ತನಿಖಾ ಸಂಸ್ಥೆಗಳನು ಕಾವಲು ನಾಯಿಗೆ ಹೋಲಿಸಿದ ದಿನೇಶ್ ಗುಂಡೂರಾವ್!

ಬೆಂಗಳೂರು,ಅ.06:
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ, ಕಛೇರಿ ಮೇಲೆ ನಡೆಸಿರುವ ದಾಳಿಗೆ ವಿರೋಧಿಸಿ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು ಕೇಂದ್ರದ ತನಿಖಾ ಏಜೆನ್ಸಿಗಳಾದ CBI,IT ಮತ್ತು ED ಸಂವಿಧಾನದ ಕಾವಲು ನಾಯಿಗಳಾಗಿ ಉಳಿದಿಲ್ಲ.
ಬದಲಿಗೆ ಬಿಜೆಪಿ ಬಾಗಿಲು ಕಾಯುವ ಬೀದಿ ನಾಯಿಗಳಾಗಿವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಕೇಂದ್ರದ ತನಿಖಾ ಏಜೆನ್ಸಿಗಳಾದ CBI,IT ಮತ್ತು ED ಸಂವಿಧಾನದ ಕಾವಲು ನಾಯಿಗಳಾಗಿ ಉಳಿದಿಲ್ಲ. ಬದಲಿಗೆ BJP ಬಾಗಿಲು ಕಾಯುವ ಬೀದಿ ನಾಯಿಗಳಾಗಿವೆ ಎಂದಿದ್ದಾರೆ.
ಪ್ರತಿ ಚುನಾವಣೆ ಸಂದರ್ಭದಲ್ಲಿ ಎದುರಾಳಿ ಪಕ್ಷದವರ ಮೇಲೆ ದಾಳಿ ಮಾಡುವಂತೆ ಇವುಗಳಿಗೆ ತರಬೇತಿ ನೀಡಲಾಗಿದೆ. ಈ ಕೆಲಸವನ್ನು ಇವುಗಳು ಅಚ್ಚುಕಟ್ಟಾಗಿ ನಿರ್ವಹಿಸಿ ಬಿಜೆಪಿಗೆ ಗೆ ತಮ್ಮ ನಿಯತ್ತು ತೋರಿಸುತ್ತಿವೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದಿಂದ ನೌಕರರ ಮುಷ್ಕರ ನಿಷೇಧ…!?


ಶಿವಮೊಗ್ಗ, ಅ.06:
ಯಾವುದೇ ಸರ್ಕಾರಿ ನೌಕರರು ಅದರಲ್ಲೂ ಆರೋಗ್ಯ ಇಲಾಖೆಯ ಖಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕೋವಿಡ್ ಸಂದರ್ಭದಲ್ಲಿ ಮುಷ್ಕರ, ಅಸಹಕಾರ ಮೊದಲಾದ ಚಳವಳಿಗಳಿಗೆ ಮುಂದಾಗದಂತೆ ರಾಜ್ಯ ಸರ್ಕಾರ ನಿಷೇಧ ಹೇರಿದೆ.
ಇದರಿಂದ ಮುಷ್ಕರ ನಿರತ ಎನ್ ಹೆಚ್ ಎಂ ನ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಈ ಅಧಿಸೂಚನೆ ಹೆಚ್ಚಿನ ಪರಿಣಾಮ ಬೀರಲಿದ್ದು ಇದರಿಂದ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಸಾರ್ವಜನಿಕ ವಲಯದ ಅಧಿಕಾರಿ/ಸಿಬ್ವಂದಿ, ಆರೋಗ್ಯ ಸಿಬ್ಬಂದಿ, ಖಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು, ಸಾರ್ವಜನಿಕ ಆರೋಗ್ಯದ ಹಿತ ದೃಷ್ಠಿಯಿಂದ ಮುಷ್ಕರ, ಅಸಹಕಾರ, ಅವಿಧ್ಯೇಯತೆ ಅಥವಾ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಕೆಲಸಗಳನ್ನ ನಿರ್ವಹಿಸದಿರುವುದು ವರದಿಗಳನ್ನ ಸಲ್ಲಿಸದಿರುವುದು ಅಥವಾ ಮೇಲಾಧಿಕಾರಿಗಳ ಆದೇಶವನ್ನ ಪಾಲಿಸದಿರುವುದು ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಕೋವಿಡ್-19 ಪರಿಸ್ಥಿತಿಯು ತೀವ್ರ ಗಂಭೀರವಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಇಂದಿನ ದಿನಾಂಕದಲ್ಲಿ ರಾಜ್ಯ ಸರ್ಕಾರ ಹೊಸ ಅಧಿವೇಶನವನ್ನ ಹೊರಡಿಸಿದೆ. ಆದರೆ ಕಾನೂನು ಉಲ್ಲಂಘಿಸಿದರೆ ಯಾವ ಕ್ರಮ ಎಂಬುದುರ ಬಗ್ಗೆ ಸ್ಪಷ್ಟನೆ ಇಲ್ಲ. ಈ ಕಾನೂನು ಜಾರಿಗೊಳಿಸಿದ ಹಿನ್ನಲೆಯಲ್ಲಿ ಆಕುಕ ಮತ್ತು ವೈ.ಶಿ.ಇ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಮುಷ್ಕರ ಏನಾಗಲಿದೆ ಎಂಬುದು ಈಗ ಕುತೂಹಲಕ್ಕೆ ತಿರುಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!