ಶಿವಮೊಗ್ಗ: ಛಾಯಾಗ್ರಹಣದಲ್ಲಿ ಡಿಜಿಟಲ್ ಯುಗ ಪ್ರವೇಶವಾಗಿದ್ದು, ಎಲ್ಲಾ ಜೀವ ವೈವಿಧ್ಯ ಪ್ರಾಣಿ. ಪಕ್ಷಿ ಜೀವಜಂತುಗಳ ಮತ್ತು ಪರಿಸರದ ಮಾಹಿತಿ ಒಂದು ಛಾಯಾಚಿತ್ರಗಳಿಂದ ಲಭ್ಯವಾಗುತ್ತದೆ ಎಂದ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದ್ದಾರೆ.
ಅವರು ಇಂದು ನಗರದ ವೀರಶೈವ ಕಲ್ಯಾಣ ಮಂದಿರದ ನಿಜಲಿಂಗಪ್ಪ ಸಭಾಂಗಣದಲ್ಲಿ ಹವ್ಯಾಸಿ ಛಾಯಾಗ್ರಾಹಕರ ಸಂಘ ಶಿವಮೊಗ್ಗ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಹಣ ದಿನ, ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಬಂದ ಮೇಲೆ ಎಲ್ಲರೂ ಛಾಯಾಗ್ರಾಹಕರಾಗಿದ್ದಾರೆ. ಅತ್ಯಾಧುನಿಕ ಮೊಬೈಲ್ಗಳು ಬಂದಿದ್ದು, ಅಡ್ವಾನ್ಸ್ ಟೆಕ್ನಾಲಜಿ ಒಳಗೊಂಡಿದೆ. ಛಾಯಾಗ್ರಹಣ ಒಂದು ಕಲೆಯಾಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕುಮತ್ತು ಈ ಕಲೆಯಲ್ಲಿ ಆಸಕ್ತಿ ಹೊಂದಬೇಕು. ಮೊಬೈಲ್ನಲ್ಲಿ ಸೆಲ್ಫಿ ತೆಗೆಯುವುದು ಕಲೆ ಅಲ್ಲ. ಕ್ಯಾಮೆರಾದ ಮೂಲಕ ಸುತ್ತಮುತ್ತಲ ವೈವಿಧ್ಯತೆ ಸೆರೆಹಿಡಿದು ಅದರ ಬಗ್ಗೆ ಮಾಹಿತಿ ಪಡೆದು ಹಂಚಿಕೊಂಡಾಗ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ. ಒಂದು ಛಾಯಾಚಿತ್ರದಿಂದ ಅನೇಕ ಮಾಹಿತಿಗಳು ಲಭ್ಯವಾಗುತ್ತದೆ ಎಂದರು.
ಡಾ. ಶ್ರೀಕಾಂತ್ ಹೆಗಡೆ ಮಾತನಾಡಿ, ಫೋಟೋಗ್ರಫಿ ಒಂದು ಕಲೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಆವಿಷ್ಕಾರವಾಗಿದೆ. ಫೋಟೋಗ್ರಫಿಯ ಬೇರೆ ಬೇರೆ ಆಯಾಮಗಳು ಸೂಕ್ಷ್ಮ ಜೀವಿ ವಲಯ, ಪ್ರಾಣಿ ಪಕ್ಷಿಗಳ, ಜೀವ ಜಂತುಗಳ ಮತ್ತು ಖಾಸಗಿ ಸಮಾರಂಭಗಳ ವಿಶೇಷ ಕ್ಷಣಗಳನ್ನು ಪರಿಚಯಿಸುತ್ತದೆ. ಇದಕ್ಕಾಗಿ ವಿಶ್ವ ಛಾಯಾಗ್ರಹಣ ದಿನ ಆಚರಿಸಲಾಗುತ್ತದೆ ಎಂದರು.
ಹವ್ಯಾಸಿ ಛಾಯಾಗ್ರಾಹಕ ಡಾ.ಶೇಖರ್ ಗೌಳೇರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ವತಿಯಿಂದ ಛಾಯಾಚಿತ್ರ ಪ್ರದರ್ಶನವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪರಮೇಶ್ವರ್ ಶಿಗ್ಗಾಂವ್ ವಹಿಸಿದ್ದರು. ಕಾರ್ಯದರ್ಶಿ ಶಿವಮೊಗ್ಗ ಯೋಗರಾಜ್, ಖಜಾಂಚಿ ಹೆಚ್. ಪ್ರದೀಪ್ಕುಮರ್, ವಿನಾಯಕ ಗುಜ್ಜರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.