ಶಿವಮೊಗ್ಗ,ಡಿ.2:
ಇಲ್ಲಿ ಓಡಾಡಬೇಡಿ ಜೋಕೆ, ‘ಅಪಾಯ’ ವಾದರೆ ಅದಕ್ಕೆ (ಮೆಸ್ಕಾಂ..,ನಗರಪಾಲಿಕೆ) ಯಾರು ಹೊಣೆ ಎಂಬ ಹೆಡ್ಡಿಂಗ್ ಹೊತ್ತು ತುಂಗಾತರಂಗ ವೆಬ್ ಹಾಗೂ ಪತ್ರಿಕೆಯಲ್ಲಿ ಮಾಡಿದ್ದ ವರದಿಗೆ ಪಾಲಿಕೆ ಸ್ಪಂದಿಸಿ ಜನರ ಬಗ್ಗೆ ಕಾಳಜಿ ತೋರಿದೆ.
ಶಿವಮೊಗ್ಗ ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿಯ ಶಿವಪ್ಪ ನಾಯಕ ಅರಮನೆ ಮುಂಭಾಗದಲ್ಲಿ ಸುಖಾ ಸುಮ್ಮನೆ ಓಡಾಡಬೇಡಿ. ಓಡಾಡುವುದು ಅನಿವಾರ್ಯವಾದರೆ ತಮ್ಮ ಪಾದ ಇಡುವ ಜಾಗವನ್ನು ನೀಟಾಗಿ ನೋಡುವ ಕೆಲಸ ಮಾಡಿ. ಇಂತಹದೊಂದು ಮಾತನ್ನು ಹೇಳಲೇ ಬೇಕಾಗಿರುವುದು ಅನಿವಾರ್ಯವಾಗಿದೆ ಎನ್ನಲು ಬಲವಾದ ಕಾರಣವಿತ್ತು.
ಈ ಭಾಗದ ಮುಂದಿನ ಫುಟ್ಬಾತ್ ಜಾಗದಲ್ಲಿರುವ ಕಂಬಗಳ ಪುಟ್ಲೆಟ್ ಲ್ಯಾಂಪ್ ಗಳು ಅಂದರೆ ದಾರಿ ದೀಪಗಳು ಕಂಬ ಮುರಿದು ಹಾಳಾಗಿವೆ.
ಕನಿಷ್ಠ ಮೂರು ಕಂಬಗಳು ಮುರಿದಿದ್ದು, ಕೆಳಗೆ ವಿದ್ಯುತ್ ತಂತಿ ಎಲ್ಲಾ ಪಿಲ್ಲಿಯಾಗಿದೆ ಕರೆಂಟ್ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಆ ವ್ಯವಸ್ಥೆ ಇನ್ನೂ ಬದಲಾಗಿಲ್ಲ. ಅಕಸ್ಮಾತ್ ಹೆಚ್ಚು ಕಮ್ಮಿ ಆದರೆ ಯಾರು ಹೊಣೆಯಾಗುತ್ತಾರೆ.
ಶಿವಮೊಗ್ಗದ ವಾಸವಿ, ಮಹಾವೀರ ಸೇರಿದಂತೆ ಹಲವು ಶಾಲೆಗಳನ್ನು ಹೊಂದಿರುವ ಈ ಜಾಗದಲ್ಲಿ ನಿತ್ಯ ಸಾವಿರಾರು ಮಕ್ಕಳು, ಪೋಷಕರು, ಅಲ್ಲಿನ ನಿವಾಸಿಗಳು, ದೇವಸ್ಥಾನಕ್ಕೆ ಹಾಗೂ ಅರಮನೆಗೆ ಬರುವ ಭಕ್ತರು ಮತ್ತು ಪ್ರವಾಸಿಗರು ಈ ತಂತಿಯನ್ನು ತುಳಿದರೆ ಮುಂದೆ ನಡೆಯುವ ಅನಾಹುತಕ್ಕೆ ಯಾರು ಕಾರಣ ಎಂದಿದ್ದ ವರದಿಗೆ ಸ್ಪಂದಿಸಿರುವ ಪಾಲಿಕೆ ನಿನ್ನೆ ಎಲ್ಲಾ ಕಂಬಿಗಳ ಜಾಗವನ್ನು ಭದ್ರಗೊಳಿಸಿದೆ.