ಶಂಕರಘಟ್ಟ, ಸೆ. 26:

ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಭದ್ರಾವತಿ ಆಕಾಶವಾಣಿ ಸಹಯೋಗದಲ್ಲಿ ಸೆಪ್ಟೆಂಬರ್ 26ರಿಂದ ಪ್ರತಿ ಮಂಗಳವಾರ ಬೆಳಿಗ್ಗೆ 7 ಗಂಟೆ 15 ನಿಮಿಷದಿಂದ 7 ಗಂಟೆ 30 ನಿಮಿಷದವರೆಗೆ ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತ ವಿಶೇಷ 15 ಕಂತುಗಳ ಉಪನ್ಯಾಸ ಮಾಲಿಕೆ ಪ್ರಸಾರವಾಗಲಿದೆ


ಡಾ. ಎಸ್. ನರೇಂದ್ರ ಕುಮಾರ್, ಎಂ.ಎನ್. ಸುಂದರ್‌ರಾಜ್, ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್, ಡಾ. ಜಗನ್ನಾಥ ಕೆ. ಡಾಂಗೆ, ಡಾ. ಶುಭಾ ಮರವಂತೆ, ಡಾ. ಹಾ. ಮ. ನಾಗಾರ್ಜುನ ಉಪನ್ಯಾಸ ನೀಡಲಿದ್ದಾರೆ.


ಪ್ರತಿ ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೆಯನ್ನು ಕೇಳಲಾಗುವುದು. ಇದಕ್ಕೆ ಸರಿ ಉತ್ತರ ನೀಡಿದವರಿಗೆ ಬಹುಮಾನ ನೀಡಿ ಪುರಸ್ಕರಿಸಲಾಗುವುದು. ಉತ್ತರವನ್ನು ಭದ್ರಾವತಿ ಆಕಾಶವಾಣಿ ಕೇಂದ್ರದ ವಾಟ್ಸ್ಪ್ಯಾಪ್ ಸಂಖ್ಯೆ: 9481572600 ಗೆ ಅದೇ ದಿನ ಕಳುಹಿಸಬೇಕು.
ಈ ಕಾರ್ಯಕ್ರಮ ಭದ್ರಾವತಿ ಆಕಾಶವಾಣಿ ಎಫ್ಎಂ 103.5 ಹಾಗೂ ತರಂಗಾತಂರ MW675 khzನಲ್ಲಿ ಹಾಗೂ ವಿಶ್ವದಾದ್ಯಂತ ‘News on Air’ ಆ‌ಪ್ ನಲ್ಲಿ ಕೇಳಬಹುದು ಎಂದು ಕುವೆಂಪು ವಿವಿಯ ಡಾ. ಬಿ.ಆರ್.ಅಂಬೇಢ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!