ಶಿವಮೊಗ್ಗ: ಕಠಿಣ ಪರಿಶ್ರಮ ಹಾಗೂ ಬದ್ಧತೆಗಳಿಂದ ಪ್ರೊಫೆಶನಲ್ ಕೋರ್ಸ್‌ಗಳಲ್ಲಿ ಯಶಸ್ಸು ಸಾಧ್ಯ ಎಂದು ದ ಇನ್ಸಿಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ, ಬೆಂಗಳೂರು ಚಾಪ್ಟರ್‌ನ ಅಧ್ಯಕ್ಷ ಸಿ.ಎಸ್. ಪರಮೇಶ್ವರ ಜಿ ಭಟ್ ಹೇಳಿದರು.


ನಗರದ ಪಿಇಎಸ್ ಐಎಮ್‌ಎಸ್ ಪದವಿ ಕಾಲೇಜಿನ ಐಕ್ಯುಎ ಸೆಲ್, ವಾಣಿಜ್ಯ ಶಾಸ್ತ್ರ ವಿಭಾಗ ಹಾಗೂ ಶಿವಮೊಗ್ಗ ಡಿಸ್ಟಿಕ್ಟ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಮತ್ತು ಅಡ್ವಾನ್ಸ್‌ಡ್ ಸ್ಕಿಲ್ ಅಕಾ ಡೆಮಿ ಇವರ ಸಹಯೋಗದಲ್ಲಿ ಆಯೋಜಿ ಸಿದ್ದ ಸಿಎಸ್ / ಸಿಎ ಕೆರಿಯರ್ ಗೈಡೆನ್ಸ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.


ಯಾವುದೇ ಒಂದು ಕೋರ್ಸ್‌ನ್ನು ಆಯ್ಕೆ ಮಾಡಿಕೊಳ್ಳುವಾಗ ನಾವು ಕೆಲವು ಮಾನದಂಡಗಳನ್ನು ಇರಿಸಿಕೊಂಡು ನಿರ್ಧಾರ ಮಾಡುತ್ತೇವೆ. CA,CS & CMA ಗಳಂತಹ ಪ್ರೊಫೆಶನಲ್ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಆ ಕೋರ್ಸ್‌ನ ಫ್ಲೆಕ್ಸಿಬಿಲಿಟಿ, ಮುಂದೆ ಸಿಗಬಹುದಾದ ಅವಕಾಶಗಳು, ಹುದ್ದೆಯ ಘನತೆ ಹಾಗೂ ಆರ್ಥಿಕವಾಗಿ ಲಾಭ ಮುಂತಾದ ಮಾನದಂಡ ಗಳನ್ನು ಇರಿಸಿಕೊಂಡು ನೋಡಿದಾಗ ಸಾಕಷ್ಟು ಪ್ರಯೋಜನಗಳಿದ್ದು ಈ ಕ್ಷೇತ್ರಗಳಲ್ಲಿ ಹೇರಳವಾದ ಅವಕಾಶಗಳಿವೆ. ಯಾವುದೇ ಒಂದು ಕಂಪನಿಯನ್ನು ಆರಂಭಿಸುವಲ್ಲಿ ಅಥವಾ ಮುನ್ನಡೆಸುವಲ್ಲಿ CS ಗಳ ಪಾತ್ರ ಮಹತ್ವಪೂರ್ಣವಾದದ್ದು ಎಂದರು.


ಈ ಕೋರ್ಸ್‌ನ್ನು ನೀವುಗಳು ನಿಮ್ಮ ಶಿಕ್ಷಣದ ಜೊತೆಗೆ ಕಠಿಣವಾದ ಪರಿಶ್ರಮ ಹಾಗೂ ಬದ್ಧತೆಗಳೊಂದಿಗೆ ಪೂರ್ಣಗೊಳಿ ಸಲು ಸಾಧ್ಯ. ಇಂದಿನ ಜಾಗತೀಕರಣ ಹೊತ್ತಿನಲ್ಲಿ ಹೇರಳವಾದ ಉದ್ಯೋಗ ಅವಕಾಶಗಳು ಈ ಕ್ಷೇತ್ರದಲ್ಲಿ ಇದ್ದು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದುದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿ ಸಿದ್ದ ಪಿಇಎಸ್ ಟ್ರಸ್ಟ್‌ನ ಮುಖ್ಯ ಆಡಳಿತ ಸಂಯೋಜಕ ಡಾ. ನಾಗರಾಜ ವಹಿಸಿದ್ದರು.


ಸಮಾರಂಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಎನ್, ಕಾರ್ಯದರ್ಶಿ ವಸಂತ್ ಹೋಬಳಿ ದಾರ್, ಸವಿತ ಮಾಧವ್, ಸಿಇಒ ಅಡ್ವಾನ್ಸ್ ಡ್ ಸ್ಕಿಲ್ ಅಕಾಡೆಮಿ, ಹಾಗೂ ವಿವಿಧ ಭಾಗಗಳಿಂದ ಬಂದಂತಹ ICSI ನ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಡಾ. ಅರುಣಾ ಎ. ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಮಂಜುನಾಥ ಹೆಚ್. ಆರ್. ಹಾಗೂ ನಿರ್ವಹಣಾಶಾಸ್ರ ವಿಭಾಗದ ಮಖ್ಯಸ್ಥ ಮೋಹನ್ ಡಿ. ಯವರು ಭಾಗವಹಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!