ಶಿವಮೊಗ್ಗ,ಡಿ.03:
ಇಂದು ಬೆಳಗ್ಗೆ ಬಜರಂಗದಳದ ಕಾರ್ಯಕರ್ತ ನಾಗೇಶ್ ಎಂಬುವರ ಮೇಲೆ ವೈಯಕ್ತಿಕ ವಿಚಾರಕ್ಕೆ ಹಲವರು ಹಲ್ಲೆ ನಡೆಸಿದ್ದಾರೆನ್ನಲಾದ ವಿಷಯಕ್ಕೆ ಸಂಬಂಧಪಟ್ಟಂತೆ ಇಂದು ಗಾಂಧಿ ಬಜಾರ್ ನ ಚೋರ್ ಬಜಾರ್‌ನಲ್ಲಿ ಪ್ರಕ್ಷ್ಯುಬ್ದ ವಾತಾವರಣ ನಿರ್ಮಾಣವಾಗಿದ್ದು ಪರಸ್ಥಿತಿಯ ಸಂಪೂರ್ಣ ಹತೋಟಿಗೆ ತರಲು ಜಿಲ್ಲಾಡಳಿತ, ಜಿಲ್ಲಾ ರಕ್ಷಣಾ ಇಲಾಖೆ, ತಾಲ್ಲೂಕು ಆಡಳಿತ ಬಿಗಿಕ್ರಮ ಕೈಗೊಂಡಿದೆ.
ಶಿವಮೊಗ್ಗ ತಾಲೂಕು ದಂಡಾಧಿಕಾರಿ ಹಾಗೂ ತಹಸಿಲ್ದಾರ್ ನಾಗರಾಜ್ ಅವರು ಇಂದು ಮಧ್ಯಾಹ್ನ 3 ಗಂಟೆಯಿಂದ ಡಿಸೆಂಬರ್ 3ರ ಶನಿವಾರ ಬೆಳಿಗ್ಗೆ 10 ಗಂಟೆಯವರೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಪ್ರಕಾರ ಪ್ರತಿನಿರ್ಭಂದಕಾಜ್ಞೆ ಜಾರಿಗೊಳಿಸಿದ್ದಾರೆ.
ಈ ಆಜ್ಞೆ ಪ್ರಕಾರ ಐದಕ್ಕಿಂತ ಹೆಚ್ಚು ಜನ ಗುಂಪಾಗಿ ಸೇರುವಂತಿಲ್ಲ ಯಾವುದೇ ಸಭೆ ಸಮಾರಂಭ ವಿಜಯೋತ್ಸವ ಹಾಗೂ ಇತರ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ದೊಣ್ಣೆ ಕತ್ತಿ, ಈಟಿ ಅಂತಹ ಯಾವುದೇ ವಸ್ತುಗಳನ್ನು ತರುವಂತಿಲ್ಲ, ಬಳಸುವಂತಿಲ್ಲ. ಯಾವುದೇ ವ್ಯಕ್ತಿಗಳ ಪ್ರತಿಕೃತಿ ದಹನ, ಬಹಿರಂಗ ಘೋಷಣೆ ಅನಗತ್ಯ ಪ್ರಚೋದನೆ ನೀಡುವಂತಹ ಕರ್ತವ್ಯ ಮಾಡುವಂತಿಲ್ಲ. ಯಾವುದೇ ಖಾಸಗಿ ಹಾಗೂ ಸರ್ಕಾರಿ ವಸ್ತುಗಳನ್ನು ಹಾನಿಗೊಳಿಸುವ ವಿರೂಪಗೊಳಿಸುವ ಪ್ರಕ್ರಿಯೆಗಳಲ್ಲಿ ತೊಡಗುವಂತಿಲ್ಲ. ಯಾವುದೇ ಜಾತಿ ಧರ್ಮ ಗಳಿಗೆ ವಿರುದ್ಧವಾಗಿ ಅಥವಾ ಪರವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ದ ಮಾತನಾಡುವಂತಿಲ್ಲ.
