ಶಿವಮೊಗ್ಗ: ಕೇಂದ್ರ ಸರಕಾರದ ಅಧೀನದಲ್ಲಿರುವ ರಾಷ್ಟ್ರೀಯ ರಕ್ಷಾ ವಿಶವಿದ್ಯಾಲಯವು ಶಿವಮೊಗ್ಗದಲ್ಲಿ ತನ್ನ ಇನ್ನೊಂದು ಕ್ಯಾಂಪಸ್‌ನ್ನು ಈ ವರ್ಷದಿಂದ ಆರಂಭಿಸಲಿದೆ.

ಪೊಲೀಸಿಂಗ್ ಮತ್ತು ಆಂತರಿಕ ಭದ್ರತೆಗೆ ಹೆಚ್ಚಿನ ಒತ್ತು ಕೊಡುವ ವಿಷಯಗಳನ್ನು ಈ ವಿಶವಿದ್ಯಾಲಯ ಒಳಗೊಂಡಿದೆ. ವಿವಿಧ ಕೋರ್ಸುಗಳಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಇದರ ಪ್ರಯೋಜನ ಪಡೆಯಬೇಕೆಂದು ವಿವಿಯ ಶಿವಮೊಗ್ಗ ಕ್ಯಾಂಪಸ್‌ನ ಕ್ರಿಮಿನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದಿವ್ಯಶ್ರೀ ಹೇಳಿದರು.


ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ರಾಗಿಗುಡ್ಡದಲ್ಲಿರುವ ಕೇಂದ್ರೀಯ ವಿದ್ಯಾಲಯದ ಹಳೆಯ ಕಟ್ಟಡದಲ್ಲಿ ಇದನ್ನು ಆರಂಭಿಸಲಾಗುತ್ತಿದೆ. ರಕ್ಷಣಾ ವಿಷಯಕ್ಕೆ ಸಂಬಂಧಿಸಿದ ಶಿಕ್ಷಣವನ್ನು ಕೊಡುವ ಏಕೈಕ ವಿಶವಿದ್ಯಾಲಯ ಇದಾಗಿದೆ. ಪೊಲೀಸ್ ಸೈನ್ಸ್, ಕಾನೂನು, ವಿಧಿವಿಜ್ಞಾನ, ಡಿಫೆನ್ಸ್ ಮತ್ತು ಅದರ ಅಧ್ಯಯನ, ಕ್ರಿಮಿನಾಲಜಿ, ಸೈಬರ್, ಫೊರೆನ್ಸಿಕ್, ಮಾಹಿತಿ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ ಮುಂತಾದ ವಿಷಯಗಳಲ್ಲಿ ಪದವಿ ಮತ್ತು ಉನ್ನತ ಶಿಕ್ಷಣ ಪಡೆಯಲು ಅವಕಾಶವಿದೆ. ಸಂಸೋಧನೆ ನಡೆಸುವವರಿಗೂ ಸಹ ಇದು ಉಪಯೋಗಕಾರಿಯಾಗಿದೆ ಎಂದರು.


ವಿವಿಯು ಸ್ಕಾಲರ್‌ಶಿಪ್, ಉದ್ಯೋಗ, ಹಣಕಾಸು ನೆರವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ಪಿಯು ಪಾಸಾದವರಿಗೆ ಒಂದು ವರ್ಷದ ಡಿಪ್ಲೊಮಾ ಕೋರ್ಸು ಲಭ್ಯವಿದೆ. ಜೊತೆಗೆ ೪ ವರ್ಷಗಳ ಸೆಕ್ಯುರಿಟಿ ಮ್ಯಾನೇಜ್‌ಮೆಂಟ್ ಪದವಿ ಪಡೆಯಲು ಅವಕಾಶವಿದೆ. ಪದವಿ ಪೂರೈಸಿದವರಿಗೆ ಒಂದು ವರ್ಷದ ಪೊಲೀಸ್ ಸೈನ್ಸ್ ಮ್ಯಾನೇಜ್‌ಮೆಂಟ್ ಅಧ್ಯಯನಕ್ಕೆ ಅವಕಾಶವಿದೆ. ಇದರ ಹೊರತಾಗಿ ಪಿಯು ಪಾಸಾದವರಿಗೆ ಕಾರ್ಪೊರೆಟ್ ಸೆಕ್ಯುರಿಟಿ ಮ್ಯಾನೇಜ್‌ಮೆಂಟ್, ಕೋಸ್ಟಲ್ ಸೆಕ್ಯುರಿಟಿ ಮತ್ತು ಲಾ ಎನ್‌ಫೋರ್ಸ್‌ಮೆಂಟ್, ಫಿಸಿಕಲ್ ಫಿಟ್ ನೆಸ್ ಮ್ಯಾನೇಜ್‌ಮೆಂಟ್ ಮೊದಲಾದ ಸರ್ಟಿಫಿಕೆಟ್ ಕೋರ್ಸುಗಳನ್ನು ಅಧ್ಯಯನ ಮಾಡುವ ಅವಕಾಶ ಇಲ್ಲಿದೆ ಎಂದರು.

.


ಮೆರಿಟ್ ಆಧಾರದಲ್ಲಿ ಪ್ರವೇಶ ನೀಡಲಾಗುವುದು. ಹಾಸ್ಟೆಲ್ ವ್ಯವಸ್ಥೆ ಇರುತ್ತದೆ. ಇಲ್ಲಿ ಅಧ್ಯಯನ ಮಾಡಿದವರಿಗೆ ಪೊಲೀಸ್ ನೇಮಕಾತಿ ಮತ್ತು ರಕ್ಷಣಾ ಇಲಾಖೆಯ ನೇಮಕಾತಿಯಲ್ಲಿ ಹೆಚ್ಚಿನ ಆದ್ಯತೆ ಸಿಗಲಿದೆ. ಉನ್ನತ ದೇಶಭsಕ್ತಿ, ಕೌಶಲ್ಯ, ಶಿಸ್ತು, ನೈತಿಕತೆಯನ್ನು ಯುವಕರಲ್ಲಿ ಬೆಳೆಸುವ ಶಿಕ್ಷಣ ಇದಾಗಿದೆ. ಇಲ್ಲಿ ತರಬೇತಿಯನ್ನು ನಿವೃತ್ತ್ತ ಮತ್ತು ಹಾಲಿ ಸೇವೆಯಲ್ಲಿರುವ ಉನ್ನತಾಧಿಕಾರಿಗಳಿಂದ ಕೊಡಿಸಲಾಗುವುದು. ಮಾನಸಿಕ ಮತ್ತು ದೈಹಿಕ ಸದೃಢತೆಗೆ ಹೆಚ್ಚಿನ ಒತ್ತು ಕೊಡಲಾಗುವುದು. ಕರ್ನಾಟಕದವರಿಗೆ ಹೆಚ್ಚಿನ ಉದ್ಯೋಗಾವಕಾದ ಸೌಲಭ್ಯ ಇದರಿಂದ ಸಿಗಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಿಶದ್ಯಾಲಯದ ಆಡಳಿತ ಅಧಿಕಾರಿ ಮಹೇಶ ಕುಸಲಾನಿ, ಶಿವಲಿಂಗಪ್ಪ ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!