ಬೀಜಿಂಗ್‌: ಕೋವಿಡ್‌ ಈ ಹೆಸರು ಕೇಳಿದರೇ ನಾವು ನೀವೆಲ್ಲರೂ ಬೆಚ್ಚಿಬೀಳುತ್ತವೆ. ಅದರ ಭೀಕರತೆ ಅಂತಹದ್ದು, ಜಗತ್ತಿನ ಆರ್ಥಿಕತೆ, ಜನರ ಆರೋಗ್ಯವನ್ನು ವಿನಾಶಕ್ಕೆ ದೂಡಿದ ಮಹಾಮಾರಿಯದು. ಇಂತಹ ಕೋವಿಡ್‌ ಮತ್ತೊಮ್ಮೆ ಬಾರದಿರಲಿ ಎಂಬುದು ಎಲ್ಲರ ಆಶಯ. ಆದರೆ ಜಗತ್ತಿನ ಪ್ರಸಿದ್ಧ ಸಂಶೋಧಕರೊಬ್ಬರು ಕೋವಿಡ್‌ ಮತ್ತೊಮ್ಮೆ ಬರಲಿದೆ ಎಂದು ಹೇಳಿದ್ದಾರೆ.


ವೈರಸ್‌ಗಳ ಕುರಿತು ತನ್ನ ವ್ಯಾಪಕ ಸಂಶೋಧನೆಯಿಂದಾಗಿ “ಬ್ಯಾಟ್‌ವುಮನ್ ಎಂದು ಪ್ರಸಿದ್ಧವಾಗಿರುವ ಚೀನಾದ ಪ್ರಮುಖ ವೈರಾಲಜಿಸ್ಟ್ ಶಿ ಝೆಂಗ್ಲಿ ಆತಂಕಕಾರಿ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಭವಿಷ್ಯದಲ್ಲಿ ಮತ್ತೊಂದು ಕೊರೊನಾವೈರಸ್ ಬರುವ ಸಾಧ್ಯತೆಯಿದೆ ಎಂದು ತಮ್ಮ ಸಹೋದ್ಯೋಗಿಗಳೊಂದಿಗೆ ಸೇರಿ ಬರೆದ ಸಂಶೋಧನಾ ಲೇಖನದಲ್ಲಿ ಶಿ ಹೇಳಿದ್ದಾರೆ.
ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಶಿ ಮತ್ತು ಅವರ ತಂಡವು 40 ವಿವಿಧ ಕೊರೊನಾವೈರಸ್ ಪ್ರಭೇದಗಳ ಮೌಲ್ಯಮಾಪನವನ್ನು ನಡೆಸಿದ್ದು, ಇದರಲ್ಲಿ ಅರ್ಧದಷ್ಟು “ಅತ್ಯಂತ ಅಪಾಯಕಾರಿ” ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ಆರು ಈಗಾಗಲೇ ಮಾನವರಲ್ಲಿ ರೋಗಗಳನ್ನು ಉಂಟುಮಾಡಿದೆ. ಆದರೆ ಪುರಾವೆಗಳನ್ನು ನೋಡಿದರೆ ಮೂರು ಇತರ ಪ್ರಾಣಿ ಪ್ರಭೇದಗಳಿಗೆ ಸೋಂಕು ತಗುಲಿವೆ ಎಂದು ಸೂಚಿಸಿವೆ.


ಮತ್ತೊಂದು ಕೊರೊನಾವೈರಸ್ ಸಂಬಂಧಿತ ಸಾಂಕ್ರಾಮಿಕ ಹೆಚ್ಚಿನ ಸಂಭವನೀಯತೆಯೊಂದಿಗೆ “ಭವಿಷ್ಯದ ಕಾಯಿಲೆಯ ಹೊರಹೊಮ್ಮುವಿಕೆ” ಬಹುತೇಕ ಖಚಿತವಾಗಿದೆ ಎಂದು ಸಂಶೋಧನೆ ಹೇಳಿದೆ. ಜನಸಂಖ್ಯೆಯ ಡೈನಾಮಿಕ್ಸ್, ಆನುವಂಶಿಕ ವೈವಿಧ್ಯತೆ, ರೋಗ ತಗಲುವ ಪ್ರಬೇಧಗಳು ಮತ್ತು ಝೂನೋಟಿಕ್ ಪ್ರಸರಣದ ಇತಿಹಾಸ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳು) ಸೇರಿದಂತೆ ವಿವಿಧ ವೈರಲ್ ಗುಣಲಕ್ಷಣಗಳ ವಿಶ್ಲೇಷಣೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ.
(ಸಂಗ್ರಹ ಸುದ್ದಿ- ನ್ಯೂಸ್ ಕನ್ನಡ)

By admin

ನಿಮ್ಮದೊಂದು ಉತ್ತರ

error: Content is protected !!