ಶಿವಮೊಗ್ಗದ ಹೆಮ್ಮೆಯ ಜವಳಿ ಸಂಸ್ಥೆಯಾದ ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್ ಟೈಲ್ಸ್ ಸಂಸ್ಥೆಯು ಇಂದು 40 ವರ್ಷದ ಸಂಭ್ರಮದ ದಿನಾಚರಣೆಯನ್ನು ಅತ್ಯಂತ ವಿಶೇಷವಾಗಿ ಆಚರಿಸುವ ಜೊತೆಗೆ ಜಿಲ್ಲೆಯ ನೆಲೆಗಟ್ಟಿನಲ್ಲಿರುವ ಇಬ್ಬರು ಮಹಿಳಾ ಮುಖಂಡರಿಗೆ ವೇದಿಕೆ ಕಲ್ಪಿಸಿ 40 ವರ್ಷದ ಸಂಭ್ರಮಾಚರಣೆಯನ್ನು ಆಚರಿಸಿತು.


ಇ ಸಂದರ್ಭದಲ್ಲಿ ಆರಂಭಗೊಂಡ 40ನೇ ವರ್ಷದ ವಿಶೇಷ ಮಾರಾಟ ಸಂಭ್ರಮವನ್ನು ಶಿವಮೊಗ್ಗ ಗ್ರಾಮಾಂತರ ಶಾಸಕ ಶಾರದಾ ಪೂರ್ಯಾ ನಾಯಕ್ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯ ಕಾಂತೇಶ್ ಅವರ ಪತ್ನಿ ಶಾಲಿನಿ ಅವರು ಸೇರಿದಂತೆ ಸಂಸ್ಥೆಯ ಎಲ್ಲಾ ಪ್ರಮುಖರು ಉಪಸ್ಥಿತರಿದ್ದರು.


ಕಳೆದ 40 ವರ್ಷಗಳಿಂದ ಶಿವಮೊಗ್ಗದ ಹಿರಿಮೆಯ ಶೀನಪ್ಪ ಶೆಟ್ಟಿ ವೃತ್ತದಲ್ಲಿರುವ ಈ ನಿಧಿ ಸಂಸ್ಥೆಯು ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗದೆ ರಾಜ್ಯದ,

ಹೊರರಾಜ್ಯದ ಜನರನ್ನು ಜವಳಿ ಉದ್ಯಮದಲ್ಲಿ ಆಕರ್ಷಿಸುವ ಹಾಗೂ ಅಷ್ಟೇ ಪ್ರಮಾಣದ ಉತ್ತಮ ಗುಣಮಟ್ಟ ಮತ್ತು ಪ್ರಮಾಣಿಕೃತ ಜವಳಿ ವಸ್ತುಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!