ಶಿವಮೊಗ್ಗ , ಸೆ.29:
ತೀರ್ಥಹಳ್ಳಿ-ಆಗುಂಬೆ ರಸ್ತೆಯ ರಂಜದ ಕಟ್ಟೆ ಎಂಬಲ್ಲಿ 129 ವರ್ಷಗಳ ಪುರಾತನ ಇತಿಹಾಸ ಇರುವ ಸೇತುವೆ ಕುಸಿದು ಬಿದ್ದಿದ್ದ ಕಾರಣದಿಂದ ಶಿವಮೊಗ್ಗ ಉಡುಪಿ ಮಂಗಳೂರಿಗೆ ಸಾಗುವ ರಸ್ತೆ ಕಡಿತವಾಗಿತ್ತು.
ಸೇತುವೆ ಕುಸಿದ ತಕ್ಷಣ ನ್ಯಾಷನಲ್ ಸಂಸ್ಥೆಯ ಇಬ್ರಾಹಿಂ ಷರೀಫ್ ಹಾಗೂ ಹೆದ್ದಾರಿ ಇಂಜಿನಿಯರ್‌ಗಳು ಕಾರ್ಯಪ್ರವತ್ತರಾಗಿ ಸರ್ಕಾರದ ಪೂರ್ವ ಅನುಮತಿ ಪಡೆದು ಕೇವಲ ಮೂರು ದಿನಗಳಲ್ಲಿ ರಾತ್ರಿ ಹಗಲು ಕಾಮಗಾರಿಯನ್ನು ನಡೆಸಿ ಶಿವಮೊಗ್ಗ, ತೀರ್ಥಹಳ್ಳಿ, ಆಗುಂಬೆ, ಮಣಿಪಾಲ, ಉಡುಪಿ, ಮಂಗಳೂರು, ಶೃಂಗೇರಿ ಗಳಿಗೆ ಹೋಗುವ ವಾಹನಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಭಾರಿ ತೂಕದ ವಾಹನಗಳಿಗೆ ನಿರ್ಬಂಧ:
ಈ ತಾತ್ಕಾಲಿಕ ಸೇತುವೆ ಮೇಲೆ ಸುರಕ್ಷತೆ ದೃಷ್ಟಿಯಿಂದ ಭಾರೀ ತೂಕದ ವಾಹನ ಮತ್ತು 10 ಚಕ್ರದ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ ಎಂದು ಹೆದ್ದಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

By admin

ನಿಮ್ಮದೊಂದು ಉತ್ತರ

error: Content is protected !!