ಶಿವಮೊಗ್ಗ: ಶತ ಶತಮಾನಗಳಿಂದಲೂ ಕನ್ನಡ ನಾಡಿನಲ್ಲಿ ಹುಟ್ಟಿ ಮನಸ್ಸು ಮತ್ತು ರಕ್ತದಲ್ಲಿ ಕನ್ನಡ ಹಾಸುಹೊಕ್ಕಾಗಿರುವ ಹಿಂದೂ ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಆಧ್ಯತೆ ಕೊಟ್ಟು, ಕನ್ನಡದ ಮಣ್ಣಲ್ಲೆ ಹುಟ್ಟಿ ಬೆಳೆದು ಕನ್ನಡ ಮಣ್ಣಿಗೆ ಚಿರ ಋಣಿಯಾಗಿರುವ ಮರಾಠ ಸಮಾಜದ ಬಗ್ಗೆ ಕೆಲ ಸಂಘಟನೆಗಳು ಅವಹೇಳನಕಾರಿ ಮಾತುಗಳನ್ನಾಡುತ್ತಿದ್ದು, ಇದನ್ನು ಖಂಡಿಸುವುದಾಗಿ ಶಿವಮೊಗ್ಗ ಗ್ರಾಮಾಂತರ ಕನ್ನಡ ಮರಾಠ ಸಮಾಜದ ಪ್ರಮುಖರಾದ ಬಾಳೋಜಿ ಕೃಷ್ಣೋಜೀರಾವ್ ಮಲ್ಲಪುರ ಹೇಳಿದ್ದಾರೆ.
ಅವರು ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ತಾತ ಮುತ್ತಜ್ಜನ ಕಾಲದಿಂದಲೂ ಮರಾಠ ಸಮಾಜ ಹಿಂದೂತ್ವದ ಉಳಿವಿಗಾಗಿ ಅನೇಕ ಕೊಡುಗೆಗಳನ್ನು ನೀಡಿದೆ. ಶಿವಾಜಿ ಮಹಾರಾಜರು ಕಂಡ ಹಿಂದವೀ ಸಾಮ್ರಾಜ್ಯದ ಕಲ್ಪನೆ ಕನ್ನಡ ಮಣ್ಣಿನ ವಿಜಯನಗರ ಸಾಮ್ರಾಜ್ಯದ ಪಳೆಯುಳಿಕೆಗಳ ಎದುರಲ್ಲಿ ಕನ್ನಡ ನೆಲದಲ್ಲೇ ಮೂಡಿಬಂದದ್ದಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮನ ಕಾಲದಲ್ಲೇ ಆಕೆ ಶಿವಾಜಿ ಮಹಾರಾಜರ ವಂಶವನ್ನು ಕಾಪಾಡಿದ್ದು, ಇತಿಹಾಸವಾಗಿದ್ದು, ಭಾರತದ ಇತಿಹಾಸದಲ್ಲೇ ಔರಂಗ ಜೇಬನನ್ನು ೩ ಬಾರಿ ಸೋಲಿಸಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದು ಕೂಡ ಕೆಳದಿ ಚೆನ್ನಮ್ಮಾಜಿಯವರನ್ನು ಇತಿಹಾಸದಲ್ಲೇ ಎಂದೂ ಮರೆಯಲಾಗದ ವಿಷಯ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕನ್ನಡ ನಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ೪೦-೫೦ ಲಕ್ಷ ಕನ್ನಡ ಮರಾಠ ಸಮಾಜ ಬಾಂಧವರಿಗೆ ಕನ್ನಡ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಿರುವುದು ಸಮಾಜಕ್ಕೆ ಸಂದ ಗೌರವವೆಂದು ನಮ್ಮ ಸಮಾಜವೂ ಭಾವಿಸುತ್ತಿದ್ದು, ಮುಖ್ಯ ಮಂತ್ರಿಗಳಿಗೆ ಮತ್ತು ಈ ಸರ್ಕಾರಕ್ಕೆ ಸಮಾಜದ ವತಿಯಿಂದ ಹೃತ್ಪೂರ್ವಕವಾದ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿ. ರಾಮರಾವ್ ಕೋರೆಹಾರನ್ನಳ್ಳಿ, ರಂಗೋಜಿ ರಾವ್ ತಡಸ, ಹೆಚ್. ರಾಜರಾವ್, ರಾಮಚಂದ್ರ ಕದಮ್, ಎಂ. ಮಲ್ಲೇಶಪ್ಪ, ಅಭಿಲಾಶ್ ಸಿಂದೆ, ಚಂದ್ರೋಜಿರಾವ್ ಮೊದಲಾದವರು ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!