ಶಿವಮೊಗ್ಗ, ಅ.23:
ಗ್ರಾಮೀಣ ಭಾಗಗಳಿಗೆ ಬಸ್ ಸೌಲಭ್ಯ ನೀಡಲು ಆಗ್ರಹಿಸಿ ಮಾನವ ಹಕ್ಕುಗಳ ಕಮಿಟಿ ಇಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಪ್ರತ್ಯೇಕ ಮನವಿ ಸಲ್ಲಿಸಿತು.
ಜಿಲ್ಲೆಯ ಹಾಗೂ ಹೊನ್ನಾಳಿ ತಾಲ್ಲೂಕಿನ ಕೆಲ ಗ್ರಾಮೀಣ ಪ್ರದೇಶಗಳಿಗೆ ಇನ್ನೂ ಬಸ್ ಸೌಲಭ್ಯ ಆರಂಭವಾಗಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಬಸ್ ಸಂಪರ್ಕ ಕಡಿದುಹೋಗಿತ್ತು. ಈಗ ಬಸ್ ಸೌಲಭ್ಯ ಇಲ್ಲದೇ ಹಾಡೋನಹಳ್ಳಿ, ಮಡಿಕೆಚೀಲೂರು, ಕ್ಯಾತನಕೊಪ್ಪ, ಬಸವಗಂಗೂರು, ಬೆಳಲಕಟ್ಟೆ, ಸೋಮಿನಕೊಪ್ಪ, ಕೋಟೆಗಂಗೂರು ಭದ್ರಾವತಿಯ ತಡಸ, ಗುಡಂಗಟ್ಟೆ, ಹೊನ್ನಾಳಿಯ ಕೋಟೆಹಾಳ್ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ತುಂಬಾ ತೊಂದರೆಯಾಗಿದೆ. ಹಲವು ಬಾರಿ ನಡೆದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ ಎಂದು ಮನವಿದಾರರು ತಿಳಿಸಿದರು.

KSRTC ವ್ಯವಸ್ಥಾಪಕರಿಗೆ ಮನವಿ


ಸಾರ್ವಜನಿಕ ಸಂಪರ್ಕದ ವಾಹನಗಳ ಓಡಾಟಕ್ಕೆ ಅವಕಾಶ ನೀಡಿದ್ದರೂ ಕೂಡ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಇಲ್ಲಿ ಸಂಚರಿಸುತ್ತಿಲ್ಲ. ಹಾಗಾಗಿ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಿಗೂ ಅನುಕೂಲವಾಗುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಬಸ್‌ಗಳು ಸಂಚರಿಸಲು ವ್ಯವಸ್ಥೆ ಮಾಡಬೇಕು  ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರಸಕ್ತ ದಿನಗಳಲ್ಲಿ ಹಬ್ಬ-ಹರಿದಿನಗಳು ಆರಂಭಗೊಂಡಿದ್ದು ಅವಶ್ಯಕ ವಸ್ತುಗಳನ್ನು ಕೊಳ್ಳಲು ನಗರ ಪ್ರದೇಶಕ್ಕೆ ಬಂದುಹೋಗುವುದು ಅಸಹಾಯಕರಿಗೆ ತೊಂದರೆಯಾಗಿದೆ. ಈ ಕೂಡಲೇ ಶಿವಮೊಗ್ಗ ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳಿಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಬಸ್ ಗಳ ವ್ಯವಸ್ಥೆಯನ್ನು ಕಲ್ಪಿಸಬೇಕು. ಅಂತೆಯೇ ಮಾನ್ಯ ಜಿಲ್ಲಾಧಿಕಾರಿಗಳು ನಿಯಮಾನುಸಾರ ಇದ್ದ ಖಾಸಗಿ ಬಸ್ ಗಳನ್ನು ಸರಿಯಾಗಿ ಸಂಚರಿಸುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ನೀಡಿರುವಂತೆ ವಾಹನಗಳ ವ್ಯವಸ್ಥೆಗೆ ಅನುಸರಿಸುವ ಕೊರೊನಾ ನಿಯಮಾನುಸಾರವೇ ತುತ್ತತುದಿಯ ಮೂಲೆ ಗ್ರಾಮಗಳಿಗೂ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು. ಕೊರೊನಾದ ಲಾಕ್ ಡೌನ್  ಅವಧಿಯಿಂದಲೂ ಸುಮಾರು ಎಂಟು ತಿಂಗಳಿನಿಂದ ಪರಿತಪಿಸುತ್ತಿರುವ ಜನರಿಗೆ ಇತ್ತೀಚಿನ ಕೆಲ ನಿಯಮಗಳು ಉಸಿರಾಡುವಂತೆ ಮಾಡಿದೆ. ಆದರೆ  ಈ ಸೌಲಭ್ಯ ಎಲ್ಲಾ ಗ್ರಾಮಗಳನ್ನು ತಲುಪದಿರುವುದು  ದುರಂತ.  ಬಸ್ ಸಂಚಾರಕ್ಕೆ ಅವಕಾಶ ನೀಡುವ ಮೂಲಕ ಅಸಾಯಕ ಶ್ರೀಸಾಮಾನ್ಯರಿಗೆ ನೆರವು ನೀಡಬೇಕೆಂದು ವಿನಂತಿಸುತ್ತೇವೆ.
ಮನವಿ ನೀಡುವ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಗ್ರಾಾಾಾಮಾಂ ಅಧ್ಯಕ್ಷ ಡಿ.ಸಿ.ಜಗದೀಶ್ವರ್, ರಾಜ್ಯ ಕಮಿಟಿಯ ಕೆ. ನಾಗರಾಜ್, ಎಸ್.ಕೆ. ಗಜೇಂದ್ರಸ್ವಾಮಿ, ಆರ್.ರಮೇಶ್, ಜಿಲ್ಲಾಧ್ಯಕ್ಷ ಎಸ್.ವಿ. ದಯಾನಂದ್, ಗೌರವಾಧ್ಯಕ್ಷ ಎಸ್.ರಮೇಶ್, ಆರ್. ಅಭಿನಂದನ್, ಎ.ವಿ.ನಾಗರಾಜ್, ಪದಾಧಿಕಾರಿಗಳಾದ ಎನ್. ಅಣ್ಣಪ್ಪ, ಸುಜಾತ ಆರ್., ಜಯಮಾಲಶೆಟ್ಟಿ, ಉಷಾ, ವಿನೋದ್, ಡಿ.ಎಸ್. ಮಲ್ಲಿಕಾರ್ಜುನ್, ಬಾಲಾಜಿ,  ಆಟೋ ರವಿ, ಉಮೇಶ್, ಮಾರುತಿ, ಸಂದೀಪ್, ವೀರೇಶಪ್ಪ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!