ಶಿವಮೊಗ್ಗದ ರೌಡಿಸಂ ಈಗ ಹೊರಜಿಲ್ಲೆಯ ಗಡಿಭಾಗದಲ್ಲಿ ಮತ್ತೆ ಸದ್ದು ಮಾಡಿದೆ. ಚೀಲೂರು ಬಳಿಯ ಗೋವಿನ ಕೋವಿಯ ಬಳಿಯಲ್ಲಿ ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ಬೀಭತ್ಸ ದಾಳಿ ನಡೆದಿದೆ. ಈ ಪೈಕಿ ಆಂಜನೇಯ ಸಾವನ್ನಪ್ಪಿದ್ದು, ಮಧು ಸ್ತಿತಿ ಗಂಭೀರವಾಗಿದೆ. ನ್ಯಾಮತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಧು ಮತ್ತು ಆಂಜನೇಯ ಹಂದಿ ಅಣ್ಣಿ ಕೊಲೆ ಕೇಸಿನಲ್ಲಿ ಕೋರ್ಟ್ಗೆ ಅಟೆಂಡ್ ಆಗಿ ವಾಪಸ್ ಬರುತ್ತಿದ್ದರು. ಬೈಕ್ ನಲ್ಲಿ ಬರುತ್ತಿದ್ದ ಇವರಿಬ್ಬರನ್ನ ಸ್ಕಾರ್ಪಿಯೋ ಗಾಡಿಯೊಂದು ಫಾಲೋ ಮಾಡಿದೆ. ಅಲ್ಲದೆ ಗೋವಿನ ಕೋವಿ ಬಳಿ ಮಧು ಮತ್ತು ಆಂಜನೇಯನ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ.
ಈ ವೇಳೆ ಆಂಜನೇಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಹಲ್ಲೆ ಮಾಡಿದ ಗ್ಯಾಂಗ್ನಲ್ಲಿ ನಾಲ್ಕೈದು ಮಂದಿ ಇದ್ದಾರೆನ್ನಲಾಗಿತ್ತು. ಇನ್ನೂ ಸ್ಥಳದಲ್ಲಿ ಒಂದು ಸ್ಕಾರ್ಪಿಯೋ ಪತ್ತೆಯಾಗಿದೆ. ಸಿಎಂ ತವರಲ್ಲಿ ಸಿಕ್ಕಿಬಿದ್ರು…?
ಹಂದಿ ಅಣ್ಣಿಯನ್ನ ಕೊಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರೆಂಡರ್ ಆದ ಕಾಡಾಕಾರ್ತಿಕ್ ಮತ್ತು ಆತನ ಗ್ಯಾಂಗ್ ನ ರೀತಿಯಲ್ಲೇ ಆಂಜನೇಯನನ್ನ ಕೊಲೆ ಮಾಡಿ ಮಧುನನ್ನ ಸಾವು ಬದುಕಿನ ನಡುವೆ ಹೋರಾಡುವಂತೆ ಮಾಡಿದ್ದ ಗ್ಯಾಂಗ್ ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಪೊಲೀಸರಿಗೆ ಸರೆಂಡರ್ ಆಗಿದ್ದಾರೆ.
ಒಂದೇ ಒಂದು ವ್ಯತ್ಯಾಸವೆಂದರೆ ಕಾಡಾ ಕಾರ್ತಿಕ್ ಗ್ಯಾಂಗ್ ಹಂದಿ ಅಣ್ಣಿಯನ್ನ ಕೊಲೆ ಮಾಡಿ ನಾಲ್ಕು ದಿನಗಳ ನಂತರ ಚಿಕ್ಕಮಗಳೂರು ಜಿಲ್ಲೆಯ ಪೊಲೀಸರ ಬಳಿ ಸರೆಂಡರ್ ಆಗಿದ್ದರು. ಆಂಜನೇಯನನ್ನ ಕೊಲೆ ಮಾಡಿದ್ದ ಗ್ಯಾಂಗ್ ಒಂದೇ ದಿನದಲ್ಲಿ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಸರೆಂಡರ್ ಆಗಿದ್ದಾರೆ.
ಸುನೀಲ ಯಾನೆ ತಮಿಳು ಸುನೀಲ, ಅಭಿಲಾಷ್, ವೆಂಕಟೇಶ್ ಮತ್ತು ಪವನ್ ಎಂಬ ನಾಲ್ವರು ಇಂದು ಸ್ಕಾರ್ಪಿಯೋ ವಾಹನದಲ್ಲಿ ಶಿವಮೊಗ್ಗದ ನ್ಯಾಯಾಲಯಕ್ಕೆ ಬಂದಿದ್ದ ಹಂದಿ ಅಣ್ಣಿ ಕೊಲೆ ಆರೋಪಿಗಳಾಗಿದ್ದ ಮಧು ಮತ್ತು ಆಂಜನೇಯರನ್ನ ಹಿಂಬಾಲಿಸಿಕೊಂಡು ಗೋವಿನ ಕೋವಿಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು.
ದಾಳಿಯ ವೇಳೆ ಆಂಜನೇಯ ಸ್ಥಳದಲ್ಲಿಯೇ ಸಾವು ಕಂಡಿದ್ದಾನೆ. ಮಧು ಜೀವನ ಮತ್ತು ಮರಣದ ನಡುವೆ ಹೋರಾಡುತ್ತಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇತ್ತ ಕೊಲೆ ಮಾಡಿದ ಗ್ಯಾಂಗ್ ಸ್ಕಾರ್ಪಿಯೋ ರಿವರ್ಸ್ ತೆಗೆಯಲು ಆಗದ ಹಿನ್ಬಲೆಯಲ್ಲಿ ವಾಹನವನ್ನ ಬಿಟ್ಟು ಕೆಎಸ್ಆರ್ ಟಿ ಸಿ ಬಸ್ ಹತ್ತಿಕೊಂಡು ನೇರ ಹಾವೇರಿ ಜಿಲ್ಲೆಯ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಸರೆಂಡರ್ ಆಗಿದ್ದಾರೆ.
ಕೊಲೆ ಮಾಡಿದ ಒಂದೇ ದಿನದಲ್ಲಿ ನಾಲ್ವರು ಆರೋಪಿಗಳು ಶಿಗ್ಗಾಂವ್ ಪೊಲೀಸರ ಶರಣಾಗತಿಯಲ್ಲಿದ್ದಾರೆ. ಈ ನಾಲ್ವರು ಶಿವಮೊಗ್ಗದವರು ಎಂದು ಹೇಳಲಾಗುತ್ತಿದೆ.