ಸಾರ್ವಜನಿಕರ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡದಿದ್ದರೆ ನಾವು ದಿಢೀರ್ ಭೇಟಿ ನೀಡಿದಾಗ ಅನವಶ್ಯಕ ವಿಳಂಬ ಮತ್ತು ಲೋಪಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಕೇಸ್ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಚಿತ್ರದುರ್ಗ, ಶಿವಮೊಗ್ಗ ಲೋಕಾ ಯುಕ್ತ ಎಸ್‌ಪಿ ವಾಸುದೇವ್ ಮಹಾನಗರ ಪಾಲಿಕೆ ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.


ಅವರು ಇಂದು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸಾರ್ವ ಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಸಾರ್ವಜನಿಕ ಕುಂದುಕೊ ರತೆಗಳ ಸಭೆಯಲ್ಲಿ ಪಾಲಿಕೆಯ ಎಲ್ಲಾ ವಿಭಾಗದ ಸಿಬ್ಬಂದಿಗಳ ಸಭೆ ನಡೆಸಿ ಮಾತನಾಡಿದರು.


ಪ್ರತಿನಿತ್ಯ ಸಿಬ್ಬಂದಿಗಳು ಸೋಮಾರಿತನ ಬಿಟ್ಟು ಅಪ್‌ಡೇಟ್ ಆಗಬೇಕು. ಹೈಕೋರ್ಟ್ ನಮಗೆ ಪೂರ್ಣ ಅಧಿಕಾರ ನೀಡಿದೆ. ಕರ್ತವ್ಯ ಲೋಪ ಕಂಡುಬಂದಲ್ಲಿ ಲೋಕಾಯುಕ್ತ ಕೈಗೆ ಸಿಕ್ಕಿದಾಗ ಯಾವುದೇ ಮೂಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ. ನೀವು ಮತ್ತು ನಾವು ಇಬ್ಬರು ಸರ್ಕಾರಿ ನೌಕರರೇ. ಆದರೆ ಮೊದಲೇ ಎಚ್ಚರಿಕೆ ನೀಡುತ್ತಿರುವ ಉದ್ದೇಶ ತಪ್ಪನ್ನು ತಿದ್ದುಕೊಳ್ಳಿ. ಅಮೇಲೆ ಪಶ್ಚಾತಾಪ ಪಟ್ಟರೆ ಆಗುವುದಿಲ್ಲ. ಕೆಲವೊಂದು ರಾಜಕೀಯ ಒತ್ತಡ ಮತ್ತೆ ಕೆಲವರು ಇದೇ ಊರಿನಲ್ಲಿ ಇರಬೇಕು ಎಂಬ ಆಸೆ, ವರ್ಗಾವಣೆಯ ಭಯ ಅನೇಕ ರೀತಿಯ ಒತ್ತಡಗಳಿರುತ್ತವೆ. ಆದರೆ ಕೆಲಸ ಮಾಡಲೇಬೇಕು ಮತ್ತು ಇದೊಂದು ದೇವರು ಕೊಟ್ಟ ಸುದವ ಕಾಶ ಎಂದು ಭಾವಿಸಿ ಯಾವುದೇ ಫೈಲ್‌ಗಳನ್ನು ಪೆಂಡಿಂಗ್ ಇಡದೆ ಕೆಲಸಮಾಡಿ ಕೊಡಿ ಎಂದರು.


ಕೆಲವು ತಿಂಗಳ ಹಿಂದೆ ಲೋಕಾಯುಕ್ತರು ಭೇಟಿ ನೀಡಿದಾಗ ಬೆಳಿಗ್ಗೆ ನಗರ ಸಂಚಾರ ಮಾಡಿ ಲೋಪದೋಷಗಪಟ್ಟಿಮಾಡಿ ಕೂಡಲೇ ಸರಿಪಡಿಸುವಂತೆ ಸಲಹೆ ನೀಡಿದ್ದರು. ಅದರ ಬಗ್ಗೆ ಕೂಡ ಪರಿಶೀಲನೆ ನಡೆಸಿ ದ್ದೇನೆ. ತಾಂತ್ರಿಕ ತೊಂದರೆಯಿದ್ದರೆ ಗಮನಕ್ಕೆ ತನ್ನಿ ಎಂದರು.
ಈ ಸಂದರ್ಭದಲ್ಲಿ ಕಂದಾಯ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಕೊರತೆ ಬಗ್ಗೆ ಗಮನಕ್ಕೆ ತಂದರು ಮತ್ತು ಒತ್ತಡದ ಬಗ್ಗೆಯೂ ಮಾಹಿತಿ ನೀಡಿದರು. ಆಯುಕ್ತರು ಕೂಡ ಕಂದಾಯ ವಿಭಾಗದಲ್ಲಿ ೧೮೦ ಜನ ಸಿಬ್ಬಂದಿ ಇರುವ ಕಡೆ ಕೇವಲ ೩೫ ಜನರಿದ್ದಾರೆ. ಆದರೂ ಕೂಡ ನಾವು ಸಾಧ್ಯವಾದಷ್ಟು ತುರ್ತಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ಗಮನಕ್ಕೆ ತಂದರು.


