*ಕೀಲು ನೋವು – ದಿನಚರಿ ಹೇಗಿರಬೇಕು? ೨೦ ಟಿಪ್ಸ್ *
ನೀವು ಮೈ-ಕೈ ನೋವು, ಸುಸ್ತು ಅಥವಾ ಸಂಧಿವಾತದಿಂದ ಬಳಲುತಿದ್ದೀರಾ? ನಿಮಗೆ ದಿನಚರಿಯಲ್ಲಿ ಸುಲಭವಾಗಿ ಅನುಸರಿಸಲು ೨೦ ಸೂತ್ರಗಳನ್ನು ತಿಳಿದುಕೊಳ್ಳಿ.
ಬೆಳಗ್ಗಿನ ದಿನಚರಿಯಲ್ಲಿ – ಸ್ಟ್ರೆಚ್ ಮಾಡುವುದು, ಬಿಸಿ ನೀರಿನ ಸ್ನಾನ, ನೀರು ಕುಡಿಯುವುದು, ಧ್ಯಾನ ಮತ್ತು ಸಕಾರಾತ್ಮಕ ಚಿಂತನೆ ಹಾಗು ಬೆಳಗ್ಗಿನ ವಾಕಿಂಗ್.
ವ್ಯಾಯಾಮದಲ್ಲಿ – ವಾರ್ಮ್ ಅಪ್, ಕಡಿಮೆ ಒತ್ತಡದ ವ್ಯಾಯಾಮ, ಮಧ್ಯ ವಿಶ್ರಾಂತಿಯ ಮಹತ್ವ, ನಿರ್ದಿಷ್ಟ ವ್ಯಾಯಾಮಡಾ ಉಪಯೋಗ ಹಾಗು ಸಹಾಯಕ್ಕೆ ಬೇಕಾದ ಸಾಧನಗಳು.
ಜೀವನಶೈಲಿಯ ಬದಲಾವಣೆಯಲ್ಲಿ – ತೂಕ ನಿಯಂತ್ರಣ, ಕೀಲು ನೋವಿಗೆ ಆಹಾರ ಕ್ರಮ, ನಿದ್ರೆ, ಪಾದರಕ್ಷೆಯ ಆಯ್ಕೆ ಹಾಗು ತಂಬಾಕು ಸೇವನೆಯ ದುಷ್ಪರಿಣಾಮ.
ಚಿಕಿತ್ಸಾ ವಿಧಾನದಲ್ಲಿ – ಸರಿಯಾದ ಔಷಧೋಪಚಾರ, ಬಿಸಿ/ತಣ್ಣೀರಿನ ಶಾಖ, ಮಸಾಜ್, ತೊಂದರೆಯ ಲಕ್ಷಣಗಳನ್ನು ಬರೆಯಲು ಡೈರಿಯ ಮಹತ್ವ ಹಾಗು ನಿಯಮಿತ ಕಾಲಕ್ಕೆ ವೈದ್ಯರೊಂದಿಗೆ ಸಮಾಲೋಚನೆ.
ಇವಿಷ್ಟೂ ವಿಷಯಗಳನ್ನೊಳಗೊಂಡು ಆಚರಣೆಗೆ ಸುಲಭವಾದ ರೀತಿಯಲ್ಲಿ ಈ ವಿಡಿಯೋದಲ್ಲಿ ವಿವರಣೆ ಇದೆ. ಕೀಲು ನೋವು ಇದ್ದರೆ ಅಥವಾ ಬರಬಾರದೆಂದಿದ್ದರೆ ಈ ವಿಡಿಯೋ ನಿಮಗೆ ಅವಶ್ಯಕ.