ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೇಡಿಕಲ್ ಸೂಪರ್ ಡೆಂಟ್ ಡಾ.ಶ್ರೀಧರ್ ಯಾರೆ ಕರೆಮಾಡಿದರು ಸ್ಪಂದಿಸುವ ವ್ಯಕ್ತಿ .
ಡಾ.ಶ್ರೀದರ್ ಇವರು ಅಧಿಕ್ಷಕರಾದ ಮೇಲೆ ಆ ಅಸ್ಪತ್ರೆಯಬಗ್ಗೆ ಸಾಮಾನ್ಯ ಜನರಲ್ಲಿ ವಿಶ್ವಾಸ ಮೂಡಿದೆ, ಡಾ.ಸಿದ್ದಪ್ಪ ಎಂಬುವವರು ನಿರ್ದೇಶಕರಾಗಿದ್ದಾಗ ಬೀಕರ ಕೊರೊನ ಇತ್ತು. ನಿರ್ದೇಶಕರು ಅಷ್ಟಾಗಿ ಚಿಂತಿಸಿ ಕೆಲಸ ಮಾಡದಿ ದ್ದಾಗಲೂ ಡಾ.ಶ್ರೀಧರ್ ಎಲ್ಲವನ್ನೂ ನಿಬಾಯಿಸಿದ್ದಾರೆ,
ಅಷ್ಟೇ ಅಲ್ಲ ನಂತರದ ಹಲವಾರು ಘಟನೆ ಗಳು ನಡೆದಾಗಲು ದಕ್ಷವಾಗಿ ಕೆಲಸ ನಿರ್ವಹಿಸಿ ದ್ದಾರೆ, ಅದರಲ್ಲೂ ಇತ್ತಿಚಿಗೆ ನೂರಾರು ಹಾಸ್ಟೆಲ್ ಮಕ್ಕಳಿಗೆ ಆಹಾರ ವ್ಯತ್ಯಾಸವಾಗಿ ಆಸ್ಪತ್ರೆಗೆ ಬಂದ ಸಂದರ್ಭಗಳಲ್ಲಿ ಡಾ.ಶ್ರೀಧರ್ ಅತ್ಯಂತ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ.
ಅತ್ಯಂತ ಸರಳವಾಗಿ ಜನ ಸಾಮಾನ್ಯರಿಗೆ ಸುಲಭವಾಗಿ ಸಿಗುವ ಡಾ.ಶ್ರೀಧರ್ ಜಿಲ್ಲೆಯ ಯಾವುದೇ ಮೂಲೆಯಿಂದ ಯಾರೇ ಪೋನ್ ಮಾಡಿದರೂ ಸ್ಪಂದಿಸಿದ್ದಾರೆ, ಎಲ್ಲಾ ಜಾತಿ, ಎಲ್ಲಾ ಧರ್ಮದ ಜನರ ವಿಶ್ವಾಸ ಗಳಿಸಿರುವ ಶ್ರೀಧರ್ ಮೇಲೆ ಆಸ್ಪತ್ರೆಯಲ್ಲಿಯೇ ಇರುವ ಕೆಲವು ದುಷ್ಟ ಶಕ್ತಿಗಳು ಅವರ ವಿರುದ್ದ ಪಿತೂರಿ ಮಾಡುತ್ತಿದ್ದಾರೆ.
ಈ ಪಿತೂರಿ ಮಾಡುವವರಲ್ಲಿ ಬಹುತೇಕರು ಅತ್ಯಂತ ಕಡು ಭಷ್ಟರು, ಸುಳ್ಳು ದಾಖಲೆ ಸೃಷ್ಟಿಸಿ ಲಾಭ ಪಡೆದವರು, ಲೈಂಗಿಕ ಕಿರುಕುಳದ ಆರೋಪ ಹೊತ್ತವರು, ಮೆಗಾನ್ ಆಸ್ಪತ್ರೆ ಭಯೋ ಮೆಟ್ರಕ್ ಒತ್ತಿ ಖಾಸಗಿ ಪ್ರಾಕ್ಟಿಸ್ ಗೆ ಹೋಗುವವರು ಇದ್ದಾರೆ. ಇವರೆಲ್ಲ ಸೇರಿ ಕೆಲವು ಪುಡಿ ರಾಜಕಾರಣಿಗಳು ಮತ್ತು ಕೆಲವು ಸಂಘಟನೆಗಳ ಎತ್ತುವಳಿದಾರರನ್ನು ಇಟ್ಟುಕೊಂಡು ಮೇಲಿಂದ ಮೇಲೆ ಮೂಖರ್ಜಿ ಬರೆಯುತ್ತಿದ್ದವರು ಸರ್ಕಾರ ಬದಲಾದೊಡನೆ ನೇರವಾಗಿ ಅರ್ಜಿ ಬರೆಯಲು ಆರಂಬಿಸಿದ್ದಾರೆ.
ಮೆಗ್ಗಾನ್ ನಲ್ಲಿರುವ ಮೈಗಳ್ಳರು, ಆಸ್ಪತ್ರೆಗೆ ಬಾರದೆಯೇ ಸಂಬಳ ಪಡೆಯುವವರು, ಬಡವರ ರಕ್ತ ಹೀರುವ ಭ್ರಷ್ಟಾಚಾರಿಗಳು, ಸಣ್ಣ ಸ್ವೀಪರ್ ಕೆಲಸಕ್ಕೂ ಲಂಚ ಪಡೆವರನ್ನು ರಾಜಾರೋಷವಾಗಿ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನ ಬದಲಾಯಿಸಿ ವರ್ಗಾವಣೆ ಮಾಡುವುದು ಸರ್ಕಾರಕ್ಕೆ ಶೋಬೆ ತರುವಂತಹುದಲ್ಲ. ದುರುದ್ದೇಶ ಪೂರಿತವಾದ ಅರ್ಜಿಗಳನ್ನು ಸರ್ಕಾರ ಪರಿಗಣಿಸಬಾರದು,
ಮೆಗಾನ್ ಆಸ್ಪತ್ರೆಯನ್ನು ಸುದಾರಿಸಲು ಬಹಳಷ್ಟು ಕೆಲಸಗಳಿವೆ. ಅದನ್ನು ಮೊದಲು ಮಾಡಬೇಕಾಗಿದೆ ಇದನ್ನು ಹೊರತುಪಡಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೇಡಿಕಲ್ ಸೂಪರ್ ಡೆಂಟ್ ಡಾ. ಶ್ರೀಧರ್ ಮೇಲೆ ಹಗೆತನ ತೋರುವುದು ಹಾಗೂ ರಾಜಕೀಯ ಪ್ರೇರಿತವಾಗಿ ಜನಾಂಗೀಯ ದ್ವೇಷವಾಗಿ ಕಾಣುತ್ತದೆ. ಈ ರಾಜಕೀಯ, ಜನಾಂಗೀಯ ದ್ವೇಷವನ್ನು ನಾವುಗಳು ಖಂಡಿಸುತ್ತೇವೆ.
-ಹೆಚ್ ಪಿ ಸುರೇಶ್ ರಾವ್ ನಾಡಿಗ್