ಪಕ್ಷದ ಕಾರ್ಯಕರ್ತರು ನನ್ನ ಮೇಲೆ ಅಭಿಮಾನ, ನಂಬಿಕೆ ಇಟ್ಟು ಶ್ರಮಿಸಿದ ಪ್ರತಿಫಲವಾಗಿ ನನ್ನ ಗೆಲುವು ಸಾಧ್ಯವಾಗಿದೆ’ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ‍್ಯಾನಾಯ್ಕ ತಿಳಿಸಿದರು.
ಕುಂಸಿಯ ಸಮುದಾಯ ಭವನದಲ್ಲಿ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನು ಕ್ಷೇತ್ರಕ್ಕೆ ಎರಡನೇ ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದು, ಮೊದಲ ಐದು ವರ್ಷಗಳ ಅವಧಿಯ ಕೆಲಸಗಳು ಹಾಗೂ ಅಭಿವೃದ್ಧಿ ಯೋಜನೆಗಳನ್ನು ಜನರು ಇಂದಿಗೂ ಮರೆತಿಲ್ಲ. ಕಳೆದ ಬಾರಿ ಅಭಿವೃದ್ಧಿ ಕುಂಠಿತ ಕಾರಣ ಸೋಲಾಯಿತು ಎಂಬ ಮಾತುಗಳು ಎಲ್ಲಿಯೂ ಬರಲಿಲ್ಲ. ಅದಕ್ಕೆ ಬೇರೆಯದೇ ಕಾರಣಗಳಿವೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾ ಸತೀಶ್, ಮಾಜಿ ಉಪಾಧ್ಯಕ್ಷೆ ರೂಪ ಪ್ರಭಾಕರ್, ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಇದ್ದರು.