ಶಿವಮೊಗ್ಗ, ಮೇ.೦೪:
ಒಪಿಎಸ್‌ಗೆ ಹಂಬಲಿಸುತ್ತಿರುವ ಲಕ್ಷಾಂತರ ಸರ್ಕಾರಿ ನೌಕರರಿಗೆ, ಒಪಿಎಸ್, ಎನ್‌ಪಿಎಸ್ ಯಾವುದು ಇಲ್ಲದೇ ಬಳಲುತ್ತಿರುವ ಸರ್ಕಾರಿ ಅನು ದಾನಿತ ಶಾಲಾ ಶಿಕ್ಷಕರಿಗೆ, ವಿಶೇಷ ವಾಗಿ ಪೊಲೀಸರಿಗೆ ಮತ್ತು ಶೈಕ್ಷಣಿಕ ಸಾಲ ಪಡೆದು ಬಳಲುತ್ತಿರುವ ಮಕ್ಕಳಿಗೆ ಅನುಕೂಲಕರವಾಗುವಂತಹ ಯೋಜ ನೆಗಳು ಜಾರಿಗೆ ಬರುವುದು ಸತ್ಯ. ಇಂತಹ ಭರವಸೆಯನ್ನು ನಿಕಟ ಪೂರ್ವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೀಡಿದ್ದಾರೆ ಎಂದು ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ, ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.

ನಿಕಟಪೂರ್ವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬ್ರಾಹ್ಮಣ ಸಮುದಾಯಕ್ಕೆ ವಿಶೇಷವಾಗಿ ಅತಿಹೆಚ್ಚಿನ ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ. ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ವಿಶಾಲದ ಜಾಗಕೊಟ್ಟಿದ್ದರು. ಅಲ್ಲಿ ಗಾಯತ್ರಿ ಭವನ ಮಾಡಿದ್ದೇವೆ. ಶಿವಮೊಗ್ಗದಲ್ಲಿ ಮಾದರಿಯಾದ ಆಚಾರ್ಯತ್ರೇಯರ ಭವನವನ್ನು ಇಡೀ ರಾಜ್ಯದಲ್ಲಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಾನು ಶಾಸಕನಾಗಿದ್ದಾಗ ವಿರೋಧ ಪಕ್ಷದಲ್ಲಿದ್ದರು ಸಹ ನನ್ನ ಕೋರಿಕೆಯಂತೆ ಬ್ರಾಹ್ಮಣ ಅಭಿವೃದ್ಧಿ ನಿಗಮವನ್ನು ಆರಂಭಿಸಿದ್ದರು. ದುರಂತವೆಂದರೆ ನಂತರ ಬಂದ ಬಿಜೆಪಿ ಅದಕ್ಕೆ ಅನುದಾನವನ್ನೇ ನೀಡಲಿಲ್ಲ. ಈಗ ಕುಮಾರಸ್ವಾಮಿ ಅವರು ನಮ್ಮಕೋರಿಕೆ ಮೇರೆಗೆ ೧೦೦ ಕೋಟಿ ಮೀಸಲಿಡುವುದಾಗಿ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಂಜಣ್ಣ ನನ್ನು ಗೆಲ್ಲಿಸಿದರೆ ಶಾಂತಿಯುತವಾದ ನಗರವಾಗುವುದರಲ್ಲಿ ಎರಡು ಮಾತಿಲ್ಲ. ನಂತರ ಮಂತ್ರಿಯಾಗುತ್ತಾರೆ. ಪರ್ಸೆಟೇಜ್ ಇಲ್ಲದ ಅಭಿವೃದ್ಧಿ ಆಗುತ್ತದೆ ಹಾಗಾಗೀ ಎಲ್ಲರೂ ವಿಶೇಷವಾಗಿ ಬ್ರಾಹ್ಮಣ ಸಮುದಾಯ ದವರು ಶಿವಮೊಗ್ಗ ಆಯನೂರು ಮಂಜುನಾಥ್‌ಗೆ ಬೆಂಬಲ ನೀಡಿ. ಔರಾದ್ಕರ್ ವರದಿ
-ಕೆ.ಬಿ.ಪ್ರಸನ್ನಕುಮಾರ್, ಮಾಜಿ ಶಾಸಕರು


