
ಶಿವಮೊಗ್ಗ: ನಗರದ ಹೊರವಲಯದಲ್ಲಿರುವ ಗೆಜ್ಜೇನಹಳ್ಳಿ, ಸೋಮಿನಕೊಪ್ಪದಲ್ಲಿ ಚಿರತೆಯೊಂದು ಓಡಾಡುತ್ತಿದೆ ಎಂದು ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹೌದು ಇಂದು ಬೆಳಗ್ಗೆ ವಾಟ್ಸಪ್ಗಳಲ್ಲಿ ಹರಿದಾಡುತ್ತಿರುವ ಓರ್ವ ವ್ಯಕ್ತಿಯ ವಿಡಿಯೋ ಸಾರ್ವಜನಿಕರಲ್ಲಿ ಭಯ ಮೂಡಿದೆ.

ವಿಡಿಯೋದಲ್ಲಿ ಏನಿದೆ.
ಅಪರಿಚಿತ ವ್ಯಕ್ತಿಯೊಬ್ಬ ವಿಡಿಯೋದಲ್ಲಿ ಸೋಮಿನಕೊಪ್ಪ ಪ್ರೆಸ್ ಕಾಲೋನಿ, ಗೆಜ್ಜೇನಹಳ್ಳಿ ಸಮೀಪದಲ್ಲಿ ಒಂದು ಚಿರತೆ ಇದೆ. ನಿನ್ನೆ ಗೆಜ್ಜೇನಹಳ್ಳಿಯಲ್ಲಿ ಒಂದು ಹಸುವನ್ನು ತಿನ್ನಲು ಯತ್ನಿಸಿದೆ ಹಾಗೂ ಗೆಜ್ಜೇನಹಳ್ಳಿಗೆ ಹೋಗುವ ಮಾರ್ಗದಲ್ಲಿರುವ ಸೇತುವೆ ಸಮೀಪ ನಾಯಿಯೊಂದನ್ನು ತಿನ್ನಲು ಯತ್ನಿಸಿದೆ. ಹಾಗಾಗೀ ಈ ಸಮೀಪದಲ್ಲಿ ಓಡಾಡುವವರು ಸ್ವಲ್ಪ ಹುಷಾರಾಗಿರಿ. ಚಿರತೆ ಕಂಡರೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲು ತಿಳಿಸಿದ್ದಾರೆ.
ಚಿರತೆ ಇದೇಯೋ.. ಇಲ್ಲವೋ.. ಎಂಬ ನಿಖರವಾದ ಮಾಹಿತಿ ತಿಳಿದು ಬರಬೇಕಿದೆ.