ಶಿವಮೊಗ್ಗ,: ಅಬ್ಬಲಗೆರೆ ಗ್ರಾಮದಲ್ಲಿ ಕೃಷಿ ಇಲಾಖೆ ಶಿವಮೊಗ್ಗ ತಾಲ್ಲೂಕು ವತಿಯಿಂದ ರೈತರಿಗೆ ಬೆಳೆ ವಿಮೆ ಯೋಜನೆಯ ಕುರಿತು ಮಾಹಿತಿ ಸಭೆಯನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ರಮೇಶ್ ಎಸ್.ಟಿ ಇವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಭತ್ತ ಮತ್ತು ಮುಸುಕಿನ ಜೋಳ ಬೆಳೆಗಳಿಗೆ ಬೆಳೆ ವಿಮೆ ಮಾಡಿಸುವಂತೆ ತಿಳಿಸಿದ ಅವರು, ಪ್ರವಾಹ ಬರ, ಆಲಿಕಲ್ಲು ಮಳೆ, ಭೂಮಿ ಕುಸಿತ, ಬೆಳೆ ಮುಳುಗಡೆ ಮುಂತಾದ ಪ್ರಾಕೃತಿಕ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟಕ್ಕೆ ವಿಮೆ ಮಾಡಿಸಿದ ರೈತರಿಗೆ ಈ ಯೋಜನೆಯಡಿ ಪರಿಹಾರ ಒದಗಿಸಲಾಗುವುದು ಎಂದರು.
ಇಂತಹ ಸಂಧರ್ಭದಲ್ಲಿ ಕೃಷಿಯಲ್ಲಿ ರೈತರನ್ನು ಪ್ರೋತ್ಸಾಹಿಸಲು ಈ ಯೋಜನೆ ಹೆಚ್ಚು ಸಹಕಾರಿಯಾಗಿದ್ದು ರೈತರು ಕೂಡಲೇ ಬೆಳೆ ವಿಮೆ ಮಾಡಿಸಲು ತಿಳಿಸಿದರು. ಮುಸುಕಿನ ಜೋಳ ಬೆಳೆಗೆ ವಿಮೆ ಮಾಡಿಸಲು ಇದೇ ತಿಂಗಳ 31 ಕೊನೇ ದಿನಾಂಕ ಹಾಗೂ ಭತ್ತ ಬೆಳೆಗೆ ಆಗಸ್ಟ್ 16 ಕೊನೇ ದಿನಾಂಕ ವಾಗಿದ್ದು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರ, PಂಅS ಗಳನ್ನು ಸಂಪರ್ಕಿಸಲು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ಚೇತನ್ ಸಿ.ಜಿ, ಸುನೀಲ್ ನಾಯ್ಕ್, ವಿಮಾ ಸಂಸ್ಥೆಯ ಪ್ರತಿನಿಧಿ ಆದರ್ಶ ಕುಮಾರ್ ಎ.ವಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ್ ಮತ್ತು ರೈತರುಗಳಾದ ಜಗದೀಶ್, ಮಲ್ಲೇಶಪ್ಪ, ಹರಿಶ್ಚಂದ್ರನಾಯ್ಕ, ಉಮೇಶಪ್ಪ ಮತ್ತು ಇತರರು ಹಾಜರಿದ್ದರು.