ಮಲೆನಾಡಿನಲ್ಲಿ ಉದ್ಯಮಶೀಲತೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಪೆಸೆಟ್ ಕಾಲೇಜಿನಲ್ಲಿ (ಪ್ರೇರಣಾ ಶಿಕ್ಷಣ ಸಂಸ್ಥೆ) ಅನ್ವೇಷಣಾ ಇನ್ನೋವೇಶನ್, ಎಂಟ್ರೆಪ್ರೆನ್ಯೂರಿಯಲ್ ಫೋರಂ ಉದ್ಘಾಟನೆಗೊಂಡಿತು
.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಹೊಸ ಉದ್ಯೋಗ ಅವಕಾಶ ಸೃಷ್ಟಿಸುವುದು.
ಸಮಸ್ಯೆಗಳಿಗೆ ನವೀನ ಪರಿಹಾರ ಒದಗಿಸುವುದು ಮತ್ತು ತಂತ್ರಜ್ಞಾನದ ಲಾಭವನ್ನು ಎಲ್ಲರೂ ಪಡೆಯುವಂತೆ ಮಾಡುವ ಗುರಿಯನ್ನು ಫೋರಂ ಹೊಂದಿದೆ.
ಮಲೆನಾಡು ಪ್ರದೇಶದಲ್ಲಿ ವಾಣಿ ಜ್ಯೋದ್ಯಮವನ್ನು ಪೋಷಿಸಲು ನೆರವಾಗಲಿದೆ. ಹೊಸದಾಗಿ ಉದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡು ವವರಿಗೆ ಹೊಸ ಶಕ್ತಿ ಮತ್ತು ಭರವಸೆ ತುಂಬಲಿದೆ ಎಂದರು.
ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ಕಾರ್ಯಕ್ರಮ ಉದ್ಘಾಟಿಸಿದರು ವಿಷನ್ ಸ್ಟಾರ್ಟ್ ಅಪ್ ಅಧ್ಯಕ್ಷ ಪ್ರಶಾಂತ್ಪ್ರಕಾಶ್, ಕಾರ್ಯಕ್ರಮದ ರೂವಾರಿ ಸಿ.ಎಂ.ಪಾಟೀಲ್, ವಿಧಾನ ಪರಿಷತ್
ಸದಸ್ಯರುಗಳಾದ ರುದ್ರೇಗೌಡ, ಡಿ.ಎಸ್. ಅರುಣ್, ಹಾಗೂ ೩೦ಕ್ಕೂ ಹೆಚ್ಚು ಏಂಜೆಲ್ ಹೂಡಿಕೆದಾರರು, ಮಾರ್ಗದರ್ಶಕರು, ಉದ್ಯಮಿಗಳು ಭಾಗಿಯಾಗಿದ್ದರು.