ಶಿವಮೊಗ್ಗ, ಅ.28:
ಬರುವ ನವಂಬರ್ 30ರವರೆಗೆ ಯಾವುದೇ ಶಾಲೆಗಳನ್ನು ತೆರೆಯದಂತೆ ಕೇಂದ್ರದ ಗೃಹ ಕಾರ್ಯದರ್ಶಿ ಆದೇಶಿಸಿದ್ದಾರೆ ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವರ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶದನ್ವಯ ಈ ನಿಯಮ ಹೊರಬಿದ್ದಿದೆ.
ಯಾವಾಗ ಶಾಲೆ ಆರಂಭ ಎಂಬ ಗೊಂದಲಗಳಿಗೆ ಈ ಆದೇಶ ತಿಲಾಂಜಲಿಯಂತೂ ಇಟ್ಡಿಲ್ಲ. ಈ ಆದೇಶ ಮತ್ತೆ ಗೊಂದಲಗಳನ್ನೇ ಸೃಷ್ಟಿಸಿದೆ. ಪ್ರಸಕ್ತ ವರುಷ ಹತ್ತನೇ ತರಗತಿ ಓದುತ್ತಿರುವ ಮಕ್ಕಳಿಗೆ ಆನ್ ಲೈನ್ ಶಾಲೆ ಮೂಲಕ ಈಗಾಗಲೇ ಮದ್ಯಮ ಹಂತದ ಪರೀಕ್ಷೆ ಮುಗಿಸಿದ್ದಾರೆ.
ಎಷ್ಟು ಮಕ್ಕಳಿಗೆ ಈ ಹೊಸ ಆನ್ ಲೈನ್ ಪಾಠ ಪ್ರವಚನ ಅರ್ಥವಾಗಿದೆ. ಹೇಗೆ ತಾನೇ ಪರೀಕ್ಷೆ ಬರೆಯಬಲ್ಲರು.
ಎಲ್ಲಾ ಮಕ್ಕಳು ಆನ್ ಲೈನ್ ಪಾಠ ಕೇಳಿದ್ದಾರಾ…? ಶಾಲಾ ಅವಧಿ ನಿರ್ಧಾರವಾಗಿದೆಯಾ? ಎಷ್ಟು ಪಾಠ ಕಲಿಯಬೇಕು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸದ ರಾಜ್ಯದ ಶಿಕ್ಷಣ ಸಚಿವರು ನಮ್ಮ ನಡುವಿನವರಾಗಿರುವುದು ದುರಂತ…!?

By admin

ನಿಮ್ಮದೊಂದು ಉತ್ತರ

You missed

error: Content is protected !!