ಶಿವಮೊಗ್ಗ,ಡಿ.೦೨: ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರ ರೂಪವಾಗಿ ಕೇವಲ ೨೦೦೦ ರೂ.ಗಳನ್ನು ಘೋಷಿಸಿರುವುದನ್ನು ಭಾರತೀಯ ಕಿಸನ್ ಸಂಘ-ಕರ್ನಾಟಕ ಪ್ರದೇಶ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಸಮಿತಿಯ ರಾಷ್ಟ್ರೀಯ ಕಾರ್ಯಕಾರಿಣಿ ಕಾರ್ಯದರ್ಶಿ ವೀಣಾ ಸತೀಶ್ ಹೇಳಿದರು.

ಅವರು ಇಂದು ಪ್ರೆಸ್‌ಟ್ರಸ್ಟ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರಗಾರದಿಂದ ರಾಜ್ಯದ ರೈತರು ತತ್ತರಿಸಿ ಹೋಗಿದ್ದಾರೆ. ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮೆಕ್ಕೆಜೋಳ, ಭತ್ತ, ರಾಗಿ ತೋಟದ ಬೆಳೆಗಳು ಸೇರಿದಂತೆ ಅಪಾರ ನಷ್ಟವಾಗಿದೆ. ಇತಂಹ ಸಂದರ್ಭದಲ್ಲಿ ಮುಖ್ಯುಮಂತ್ರಿ ಸಿದ್ದರಾಮ್ಯಯ ಅವರು ಕೇವಲ ೨೦೦೦ ರೂ.ಗಳನ್ನು ಪರಿಹಾರವಾಗಿ ಘೋಷಿಸಿರುವುದು ಖಂಡನೀಯ ಎಂದರು.

ರೈತರು ಒಂದು ಎಕರೆ ಮೆಕ್ಕೆಜೋಳಕ್ಕೆ ೨೦ ಸಾವಿರ, ಭತ್ತಕ್ಕೆ ೩೦ ಸಾವಿರ ಹಾಗೂ ಅಡಿಕೆ ಸೇರಿದಂತೆ ತೋಟದ ಬೆಳೆಗಳಿಗೆ ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಸರ್ಕಾರ ಅವೈಜ್ಞಾನುಕವಾಗಿ ಪರಿಹಾರ ಘೋಷಿಸಿದೆ. ಮೆಕ್ಕೆಜೋಳಕ್ಕೆ ಎಕರೆಗೆ ೨೦ ಸಾವಿರ, ಭತ್ತಕ್ಕೆ ೩೦ ಸಾವಿರ, ತೋಟದ ಬೆಳೆಗಳಿಗೆ ಕನಿಷ್ಟ ೫೦ ಸಾವಿರ ರೂ. ಪರಿಹಾರ ಘೋಷಿಸಬೇಕು ಮತ್ತು ಕೇಂದ್ರ ಸರ್ಕಾರವು ಕೂಡ ರಾಜ್ಯದ ರೈತರ ನೆರವಿಗೆ ಬರಬೇಕೆಂದು ಅಗ್ರಹಿಸಿದರು.

ಮೆಲೆನಾಡು ಭಾಗದಲ್ಲಿ ಎಲೆ ಚುಕ್ಕೆ ರೋಗ ನಿವಾರಣೆಗೋಸ್ಕರ ಹಿಂದಿನ ಸರ್ಕಾರ ೧೦ ಕೋಟಿ.ರೂ.ನೀಡಿದ್ದು, ಆದರೆ ಈಗಿನ ಸರ್ಕಾರ ಅ ಬಗ್ಗೆ ನುರ್ಲಕ್ಷ್ಯ ವಹಿಸಿದೆ. ಕೂಡಲೇ ಹಣವನ್ನು ಬಿಡುಗಡೆ ಮಾಡಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಎಲ್ಲಾ ತಾಲೂಕುಗಳಲ್ಲಿಯೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಿ.ಚೆನ್ನಪ್ಪ, ರಾಜ್ಯ ಸಮಿತಿ ಸದಸ್ಯ ಭೀಮರಾವ್, ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ಪ್ರವೀಣ್ ಪಟೇಲ್, ಮಹಿಳಾ ಮುಖಂಡರಾದ ಸುಧಾ ಪರಮೇಶ್ವರಪ್ಪ, ನಂದೀಶ್‌ಗೊಗ್ಗ, ಕೆ.ಸಿ.ಸದಾಶಿವಪ್ಪ, ಪರಮೇಶ್ವರಪ್ಪ ಎನ್. ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!