ಶಿವಮೊಗ್ಗ : ಸಂಸದ ಬಿ.ವೈ. ರಾಘವೇಂದ್ರ ಅವರ ಜನ್ಮ ದಿನಾಚಣೆಯನ್ನು ಆ.೧೬ ರಂದು ವಿಶಿಷ್ಟವಾಗಿ ಆಚರಿಸಲು ಬಿವೈ ಆರ್ ಅಭಿಮಾನಿ ಬಳಗ ನಿರ್ಧರಿಸಿದೆ ಎಂದು ಬಳಗದ‌ಪ್ರಮುಖರೂ ಆದ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಅಂದು ಬೆಳಗ್ಗೆ ೮.೩೦ ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಂಜೆ ೫.೩೦ ಕ್ಕೆ ಹರಟೆ ಕಾರ್ಯಕ್ರಮವನ್ನು   ಏರ್ಪಡಿಸಿದ್ದು    ಹಿರೇಮಗಳೂರು ಕಣ್ಣನ್, ಗಂಗಾವತಿ ಪ್ರಾಣೇಶ್,  ಸುಧಾ ಬರಗೂರು, ಬಸವರಾಜ ಮಹಾಮನಿ,  ನರಸಿಂಹ ಜೋಷಿ, ಲಕ್ಷ್ಮೀಶ ಹೆಗಡೆ ಸೋಂದ,  ನಾಗಶ್ರೀ ತ್ಯಾಗರಾಜ್ ನಡೆಸಿಕೊಡಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪನವರು ಉಪಸ್ಥಿತರಿರುತ್ತಾರೆ ಎಂದರು.

ಹರಟೆ ಕಾರ್ಯಕ್ರಮಕ್ಕೂ ಮೊದಲು ೨೦ ನಿಮಿಷ ವೇದಿಕೆ ಕಾರ್ಯಕ್ರಮ ಇರುತ್ತದೆ. ಇದರಲ್ಲಿ

ವಿಶೇಷ ಚೇತನ ೩೦ ಜನರಿಗೆ ಟ್ರೈಸೈಕಲ್ ನೀಡಲಾಗುತ್ತದೆ. ಹರಟೆ ಕಾರ್ಯಕ್ರಮ ಇರುತ್ತದೆ. ಬಳಿಕ ಎಲ್ಲರಿಗೂ ಭೋಜನ ವ್ಯವಸ್ಥೆ ಇರುತ್ತದೆ. ಎಲ್ಲರಿಗೂ ಉಚಿತ ಪ್ರವೇಶ ಇರುತ್ತದೆ.

ಸಂಸದರಾಗಿ ಬಿವೈಆರ್ ಉತ್ತಮ ಕೆಲಸ ಮಾಡಿದ್ದು, ಹೆಚ್ಚಿನ ಅನುದಾನ ತಂದು ಇಡೀ ದೇಶದಲ್ಲಿ ನಂಬರ್ ಒನ್ ಆಗಿದ್ದಾರೆ. ೨೮ ರೈಲು ನಗರದಿಂದ ಓಡಾಡುತ್ತಿವೆ. ಟರ್ಮಿನಲ್, ಎಲೆಕ್ಟ್ರಿಫಿಕೇಶನ್, ಮೇಲ್ಸೇತುವೆ, ಕೆಳ ಸೇತುವೆ ಆಗಿವೆ. ೧೫ ಪ್ರಮುಖ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ಕೇಂದ್ರ ರಸ್ತೆನಿಧಿ, ಕೇಂದ್ರೀಯ ವಿದ್ಯಾಲಯಗಳನ್ನು ತಂದಿದ್ದು, ಪಾಸ್ ಪೋರ್ಟ್ ಸೇವಾ ಕೇಂದ್ರ ಮಾಡಿ ೫೦ ಸಾವಿರಕ್ಕೂ ಹೆಚ್ಚು ಜನರು ಸೌಲಭ್ಯ ಪಡೆದಿದ್ದಾರೆ. ಮೊಬೈಲ್ ಟವರ್ ಹೆಚ್ಚು ಮಾಡಲಾಗಿದೆ.

ಇನ್ ಡೋಟರ್ ಕ್ರೀಡಾಂಗಣ, ಜೋಗ ಅಭಿವೃದ್ದಿ, ವಿಐಎಸ್ ಎಲ್ ಆರಂಭ, ವಿಮಾನ ನಿಲ್ದಾಣ ಪ್ರಾರಂಭವಾಗಿದೆ. ನೀರಾವರಿ ಇಲಾಖೆಯಿಂದ ಹಣ ತಂದಿರುವುದು, ಇದರಿಂದ ೫೦೦ ಕೆರೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ.  ಆಯುರ್ವೇದ ವಿವಿ, ಸಿಗಂದೂರು ಸೇತುವೆ, ಹೀಗೆ‌ ಎ ಟು ಜೆಡ್ ವರೆಗೆ ಎಲ್ಲಾ ಇಲಾಖೆಗಳಿಂದಲೂ ಅನುದಾನ ತರುವುದರ ಮೂಲಕ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬಿಎಸ್ ವೈ ಗೆ ಬಿವೈಆರ್ ಗೆ ಸರಿಸಾಟಿಯಾಗಿ ಕೆಲಸ ಮಾಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್ ಎಸ್ ಜ್ಯೋತಿಪ್ರಕಾಶ್, ಮಾಲತೇಶ್,ಅಣ್ಣಪ್ಪ, ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!