂದ ನಡೆಯಬೇಕಿದೆ ಅಲ್ಲವೇ…?