ಭದ್ರಾವತಿ,ಅ.23:
ಮೈಸೂರು ಕಾಗದ ಕಾರ್ಖಾನೆ(ಎಂಪಿಎಂ) ಹಣಕಾಸು ಇಲಾಖೆಯ ಪ್ರಧಾನ ವ್ಯವಸ್ಥಾಪಕ ವಿಶ್ವನಾಥ್ ಮಲಗನ್(62) ಅವರು ವಿಧಿವಶರಾಗಿದ್ದಾರೆ.
ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಕೊನೆಯುಸಿರೆಳೆದಿದ್ದಾರೆ.
ವಿಶ್ವನಾಥ್ ಅವರು ನಿವೃತ್ತರಾಗಿದ್ದರೂ ಸರ್ಕಾರದ ಆದೇಶದ ಅನ್ವಯ ಎಂಪಿಎಂ ಸೇವೆಯಲ್ಲಿ ಮುಂದುವರೆದಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಎಂಪಿಎಂ ಹಣಕಾಸು ಇಲಾಖೆಯ ಪ್ರಧಾನ ವ್ಯವಸ್ಥಾಪಕ ವಿಶ್ವನಾಥ್ ಮಲಗನ್ ನಿಧನಕ್ಕೆ
ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ದೇವಕುಮಾರ್ ಎನ್.ಎಚ್. , ಜಿಲ್ಲಾಧ್ಯಕ್ಷ ಈ.ಕೆ. ಈರಣ್ಣ. ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಕೋರಿದ್ದಾರೆ.
ಅಮ್ ಅದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರವಿಕುಮಾರ್, ವಿಶ್ವನಾಥ್ ಅವರು ಅತ್ಯಂತ ಸ್ವಚ್ಛಾರಿತ್ರದ ಅಧಿಕಾರಿಯಾಗಿದ್ದರು. ನೌಕರರಿಗಿಂತಲೂ ಗುತ್ತಿಗೆ ಕಾರ್ಮಿಕರು ಹೆಚ್ಚಿನ ಕೆಲಸ ಮಾಡುತ್ತಾರೆ. ಹೀಗಾಗಿ, ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನ ನೀಡಬೇಕು ಎಂದು ಎಂಡಿ ಅವರಿಗೆ ಸಲಹೆ ನೀಡಿದ್ದ ಏಕೈಕ ಅಧಿಕಾರಿ ವಿಶ್ವನಾಥ್ ಅವರು. ಅವರ ನಿಧನ ತುಂಬಲಾರದ ನಷ್ಟವುಂಟುಮಾಡಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ, ಅವರ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.