ನಗರದ ಹೊಸಮನೆ ಬಡಾವಣೆಯ ಚಾನೆಲ್ ಎಡಭಾಗದಲ್ಲಿರುವ ನಾಗಪ್ಪ ದೇವಸ್ಥಾನದ ಪಕ್ಕದಲ್ಲಿ ಮಹಾನಗರ ಪಾಲಿಕೆ ಅನುದಾನದಲ್ಲಿ ನಿರ್ಮಿಸಿರುವ ಬಡಾವಣೆಯ ಮೊಟ್ಟ ಮೊದಲ ಉದ್ಯಾನವನ ಶ್ರೀ ನಾಗರಕಟ್ಟೆ ಉದ್ಯಾನವನ ಉದ್ಘಾಟನೆ ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು ನೆರವೇರಿಸಿದರು
ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀಗಳು ಅಭಿವೃದ್ಧಿ ಕಾರ್ಯಗಳು ಆಗಿ ಉದ್ಘಾಟನೆ ಆಗುವುದರ ಜೊತೆಗೆ ಅಭಿವೃದ್ಧಿ ಆದಂತಹ ಉದ್ಯಾನವನಗಳ ಸ್ವಚ್ಛತೆಯ ಕಾರ್ಯ ಸಾರ್ವಜನಿಕರ ಜವಾಬ್ದಾರಿ ಎಂದು ಕರೆ ನೀಡಿ ಹೊಸಮನೆ ಬಡಾವಣೆಯ ನಾಗರಿಕರ ಹಲವು ದಿನಗಳ ಬೇಡಿಕೆಯಾದ ಉದ್ಯಾನವನ ನಿರ್ಮಾಣ ಕನಸು ಇಂದು ನನಸಾಗಿ ಬಡಾವಣೆಯ ಮೊಟ್ಟ ಮೊದಲ ಪಾರ್ಕ್ ನಾಗರಕಟ್ಟೆ ಉದ್ಯಾನವನವಾಗಿದ್ದು ಈ ಕಾರ್ಯ ಮಾಡಲು ಶ್ರಮಿಸಿದ ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಈ ಭಾಗದ ನಾಗರಿಕರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ರವರು ಮಾತನಾಡಿ ನಾನು ಚಿಕ್ಕವಯಸ್ಸಿನಿಂದಲೂ ನೋಡಿದ ಬಡಾವಣೆಯಾಗಿರುವ ಹೊಸಮನೆಯಲ್ಲಿ ಒಂದು ಉದ್ಯಾನವನ ಇಲ್ಲದೆ, ನಾಗರಿಕರ ಹಲವು ವರ್ಷಗಳ ಬೇಡಿಕೆ ಇಂದು ಈಡೇರಿದೆ ಎಂಬ ಸಂತೋಷ ನನಗಿದೆ ನಮ್ಮ ಬಡಾವಣೆಗೆ ಮೊಟ್ಟಮೊದಲ ಪಾರ್ಕ್ ನಿರ್ಮಿಸಿಲು ಸಹಕರಿಸಿದ ಮಹಾನಗರ ಪಾಲಿಕೆಗೆ, ಎಲ್ಲಾ ಅಧಿಕಾರಿ ವರ್ಗ ಹಾಗೂ ಬಡಾವಣೆಯ ನಾಗರಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ನಾಗರಾಜ್ ಕಂಕಾರಿ, ಯುವ ಮುಖಂಡರಾದ ಕೆ.ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಗಿರೀಶ್, ಯುವ ಕಾಂಗ್ರೆಸ್ ನಗರಾಧ್ಯಕ್ಷ ಬಿ ಲೋಕೇಶ್, ಕುಮರೇಶ್, ಟಿ ವಿ ರಂಜಿತ್, ಎಮ್ ರಾಹುಲ್ ಪುಷ್ಪಕ್ ಕುಮಾರ, ಚಂದ್ರು ಗೆಡ್ಡೆ, ಹಾಗೂ ಬಡಾವಣೆಯ ಪ್ರಮುಖರಾದ ರುದ್ರಪ್ಪನವರು, ನಿವೃತ್ತ ಉಪನ್ಯಾಸಕರಾದ ಕೃಷ್ಣಮೂರ್ತಿ, ಸಿದ್ದರಾಜು, ಲಕ್ಷ್ಮಣಪ್ಪ, ಗೋವಿಂದಪ್ಪ ರವರು ಹಾಗೂ ಬಡಾವಣೆಯ ನಾಗರೀಕರು ಉಪಸ್ಥಿತರಿದ್ದರು.