ಇಂದು ಬೆಳಗ್ಗೆ ಸುದ್ದಿಗೋಷ್ಠಿ ಯಲ್ಲಿ ಮಾತನಾಡುತ್ತಾ, ನಿನ್ನೆ ಸಂಜೆ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ನಮ್ಮ ಬೇಡಿಕೆಗನು ಸಾರವಾಗಿ ಪ್ರಣಾಳಿಕೆಯಲ್ಲಿ ಘೋಷಿ ಸದ ಈ ಅಂಶಗಳನ್ನು ಸಹ ಮೊದಲ ಅದ್ಯತೆಯಾಗಿ ಪರಿಗಣಿಸಿ ಕ್ರಮಕೈಗೊ ಳ್ಳುವುದಾಗಿ ಕುಮಾರಸ್ವಾಮಿ ತಿಳಿಸಿರು ವುದು ಇದು ರಾಜ್ಯದ ಲಕ್ಷಾಂತರ ಜನರಿಗೆ ಮತ್ತು ಅವರ ಕುಟುಂಬಕ್ಕೆ ವರದಾನವಾಗಲಿದೆ ಎಂದರು.
ನಾನು ಈ ಹಿಂದೆ ಜೆಡಿಎಸ್ ಸೇರುವ ಪೂರ್ವದಲ್ಲಿ ಇಟ್ಟಿದ್ದ ಬೇಡಿಕೆ ಈ ಮೇಲ್ಕಂಡ ಅಂಶಗಳಾಗಿವೆ. ಸರ್ಕಾರಿ ನೌಕರರ ಒಪಿಎಸ್ ಜಾರಿಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಇದರಿಂದ ಸುಮಾರು ೪ ಲಕ್ಷ ನೌಕರರಿಗೆ ಅನುಕೂಲವಾಗಲಿದೆ ಕುಮಾರ ಸ್ವಾಮಿ ಮುಖ್ಯಮಂತ್ರಿಯಾದರೆ ಇದು ಈಡೇರುವುದು ಖಚಿತ ಎಂದು ಹೇಳಿದರು.


ನಿವೃತ್ತ ನೌಕರರ ಕುಟುಂಬಕ್ಕೆ ನಂತರದ ಅವಧಿಯಲ್ಲಿ ಚಿಕಿತ್ಸೆಗೆ ತೊಂದರೆಯಾಗಿದ್ದು, ಅವರಿಗೂ ಸಹ ಆರೋಗ್ಯ ಸಂಜೀವಿನ ಯೋಜನೆಯನ್ನು ತರುವುದಾಗಿ ಭರವಸೆ ನೀಡಿದ ಕುಮಾರಸ್ವಾಮಿ, ಕಟ್ಟಡ ಕಲ್ಯಾಣ ಕಾರ್ಮಿಕ ಮಂಡಳಿ ಮಾದರಿಯಲ್ಲಿ ವಾಹನ ಚಾಲಕ ಹಾಗೂ ನಿರ್ವಾಹಕರ ಕಲ್ಯಾಣ ಕೇಂದ್ರ ಆರಂ ಭಿಸುವ ಮೂಲಕ ನಿತ್ಯ ಅವಘಡದ ಸಮಸ್ಯೆಗಳನ್ನು ಎದುರಿಸುವ ಲಕ್ಷಾಂತರ ಆಟೋ, ಟ್ಯಾಕ್ಸಿ ಮತ್ತಿತರ ಖಾಸಗಿ ವಾಹನಗಳ ಚಾಲಕರಿಗೆ ಹಾಗೂ ನಿರ್ವಾಹ ಕರಿಗೆ ಸಕಾಲಿಕವಾದ ಪರಿಹಾರ ದೊರೆಯುತ್ತದೆ ಎಂದರು.


