ಹೊಸನಗರ: ಇನ್ನೂ ಐದು ವರ್ಷದಲ್ಲಿ ಹೊಸನಗರ ತಾಲ್ಲೂಕು ಕ್ಷೇತ್ರವನ್ನು ಮಾದರಿ ತಾಲ್ಲೂಕನ್ನಾಗಿ ಮಾಡುವುದೇ ನನ್ನ ಗುರಿಯಾಗಿದ್ದು ಈ ತಾಲ್ಲೂಕಿನ ಜನರು ಯಾವುದೇ ಮೂಲಭೂತ ಸಮಸ್ಯೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವ ಗುರಿ ನನ್ನ ಜಾವಾಬ್ದಾರಿಯಾಗಿದೆ ಎಂದು ಹೊಸನಗರ ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಹೇಳಿದರು.


ಹೊಸನಗರದ ಆರ್ಯಈಡಿಗರ ಸಭಾಭವನದ ಆವರಣದಲ್ಲಿ ತಾಲ್ಲೂಕು ಕಾಂಗ್ರೇಸ್ ಪಕ್ಷದ ವತಿಯಿಂದ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭವನ್ನು ಎರ್ಪಡಿಸಲಾಗಿದ್ದು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.


ಹೊಸನಗರ ಕ್ಷೇತ್ರದಲ್ಲಿ ಕುಂಠಿತವಾಗಿರುವ ಕಾಮಾಗಾರಿಗಳನ್ನು ತಕ್ಷಣದಿಂದಲೇ ಕೈಗೆ ಎತ್ತಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದ್ದು ೯೪ ಸಿ, ೯೪ ಸಿ.ಸಿ ಬಗರ್‌ಹುಕುಂ ಹಾಗೂ ಕಂದಾಯ ಇಲಾಖೆಗೆ ಸಂಬಂದಿಸಿದ ರೈತರ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆ ಹರಿಸಲಾಗುವುದು ಎಂದರು.
ನಾನು ದ್ವೇಷ ರಾಜಕೀಯ ಮಾಡುವವರಲ್ಲ: ನಾವು ದ್ವೇಷ ರಾಜಕೀಯ ಮಾಡುವವರು ನಾನಲ್ಲ ಎಲ್ಲ

.

ವರ್ಗದ ಜನರನ್ನು ಒಂದು ಮಾಡಿಕೊಂಡು ಜನ ಸೇವೆ ಮಾಡುವ ಗುಣವನ್ನು ನಾನು ಹೊಂದಿದ್ದು ಎಲ್ಲ ಪಕ್ಷದ ಕಾರ್ಯಕರ್ತರನ್ನು ಒಂದುಗೂಡಿಸಿಕೊಂಡು ಅಣ್ಣ-ತಮ್ಮಂದಿರಂತೆ ಒಟ್ಟಾಗಿ ಜನರ ಸೇವೆ ಮಾಡೋಣ ನಾನು ಮತ್ತು ನಮ್ಮ ಕಾರ್ಯಕರ್ತರು ದ್ವೇಷ ರಾಜಕೀಯ ಮಾಡುವುದಿಲ್ಲ ನಮ್ಮ ವಿರೋಧಿಗಳು ದ್ವೇಷ ಸಾಧನೆ ಮಾಡದೇ ನಮ್ಮೊಂದಿಗೆ ಕೈ ಜೋಡಿಸಿದರೆ ಅಭಿವೃದ್ಧಿ ಕೆಲಸ ಮಾಡುವುದು

ಸುಲಭವಾಗುತ್ತದೆ ನಾನು ಹೊಸನಗರ-ಸಾಗರ ಕ್ಷೇತ್ರದ ಜನರ ಸೇವಕನಾಗಿ ನಾನು ಜನರ ಸೇವೆ ಮಾಡಲು ಸಿದ್ಧರಿದ್ದು ನನ್ನ ಜೊತೆ ಕೆಲಸ ಮಾಡಿಸಿಕೊಳ್ಳಲು ಯಾವುದೇ ಮಧ್ಯವರ್ತಿಗಳ ಅವಶ್ಯಕತೆಯಿಲ್ಲ ನೆರವಾಗಿ ನನ್ನ ಜೊತೆಗೆ ಮಾತನಾಡಿಕೊಂಡು ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಿ ನನ್ನ ಕೈಯಲ್ಲದ ಸಹಾಯ ಮಾಡುವುದಾದರೆ

By admin

ನಿಮ್ಮದೊಂದು ಉತ್ತರ

error: Content is protected !!