ಶ್ರೀ ವಿದ್ಯಾಗಣಪತಿ ಸೇವಾ ಸಂಘದ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಮುಂದುವರಿದ ಸಂಗೀತ ಕಾರ್ಯಕ್ರಮವು ಮೇ ೧೫ರಿಂದ ೨೩ರವರೆಗೆ ಪ್ರತಿದಿನ ಸಂಜೆ ೫-೩೦ರಿಂದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಶಾಸ್ತ್ರಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇ ೧೫ರ ಸಂಜೆ ೫-೩೦ಕ್ಕೆ ಮಂಗಳಾ ಅಶೋಕ್‌ರಿಂದ ವೀಣಾವಾದನ, ೭-೩೦ಕ್ಕೆ ಬೆಂಗಳೂರಿನ ಉಡುಪಿ ಅಭಿಜ್ಞಾರಾವ್‌ರಿಂದ ಹಾಡುಗಾರಿಕೆ ನಡೆಯಲಿದೆ ಎಂದರು.
ಮೇ;೧೬ರಂದು ಸಂಜೆ ೫-೩೦ಕ್ಕೆ ಸಾಕೇತ್ ಶಾಸ್ತ್ರಿ ಮತ್ತು ವೃದದವರಿಂದ ಹಿಂದೂಸ್ತಾನಿ ಗಾಯನ, ೬-೩೦ಕ್ಕೆ ಸಿದ್ಧಾರ್ಥ್ ಬೆಳ್ಮಣ್ಣುರಿಂದ ಹಿಂದೂಸ್ತಾನಿ ಗಾಯನ, ಮೇ ೧೭ರಂದು ಸಂಜೆ ೫-೩೦ಕ್ಕೆ ಅದಿತಿ ಎಂ.ಎಸ್. ಮತ್ತೂರು ಮತ್ತು ವೃಂದದವರಿಂದ ಹಾಡುಗಾರಿಕೆ, ೬-೩೦ಕ್ಕೆ ರಮ್ಯಾ ಸಾರಿಕಾ(ಯುಎಸ್‌ಎ) ಹಾಡುಗಾರಿಕೆ ನಡೆಯಲಿದೆ ಎಂದರು.
ಮೇ ೧೮ರ ಸಂಜೆ ೫-೩೦ಕ್ಕೆ ಟಿ.ವಿ. ಶಿಲ್ಪಾ ಮತ್ತ ವೃಂದದವರಿಂದ ಹಾಡುಗಾರಿಕೆ, ೬-೩೦ಕ್ಕೆ ತ್ರಿಚ್ಯೂರ್ ಸಹೋದರರಾದ ಶ್ರೀಕೃಷ್ಣ ಮೋಹನ್ ಹಾಗೂ ರಾಮ್‌ಕುಮಾರ್ ಮೋಹನ್‌ರಿಂದ ಯುಗಳ ಹಾಡುಗಾರಿಕೆ. ೧೯ರ ಸಂಜೆ ೫-೩೦ಕ್ಕೆ ಬೆಂಗಳೂರಿನ ನಯನ ಕಾರಂತ್ ಮತ್ತು ವೃಂದದವರಿಂದ ಹಾಡುಗಾರಿಕೆ, ೬-೩೦ಕ್ಕೆ ಹೊಸಳ್ಳಿಯ ರಾಜೇಶ್ವರಿ ನಾಗೇಂದ್ರ ಪ್ರಕಾಶ್‌ರಿಂದ ಹಾಡುಗಾರಿಕೆ ನಡೆಯಲಿದೆ ಎಂದರು.
ಮೇ ೨೦ರ ಸಂಜೆ ೬ ಗಂಟೆಗೆ ಶ್ರೀ ಪರಮಹಂಸ ಸದಾಶಿವ ಬ್ರಹ್ಮೇಂದ್ರರ ರಚನೆ ‘ಅದ್ವೈತ ಸದಾಶಿವವನ್ನು ಶಿವಮೊಗ್ಗದ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ. ಮೇ ೨೧ರ ಸಂಜೆ ೫-೩೦ಕ್ಕೆ ಮಹತಿ ಭಟ್ ಮತ್ತು ವೃಂದದವರಿಂದ ಹಾಡುಗಾರಿಕೆ, ೬-೩೦ಕ್ಕೆ ಮೈಸೂರಿನ ಆರ್.ಕೆ. ಪದ್ಮನಾಭ ಇವರಿಂದ ವೀಣಾ ವಾದನ ನಡೆಯಲಿದೆ ಎಂದರು.
ಮೇ ೨೨ರ ಸಂಜೆ ೫-೩೦ಕ್ಕೆ ಬೆಂಗಳೂರಿನ ಚಿನ್ಮಯಿ ನಾಗೇಂದ್ರ ಮತ್ತು ಮಹತಿ ನಾಗೇಂದ್ರ ಮತ್ತು ವೃಂದದವರಿಂದ ಯುಗಳ ಹಾಡುಗಾರಿಕೆ ೬-೩೦ಕ್ಕೆ ಬೆಂಗಳೂರಿನ ಸಾಧ್ವಿನಿರಿಂದ ಹಾಡುಗಾರಿಕೆ. ಮೇ೨೩ರ ಸಂಜೆ ೫-೩೦ಕ್ಕೆ ಭವಾನಿ ಕಲ್ಕೂರು ಮತ್ತು ವೃಂದದವರಿಂದ ಹಾಡುಗಾರಿಕೆ, ೬-೩೦ಕ್ಕೆ ಚೆನ್ನೈನ ಶ್ರುತಿ ಎಸ್. ಭಟ್‌ರಿಂದ ಹಾಡುಗಾರಿಕೆ ನಡೆಯಲಿದೆ ಎಂದರು.
ಸಂಘದ ಅಧ್ಯಕ್ಷ ಶಂಕರನಾರಾಯಣ ಶಾಸ್ತ್ರಿ ಮಾತನಾಡಿ, ಪ್ರತಿ ವರ್ಷವೂ ಸಂಘದಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬಂದಿದ್ದು, ಹೆಚ್ಚಾಗಿ ಶಾಸ್ತ್ರೀಯ ಸಂಗೀತಕ್ಕೆ ಒತ್ತು ನೀಡುತ್ತಿದ್ದೇವೆ. ೨೫ನೇ ವರ್ಷದ ಅಂಗವಾಗಿ ಸುಮಾರು ೩೦ ಕಾರ್ಯಕ್ರಮ, ೫೦ನೇ ವರ್ಷದ ಅಂಗವಾಗಿ ೬೦ ಕಾರ್ಯಕ್ರಮ, ಈಗ ೭೫ನೇ ವರ್ಷದ ಅಂಗವಾಗಿ ಈಗಾಗಲೇ ೭೨ ಕಾರ್ಯಕ್ರಮವನ್ನು ನಡೆಸಲಾಗಿದೆ. ಖ್ಯಾತ ಹಾಡುಗಾರರನ್ನು ಕರೆಯಿಸಿ ಕಾರ್ಯಕ್ರಮವನ್ನು ನಡೆಸಿದ್ದೇವೆ ಎಂದ ಅವರು, ಕಾರ್ಯಕ್ರಮಕ್ಕೆ ಸಂಗೀತಾಭಿಮಾನಿಗಳು ಆಗಮಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಕಿಶೋರ್ ಶಿರ್ನಾಳಿ, ಶ್ರೀನಿವಾಸ, ಮೋಹನ ಶಾಸ್ತ್ರಿ, ಗೋಪಾಲ, ಆನಂದ, ಶ್ರೀರಾಮ ಉಪಸ್ಥಿತರಿದ್ದರ