ಶಿವಮೊಗ್ಗ, ಅ.05:
ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಗೂ ಕೊರೋನ ಸೋಂಕು ಕಾಣಿಸಿಕೊಂಡಿದ್ದು ತಮ್ಮ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗುವ ಮೂಲಕ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರು ಆರೋಗ್ಯದಲ್ಲಿ ಏರು ಪೇರು ಕಾಣಿಸಿಕೊಂಡ ಕಾರಣ(ಜ್ವರ) ಮೆಗ್ಗಾನ್ ನಲ್ಲಿ ಸ್ವಾಬ್ ಪರೀಕ್ಷೆಗೆ ನಿನ್ನೆ ಅವರನ್ನ ಒಳಪಡಿಸಲಾಗಿತ್ತು. ಇಂದು ಬೆಳಿಗ್ಗೆ ಅವರಿಗೆ ಕೊರೋನಾ ಪಾಸಿಟಿವ್ ಎಂದು ವರದಿ ಬಂದಿದೆ. ಅವರು ಈಗಾಗಲೇ ಎರಡನೇ ಬಾರಿ ಕೊರೋನ ಪರೀಕ್ಷೆಗೆ ಒಳಗಾಗಿರುವುದಾಗಿ ಶಾಸಕರು ಹೇಳಿಕೊಂಡಿದ್ದಾರೆ.
ಅವರು ತಮ್ಮ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಕೊರೋನ ಪಾಸಿಟಿವ್ ಬಂದಿರುವುದಾಗಿ ಹೇಳಿದ್ದಾರೆ.
ಕೊರೋನ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಲ್ಕೈದು ದಿನಗಳಿಂದ ತನ್ನ ಸಂಪರ್ಕದಲ್ಲಿರುವ ಎಲ್ಲರೂ ಪರೀಕ್ಷೆಗೆ ಒಳಗಾಗುವಂತೆ ಕೋರಿದ್ದಾರೆ.