ವಿಶೇಷವಾಗಿ ಬಹುದಿನದಿಂದ ಪೊಲೀಸರು ಕೇಳುತ್ತಿರುವ

ಸೇವಾ ಹಿರಿತನದ ಉಲ್ಲಂಘನೆಯನ್ನು ಮರುಪರಿಶೀಲಿಸುವುದಾಗಿ ಭರವಸೆ ನೀಡಿದ ಕುಮಾರಸ್ವಾಮಿ. ಈಗಲೂ ಸೇವಾ ಹಿರಿತನವಿಲ್ಲದೇ ಪೊಲೀಸ್ ಉದ್ಯೋಗ ಮಾಡುತ್ತಿರುವ ಶಿವಮೊಗ್ಗ ಸೇರಿದಂತೆ ರಾಜ್ಯದ ಸಾಕಷ್ಟು ಪೊಲೀಸರಿಗೆ ಇದು ಲಾಭವಾಗಲಿದೆ.
ಅಂತೆಯೇ ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಪಡೆದ ಶೈಕ್ಷಣಿಕ ಸಾಲ ಅವಧಿ ಮುಗಿದ ತಕ್ಷಣ ಬ್ಯಾಂಕ್‌ನವರ ಒತ್ತಡ, ಹಿಂಸೆ ಸಹಿಸದೇ ಅದೇಷ್ಟೋ ಮಕ್ಕಳು ಹಾಗೂ ಅವರ ಕುಟುಂಬ ನಿತ್ರಾಣಗೊಂಡಿರುವುದನ್ನು ಕುಮಾರಸ್ವಾಮಿ ಅವರ ಗಮನಕ್ಕೆ ತಂದಾಗ ನಾನು ಅಧಿಕಾರಕ್ಕೆ ಬರುವುದು ಶತಸಿದ್ದ. ನಾನು ಮುಖ್ಯಮಂತ್ರಿಯಾದರೆ ಶೈಕ್ಷಣಿಕ ಸಾಲವನ್ನು ಮೊದಲಹಂತವಾಗಿ ಮನ್ನಾ ಮಾಡುತ್ತಾಡುತ್ತೇನೆ. ಶಿವಮೊಗ್ಗದ ಅಭಿವೃದ್ಧಿಗೆ ದೊಡ್ಡ ಕೈಗಾರಿಕೆಗಳನ್ನು ತರುವುದು ನಮ್ಮ ಜವಾಬ್ದಾರಿ. ಎಂಪಿಎಂ ಪುನರ್‌ಜ್ಜೀವನಗೊಳಿಸಲಾಗುವುದು. ಅಂತೆಯೇ ಶಿವಮೊಗ್ಗದ ಇಬ್ಬರವನ್ನು ಸಚಿವರನ್ನಾಗಿ ಮಾಡಲಾಗುವುದು ಎಂದರು ಎಂದಿದ್ದಾರೆ.
ಕುಮಾರ ಸ್ವಾಮಿಯ ಗಟ್ಟಿಧನಿಯ ಸ್ಪಷ್ಟ ನಂಬ ಲರ್ಹ ಮಾತುಗಳಿಂದ ಪ್ರಣಾಳಿಕೆಯನ್ನು ಹೊರತು ಪಡಿಸಿ ಕೂಲಿ ಕಾರ್ಮಿಕರು, ವಾಹನ ಚಾಲಕರು, ಸರ್ಕಾರಿ ನೌಕರರು, ವಿಶೇಷವಾಗಿ ಪೊಲೀಸರು, ಅಂಗ ನವಾಡಿ ಕಾರ್ಯಕರ್ತೆಯರು, ಅತಿಥಿ ಉಪನ್ಯಾಸಕರು, ಅನುದಾನಿತ ಶಿಕ್ಷಕರಿಗೆ ಅನುಕೂಲವಾಗಲಿದ್ದು, ಎಲ್ಲರ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪ್ರಮುಖರಾದ ಮುಕ್ತಿಯಾರ್ ಅಹಮ್ಮದ್, ವೈ.ಹೆಚ್. ನಾಗರಾಜ್, ಹಿರಣಯ್ಯ, ದೀಪಕ್‌ಸಿಂಗ್ ಇತರರಿದ್ದರು.

ರಾಘವೇಂದ್ರ ಔರಾದ್ಕರ್ ವರದಿ ಮರುಪರಿಶೀಲ

By admin

ನಿಮ್ಮದೊಂದು ಉತ್ತರ

error: Content is protected !!