ವಿವರ:
ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿ ಆಗಾಗಿದೆ ಇದಾಗಿದೆ ಎಂದು ಬೆಳಿಗ್ಗೆಯಿಂದ ಚಿಕ್ಕ ಘಟನೆಗಳನ್ನು ದೊಡ್ಡ ಘಟನೆಗಳಾಗಿ ಬಿಂಬಿಸುವ ಸಾಮಾಜಿಕ ಜಾಲತಾಣ ಹಾಗೂ ಫೋನ್ ಕರೆಗಳ ಹಾವಳಿ ನಿಜಕ್ಕೂ ಖಂಡನೀಯ.
ಸಂದರ್ಭದಲ್ಲಿ ಪೊಲೀಸರು ಭಾರಿ ಮುಂಜಾಗೃತ ಕ್ರಮ ಕೈಗೊಂಡಿದ್ದರು. ಸಹ ಚೋರ್ ಬಜಾರ್‌ನಲ್ಲಿ ಓರ್ವನ ಮೇಲೆ ಹಲ್ಲೆ ನಡೆಸಿದ್ದ ವಿಷಯ ಇಡೀ ಏರಿಯಾವನ್ನು ಆತಂಕಕ್ಕೆ ದೂಡಿತ್ತು.
ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜ್, ಡಿವೈಎಸ್‌ಪಿ ಉಮೇಶ್ ಈಶ್ವರ್ ಚಂದ್ರ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ವಸಂತ್ ಕುಮಾರ್, ಸಂಜೀವ್ ಕುಮಾರ್, ಹರೀಶ್ ಕುಮಾರ್ ಹಾಗೂ ಎಸ್‌ಐಗಳಾದ ಶಂಕರಮೂರ್ತಿ, ಉಮೇಶ್ ಕುಮಾರ್ ಸೇರಿದಂತೆ ಭಾರಿ ದೊಡ್ಡ ತಂಡ ಗಾಂಧಿ ಬಜಾರ್‌ನಲ್ಲಿ ಬೀಡು ಬಿಟ್ಟು ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಾಂಧಿ ಬಜಾರ್‌ನ ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿವೆ.
ಗಾಂಧಿ ಬಜಾರ್‌ನ ಚೋರ್ ಬಜಾರ್‌ನಲ್ಲಿ ಪ್ರಕ್ಷ್ಯಬ್ದ ವಾತಾವರಣ ನಿರ್ಮಾಣವಾಗಿದ್ದು, ಇದಕ್ಕೆ ಬಜರಂಗದಳದ ಕಾರ್ಯಕರ್ತ ನಾಗೇಶ್ (28) ಎಂಬಾತನ ಮೇಲೆ ಇಂದು ಬೆಳಗ್ಗೆ ನೆಹರೂ ಕ್ರೀಡಾಂಗಣದಿಂದ ಮನೆಗೆ ವಾಪಾಸ್ ಬರುತ್ತಿದ್ದಾಗ ಬೈಕ್‌ನಲ್ಲಿ ಬಂದ ನಾಲ್ವರು ದೊಣ್ಣೆಯಿಂದ ಹಲ್ಲೆ ಮಾಡಿದ್ದು ಕಾರಣವೆನ್ನಲಾಗಿದೆ.
ಲಷ್ಕರ್ ಮೊಹಲ್ಲಾ ಹಾಗೂ ಟ್ಯಾಂಕ್ ಮೊಹಲ್ಲಾಗಳಲ್ಲೂ ಜನಗಳ ಗುಂಪುಗೂಡುವಿಕೆ ನಡೆದ್ದಿತ್ತೆನ್ನುವ ಊಹಾಪೋಹಾ ಹೇಳಿಕೆಗಳು ಕೇಳಿ ಬರುತ್ತಿವೆ. ಸುಳ್ಳು ಹೇಳಿಕೆಗಳನ್ನು ನಂಬದಿರಿ ಶಾಂತಿ ಕಾಪಾಡಲು ಬದ್ಧರಾಗಿರಿ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜ್ ತಿಳಿಸಿದ್ದಾರೆ.
ಸ್ಥಳಕ್ಕೆ ಐಜಿಪಿ,ಜಿಲ್ಲಾಡಳಿತದ ಅಧಿಕಾರಿಗಳು, ತಹಸಿಲ್ದಾರ್ ನಾಗರಾಜ್ ಸೇರಿದಂತೆ ಹಲವರು ಭೇಟಿ ನೀಡಿದ್ದರು.