

ಶಿವಮೊಗ್ಗ. ಮಾ.03:
ಶಿವಮೊಗ್ಗ ನಗರದ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದ ಬೀಡಾಡಿ ಕುದುರೆಗಳ ಉಪಟಳ, ಕಿರಿಕಿರಿಗೆ ಶಾಶ್ವತ ಪರಿಹಾರ ದೊರಕುವಂತಹ ವಾತಾವರಣವನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಅದರಲ್ಲೂ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ ಅವರು ತಂಡದ ಪ್ರಯತ್ನವಾಗಿ ಕರ್ತವ್ಯ ನಿರ್ವಹಿಸಿದ್ದರಿಂದ ಸೃಷ್ಟಿಯಾಗಿದೆ.

ಶಿವಮೊಗ್ಗ ನಗರದ ಬಹುತೇಕ ಕಡೆ ಅಂದರೆ ಅತಿ ಹೆಚ್ಚು ಜನರು ಸೇರುವ ಕಡೆ, ಅದರಲ್ಲೂ ರಸ್ತೆಗಳಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಬೀಡಾಡಿ ಕುದುರೆಗಳ ಉಪಟಳ ಕುರಿತಂತೆ ಸಾರ್ವಜನಿಕರು ಮಹಾನಗರ ಪಾಲಿಕೆಗೆ ಗಂಭೀರ ಆರೋಪ ಮಾಡಿದ್ದರು.
ಈ ವಿಷಯವನ್ನು ಅತ್ಯಂತ ಪ್ರಮುಖವಾಗಿ ಪರಿಗಣಿಸಿದ ಹಾಗೂ ವಾಸ್ತವವಾಗಿ ಸಮಸ್ಯೆಯನ್ನು ಪರಿಶೀಲಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ನಗರ ಪಾಲಿಕೆಯ ಆರೋಗ್ಯ ಇಲಾಖೆಯನ್ನು ಈ ಕ್ರಿಯಾಶೀಲ ಕೆಲಸಕ್ಕೆ ಅಣಿಗೊಳಿಸಿದರು.

ಮೊದಲು ಶಿವಮೊಗ್ಗ ನಗರದ ರಸ್ತೆಗಳಲ್ಲಿ ಹಾಗೂ ಹಲವೆಡೆ ಇರುವಂತಹ ಕುದುರೆಗಳ ಮಾಲೀಕರು ತಮ್ಮ ಕುದುರೆಯನ್ನು ತಮ್ಮ ವಾಸ ಸ್ಥಳದಲ್ಲಿ ಸಾಕತಕದ್ದು. ಅವುಗಳನ್ನು ಅತ್ಯಂತ ವ್ಯವಸ್ಥಿತವಾಗಿ ತಾವುಗಳು ಸಾಕಿಕೊಳ್ಳಿ. ಇಲ್ಲದಿದ್ದರೆ ಈ ಬೀಡಾಡಿ ಕುದುರೆಗಳಿಗೆಎನ್ ಜಿ ಓ ಸಂಸ್ಥೆಗಳು ವಾಸ್ತವ್ಯ ಹಾಗೂ ನೆಲೆ ನೀಡುವ ಜೊತೆಗೆ ಅವುಗಳನ್ನು ಕೃಷಿ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಕಟಣೆ ಹೊಡಿಸಿದ್ದರು.
ಪ್ರಕಟಣೆಯ ಅವಧಿ ಮುಗಿದು ಹೋಗುವ ಹೊತ್ತಿನೊಳಗೆ ಸಾಕಷ್ಟು ಕುದುರೆಗಳು ಕಡಿಮೆಯಾಗಿದ್ದವು. ನಂತರ ಕೊನೆಯ ವಾರ್ನಿಂಗ್ ಅನ್ನು ಮಹಾನಗರ ಪಾಲಿಕೆ ನೀಡಿತ್ತು. ವಿಶೇಷವಾಗಿ ಈಗ ಶಿವಮೊಗ್ಗ ನಗರದ ಎಲ್ಲೆಡೆ ಸುತ್ತಾಡಿದಾಗ ಕಂಡುಬರುವ ಬೀಡಾಡಿ ಕುದುರೆಗಳ ಸಂಖ್ಯೆ ಒಂದು ಅಥವಾ ಎರಡು ಇರಬಹುದು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಅತ್ಯಂತ ಯಶಸ್ವಿಯಾಗಿ ಇಂತಹದೊಂದು ಯೋಜನೆಯನ್ನು ರೂಪಿಸಿದ ಮಹಾನಗರ ಪಾಲಿಕೆಗೆ ಹಾಗೂ ವಿಶೇಷವಾಗಿ ಆಯುಕ್ತ ಮಾಯಣ್ಣ ಗೌಡರಿಗೆ ಮತ್ತು ಅಲ್ಲಿನ ಆರೋಗ್ಯ ವಿಭಾಗಕ್ಕೆ ಸಾರ್ವಜನಿಕರು ಅಭಿನಂದಿಸಿದ್ದಾರೆ.
