ಶಿವಮೊಗ್ಗ, ಜು.04:
ನಗರದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಟ್ರಸ್ಟ್ನ ವತಿಯಿಂದ ವಿಶ್ವದಲ್ಲೇ ಅತಿ ಎತ್ತರದ 151 ಅಡಿಯ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹದ ಶಿಲಾನ್ಯಾಸ ಕಾರ್ಯಕ್ರಮವನ್ನು ಜು 9 ರ ಭಾನುವಾರ ಬೆಳಗ್ಗೆ 10.30ಗಂಟೆಗೆ ಆಯೋಜಿಸಲಾಗಿದೆ ಎಂದು ತಮಿಳ್ ಯುವಕರ ಸಂಘದ ಅಧ್ಯಕ್ಷ ಹಾಗೂ ಸಮಾಜದ ಪ್ರಮುಖರಾದ ಎಂ. ಪಿ. ಗಣೇಶ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸೆಲ್ವ ಗಣಪತಿ, ಶ್ರೀ ದಕ್ಷಿಣಾಮೂತಿ, ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ಹಿಡುಂಬಾಸುರನ್ ಮತ್ತು ನವಗ್ರಹಗಳು ನೂತನ ದೇವಾಲಯದ ಅಷ್ಠಬಂಧನ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವವನ್ನು ಜು.7 ರಿಂದ 9 ರವರೆಗೆ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.


ಜು. 9 ರ ಕಾರ್ಯಕ್ರಮವು ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿಯ ಅಧ್ಯಕ್ಷ ಡಿ.ರಾಜಶೇಖರ್ ವಹಿಸಲಿದ್ದಾರೆ ಎಂದಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ. ಶಾಸಕರಾದ ಬಿ.ಕೆ.ಸಂಗಮೇಶ್, ಚನ್ನಬಸಪ್ಪ, ಗ್ರಾಮಾಂತರ ಶಾಸಕಿ ಶಾರದ ಎಸ್.ಪೂರ್ಯಾನಾಯ್ಕ್, ಎಂ.ಎಲ್.ಸಿಗಳಾದ ರುದ್ರೇಗೌಡ, ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಪಾಲಿಕೆಯ ಮೇಯರ್ ಎಸ್.ಶಿವಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಐಎಂಪಿಎ ಫೌಂಡರ್ & ಅಧ್ಯಕ್ಷ ಸೆವಾಲಿಯಾರ್ ಡಾ.ಆರ್.ಅರುಣಾಚಲಂ, ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ, ಜೆಡಿಎಸ್ ಜಿಲ್ಲಾದ್ಯಕ್ಷ ಎಂ.ಶ್ರೀಕಾಂತ್, ತಮಿಳು ತಾಳ್ ಸಂಘದ ಅಧ್ಯಕ್ಷ ಎಂ.ಪಿ.ಸಂಪತ್, ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಎನ್.ರಮೇಶ್, ಮಾಜಿ ಪಾಲಿಕೆ ಮೇಯರ್ ಮೋಹನ ರೆಡ್ಡಿ, ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಪಿ ರಘು ಕುಮಾರ್, ಖಜಾಂಚಿ ರವಿಕುಮಾರ್, ಸಹಕಾರ್ಯದರ್ಶಿ ಎಂ.ಲೋಕೇಶ್, ಟ್ರಸ್ಟಿಗಳಾದ ಪಿ.ಸುಬ್ರಮಣಿ, ಎಂ.ಸುಬ್ರಮಣಿ, ಎಂ.ರಾಜು, ಕೆ.ವಿಶ್ವನಾಥ್, ಸಿ.ರವಿ, ವಿಗ್ರಹ ಸಮಿತಿ ಸದಸ್ಯರುಗಳಾದ ಎ.ವಿಜಿಯನ್, ಕೆ.ಸುಬ್ರಮಣಿ, ಅರ್ಜುನನ್, ಆತ್ಮರಂಗಧೋಳ್ ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9886277399, 9972492010 ಗೆ ಸಂಪರ್ಕಿಸಿ.
