ಭದ್ರಾವತಿ ಕಂಟೈನ್ಮೆಂಟ್ ಜೋನ್ ಪರಿಶೀಲಿಸುತ್ತಿರುವ ಕೊರೊನಾ ವಾರಿಯರ್ಸ್


ಶಿವಮೊಗ್ಗ : ಇಡೀ ವಿಶ್ವವನ್ನೆ ತಲ್ಲಣಗೊಳಿಸರುವ ಕೋವಿಡ್ 19 ಕೊರೊನಾ ಸೊಂಕಿತರ ಸಂಖ್ಯೆ ಮಲೆನಾಡನ್ನ ಅದರಲ್ಲೂ ಶಿವಮೊಗ್ಗವನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಇಂದು ಮತ್ತೆ ಮೂವರಲ್ಲಿ ಸೊಂಕು ಪತ್ತೆಯಾಗಿರುವ ಶಂಕೆಯನ್ನು ಆರೋಗ್ಯ ಇಲಾಖೆ ಮೂಲಗಳಿಂದ ಬಂದಿದೆ.
ಈಗಾಗಲೇ 91 ಸೊಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನಿಗಧಿತ ಆಸ್ಪತ್ರೆಯಿಂದ ಸಾಕಷ್ಟು ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈಗಿನ ಸಂಖ್ಯೆ ಶತಕದ ಸಮೀಪ ಬಂದಿದೆ.
ಶಿವಮೊಗ್ಗ ಕುಂಬಾರ ಗುಂಡಿ ನಂತರ ವಿನೋಬನಗರದಲ್ಲಿ ಕಾಣಿಸಿಕೊಂಡದ್ದು ಇಡೀ ಭಾಗವನ್ನು ತಲ್ಲಣಗೊಳಿಸಿದೆ. ಬೆಂಗಳೂರಿನಿಂದ ಬಂದು ಕ್ವಾರಂಟೈನ್ ಮುಗಿಸಿ ಕಳೆದ ಎರಡು ದಿನದಿಂದ ಮನೆಗೆ ಮರಳಿದ್ದ ಯುವಕನಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿರುವುದು ಇಡೀ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದ್ದಲ್ಲದೇ ಆ ಯುವಕನ ಸಮೀಪದ ಹಾಗೂ ಎರಡನೇ ಹಂತದ ಸಂಪರ್ಕದ ಸುಮಾರು ಇಪ್ಪತ್ತು ಜನರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ವಿನೋಬನಗರ ಶಿವಪ್ಪ ನಾಯ್ಕ ಬಡಾವಣೆಯನ್ನು ಒಟ್ಟಾರೆ ಸೀಲ್ಡೌನ್ ಮಾಡಲಾಗಿದೆ. ಸಮೀಪದಲ್ಲಿಯೇ ತರಕಾರಿ ಮಾರುಕಟ್ಟೆ ಇರುವುದು ಸಹ ಈ ಆತಂಕಕ್ಜೆ ಕಾರಣ ಎನ್ನಲಾಗಿದೆ.
ದುರಂತವೆಂದರೆ ಶಿವಮೊಗ್ಗದಿಂದ ಪಾದರಾಯನಪುರದ ಭದ್ರತೆಗೆ ಹೋಗಿದ್ದ ಸುಮಾರು ಹತ್ತು ಪೊಲೀಸರಿಗೆ ಈ ಸೊಂಕು ಕಾಣಿಸಿಕೊಂಡಿದ್ದು ಮತ್ತೊಂದು ಆತಂಕಕ್ಕೆ ಕಾರಣ.
ಪ್ರಸ್ತಕ ಚಂದದ ಮುಂಗಾರು ಆರಂಭಗೊಂಡಿದೆ. ಶೀತದ ವಾತಾವರಣದ ಹಿನ್ನೆಲೆಯಲ್ಲಿ ಕೊರೊನಾ ಇನ್ನಷ್ಟು ಹೆಚ್ಚುವ ಹಾಗೂ ಹರಡುವ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ 11208 ಜನರ ಪರೀಕ್ಷೆ ಆಗಿದ್ದು 91 ಜನರಲ್ಲಿ ಸೊಂಕು ಕಂಡುಬಂದಿದೆ. ಉಳಿದಂತೆ 10922 ಜನರಲ್ಲಿ ನೆಗಿಟೀವ್ ಬಂದಿದೆ. 195 ಜನರ ಫಲಿತಾಂಶ ಬರಬೇಕಿದೆ. ಹತ್ತು ಕಂಟೈನ್ ಮೆಂಟ್ ಜೋನ್ ಗಳನ್ನ ಸೀಲ್ಡೌನ್ ಮಾಡಲಾಗಿದೆ. ಜನರ ಎಚ್ಚರವಷ್ಟೆ ಇಲ್ಲಿ ನೆಮ್ಮದಿ ನೀಡಲು ಸಾಧ್ಯ.

By admin

ನಿಮ್ಮದೊಂದು ಉತ್ತರ

You missed

error: Content is protected !!