ಕಾರ್ಪೊರೇಟರ್‌ಗಳೇ ಭಾರತ ಬಿಟ್ಟು ತೊಲಗಿ ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.


ಆ.೯ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯನ್ನು ಗಾಂಧೀಜಿ ಯವರು ಮಾಡಿದ್ದರು. ಆದರೆ ಈಗ ಭಾರತದ ಕೃಷಿ ಭೂಮಿಯನ್ನು ರೈತರೇ ಜೋಪಾನ ಮಾಡಬೇಕಾಗಿದೆ. ಹಾಗಾಗಿ ಕಾರ್ಪೊರೇಟ ರ್‌ಗಳೇ ಭಾರತ ಬಿಟ್ಟು ತೊಲಗಿ ಎಂದು ನಾವು ಕರೆ ಕೊಡಬೇಕಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದರು.
ಅಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಘೋಷಣೆ ಇಂದು

ಕಾರ್ಪೊರೇ ಟರ್‌ಗಳೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಮಾಡಬೇಕಾಗಿದೆ. ಭಾರತದ ಕೃಷಿಭೂಮಿಮತ್ತು ಕೃಷಿ ವಿಜ್ಞಾನವನ್ನು ಜೋಪಾನ ಮಾಡಬೇಕಾಗಿದೆ. ಕಾರ್ಪೊ ರೇಟ್ ಕಂಪನಿಗಳು ಭಾರತದ ಕೃಷಿಯ ಮೇಲೆ ಹಿಡಿತ ಸಾಧಿಸಿರುವುದನ್ನು ತಪ್ಪಿಸಬೇ ಕಾಗಿದೆ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.


ಕೃಷಿ ಭಾರತದ ಜೀವಾಳ. ಅದು ಸಂಸ್ಕೃತಿಯ ಭಾಗವೇ ಆಗಿದೆ. ವಿಶ್ವದಲ್ಲಿಯೇ ಅತಿದೊಡ್ಡ ಕೃಷಿಭೂಮಿ ನಮ್ಮದಾಗಿದೆ. ಆದರೆ ಇತ್ತೀಚೆಗೆ ಬಂಡವಾಳಶಾಹಿಗಳು ಲಗ್ಗೆ ಇಟ್ಟು ಕೃಷಿ ವ್ಯವಸ್ಥೆಯನ್ನೇ ಬುಡಮೇಲು ಮಾಡತೊಡಗಿದ್ದಾರೆ. ಸರ್ಕಾರಗಳು ಕಾರ್ಪೊರೇಟ್ ಕಂಪನಿಗಳಿಗೆ ರೆಡ್ ಕಾರ್ಪೆಟ್ ಹಾಸುತ್ತಿವೆ. ಇದರಿಂದ ಭಾರತದ ಕೃಷಿ ನಾಶವಾಗುತ್ತಿದೆ ಎಂದು ಆರೋಪಿ ಸಿದರು.


ಭಾರತದ ಆಹಾರ ಪೂರೈಕೆಯ ಸರಪಳಿಯ ಮೇಲೆ ಹಿಡಿತ ಸಾಧಿಸಬೇಕಾದ ಅನಿವಾರ್ಯತೆ ಇದೆ. ಕಾರ್ಪೊರೇಟರ್‌ಗಳು ಸಾವಿರಾರು ಎಕರೆ ಪ್ರದೇಶದ ಫಾರಂಗಳನ್ನು ಹೊಂದಿದ್ದಾರೆ. ಇವರ ಉದ್ದೇಶವೇ ಉದ್ಯಮವಾಗಿದೆ. ಆದ್ದರಿಂದ ಕಾರ್ಪೊರೇಟ ರ್‌ಗಳಿಂದ ಭಾರತದ ಕೃಷಿಯನ್ನು ಉಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.


ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ವರಿಷ್ಠ ಕೆ.ಟ.ಗಂಗಾಧರ್ ಪ್ರಮುಖರಾದ ಯಶವಂತರಾವ್ ಘೋರ್ಪಡೆ, ಈರಪ್ಪ ಪ್ಯಾಟಿ, ಹಾಲೇಶಪ್ಪ ಗೌಡ್ರು, ಡಿ.ವಿ. ವೀರೇಶ್, ಮಂಜುನಾಥೇಶ್ವರ ಹೆಚ್.ಎಸ್., ಶಿವಪೂಜಪ್ಪ ಗೌಡ್ರು, ಜಗದೀಶ್, ಕೆ.ಎಸ್ ಪುಟ್ಟಪ್ಪ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!