ಲೋಕಾಯುಕ್ತ ಎಸ್‌ಪಿ ಮಾತನಾಡಿ, ಇಂದು ಸುಮಾರು ೧೫ ದೂರುಗಳು ಸಾರ್ವಜನಿಕರಿಂದ ಬಂದಿದೆ. ಗೋಪಾಳದಲ್ಲಿ ಚರಂಡಿ ಮಾಡದೆ ರಸ್ತೆ ಕಾಮಗಾರಿ ಮಾಡಲಾಗಿದೆ. ಸಂಬಂಧಪಟ್ಟ ಅಭಿಯಂತರರು ಕೂಡಲೆ ಸರಿಪಡಿಸಿಕೊಳ್ಳಿ ಇಲ್ಲವಾದರೆ ನಿಮಗೆ ಸಮಸ್ಯೆಯಾಗುತ್ತದೆ. ಕ್ರಿಮಿನಲ್ ಕೇಸ್ ಅಲ್ಲದೆ ನಿಮ್ಮ ಇಡೀ ಸೇವಾ ಅವಧಿಯಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಎಸಿಬಿಯಿಂದ ಲೋಕಾಯುಕ್ತಕ್ಕೆ ಸಾವಿರಾರು ಕೇಸ್‌ಗಳು ವರ್ಗಾವಣೆಯಾದ್ದರಿಂದ ಪರಿಶೀಲನೆಗೆ ಸಮಯ ಆಗುತ್ತಿದೆ. ಆದರೂ ಕೂಡ ನಾವು ದಿಢೀರ್ ಭೇಟಿ ನೀಡುತ್ತೇವೆ. ಬಡವರ ಕೆಲಸವನ್ನು ಕೂಡಲೆ ಮಾಡಿಕೊಡಿ ಒತ್ತುವರಿ,ಆಶ್ರಯ ಮನೆ ವಿತರಣೆ ವಿಚಾರದಲ್ಲಿ ಅನೇಕ ದೂರುಗಳು ಬರುತ್ತಿದೆ. ಈ ಬಗ್ಗೆ ತಕ್ಷಣ ಗಮನಹರಿಸಿ ಇನ್ನೊಂದು ಬಾರಿ ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ಎಲ್ಲಾ ಅರ್ಜಿಗಳ ಇಥ್ಯರ್ತಆಗಬೇಕು ಎಂದು ತಾಕೀತು ಮಾಡಿದರು. ನಿರ್ವಾಹಕ ಅಭಿಯಂತರರು ಕೆಲವೊಂದು ತಾಂತ್ರಿಕ ದೋಷದ ಬಗ್ಗೆ ಗಮನ ಸೆಳೆದರು.


ಈ ಸಂದರ್ಭದಲ್ಲಿ ನಾಗರೀಕ ಹಿತರಕ್ಷಣಾ ಸಮಿತಿಯ ವಸಂತ್‌ಕುಮಾರ್ ಅವರು ಕನ್ಸರ್‌ವೆನ್ಸಿ ಯಲ್ಲಿ ನಿರ್ಮಾಣಗೊಂಡು ೩೦ಕ್ಕೂ ಹೆಚ್ಚು ಶೌಚಾಲ ಯಗಳು ಸಾರ್ವಜನಿಕ ಉಪಯೋಗಕ್ಕೆಬಾರದೆ ವ್ಯರ್ಥವಾಗಿರುವ ಬಗ್ಗೆ ಲೋಕಾಯುಕ್ತರ ಗಮನಕ್ಕೆ ತಂದರು.


ಅಲ್ಲದೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೋಟ್ಯಾಂ ತರ ರೂ.ಗಳ ವೆಚ್ಚದಲ್ಲಿ ಪಾಲಿಕೆ ಮುಂಭಾಗದಲ್ಲಿ ಕಲ್ಲುಗಳನ್ನು ಅಳವಡಿಸಿದ್ದು, ಈ ಕಲ್ಲುಹಾಸಿನಿಂದ ಸಾರ್ವಜನಿಕರಿಗೆ ಅನಾನುಕೂಲವೆ ಜಾಸ್ತಿಯಾಗಿದೆ ಮತ್ತು ಕಾಮಗಾರಿ ಸಂದರ್ಭದಲ್ಲಿಯೇ ನಾಗರೀಕ ವೇದಿಕೆ ಎಲ್ಲಾ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಲೋಕಾಯುಕ್ತ ಎಸ್‌ಪಿ ಅವರಿಗೆ ಲಿಖಿತ ದೂರು ನೀಡಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ಮತ್ತು ಕುಡಿಯುವ ನೀರಿನ ಕಾಮಗಾರಿಗಳು ಮತ್ತು ಸ್ಮಾರ್ಟ್‌ಸಿಟಿಗೆ ಸಂಬಂಧಿಸಿದ ಕೆಲವು ದೂರುಗಳ ಬಗ್ಗೆ ಕೂಡ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಸಾರ್ವಜನಿಕರು ಕೂಡ ಅನೇಕ ಸಮಸ್ಯೆಗಳ ಬಗ್ಗೆ ದೂರು ನೀಡಿದರು. ಆಯುಕ್ತರಾದ ಮಾಯಣ್ಣಗೌಡ, ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್ ಈಶ್ವರ್‌ನಾಯ್ಕ್ ಇತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!