ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಈಜಲು ಹೋಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊರಬೈಲು ಬುಕ್ಲಾಪುರ ಸಮೀಪ ಗುರುವಾರ ಮಧ್ಯಾಹ್ನನಡೆದಿದ್ದು ಶುಕ್ರವಾರ ಶವ ಪತ್ತೆಯಾಗಿದೆ.

ಹೊರಬೈಲಿನ ಮರ ಕೆಲಸ ಮಾಡುತ್ತಿರುವ ವೆಂಕಟೇಶ ಆಚಾರ್ಯ ಅವರ ಪುತ್ರ ಮಾಧವ್ ( 26) ಈಜಲು ಹೋದಾಗ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

4 ಮಂದಿ ಸ್ನೇಹಿತರು ಈಜಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ದಿನಗಳಿಂದ ನಿರಂತರವಾಗಿ ಅಗ್ನಿ ಶಾಮಕ ದಳದ ಸಿಬಂದಿಗಳು ನದಿಯಲ್ಲಿ ಶೋಧ ನಡೆಸಿದರೂ ಮೃತ ದೇಹ ಪತ್ತೆ ಯಾಗಲಿಲ್ಲ.
